ಎದೆಯ ಮೇಲೆ ರಾಜಕಾರಣಿಯ ಟ್ಯಾಟೂ ಹಾಕಿಸಿಕೊಂಡ ವಿಜಯಪುರ ಅಭಿಮಾನಿ!

| Updated By: ಸಾಧು ಶ್ರೀನಾಥ್​

Updated on: Dec 24, 2020 | 9:46 AM

ಗುಮ್ಮಟ ನಗರಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಮುದ್ದಣ್ಣ ಪರೀಟ್ ಎಂಬ 20 ವರ್ಷದ ಯುವಕ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಚಿತ್ರವನ್ನು ಎದೆಯ ಮೇಲೆ ಬರೆಸಿಕೊಂಡಿದ್ದಾನೆ.

ಎದೆಯ ಮೇಲೆ ರಾಜಕಾರಣಿಯ ಟ್ಯಾಟೂ ಹಾಕಿಸಿಕೊಂಡ ವಿಜಯಪುರ ಅಭಿಮಾನಿ!
ಟ್ಯಾಟೂ ಹಾಕಿಸಿಕೊಂಡ ಯುವಕ
Follow us on

ವಿಜಯಪುರ: ಇತ್ತೀಚಿಗೆ ಯುವಕರಲ್ಲಿ ಟ್ಯಾಟೂ ಕ್ರೇಜ್ ಹೆಚ್ಚಾಗುತ್ತಿದೆ. ಚಿತ್ರ ವಿಚಿತ್ರ ಹಚ್ಚೆಗಳನ್ನು ಯುವಕ-ಯುವತಿಯರು ತಮ್ಮ ದೇಹದ ಮೇಲೆ ಹಾಕಿಕೊಳ್ಳುತ್ತಾರೆ. ಕೆಲವರು ದೇವರ ಫೋಟೋವನ್ನು ಟ್ಯಾಟೂ ಆಗಿ ಹಾಕಿಕೊಂಡರೆ, ಇನ್ನೂ ಕೆಲವರು ಸಿನೆಮಾ ನಟ ನಟಿಯರ ಭಾವಚಿತ್ರವನ್ನು ಟ್ಯಾಟೂ ಆಗಿ ಬಳಸುತ್ತಾರೆ.

ಆದರೆ ಇಲ್ಲೋರ್ವ ವ್ಯಕ್ತಿ ಒಂದು ಹೆಜ್ಜೆ ಮುಂದೆ ಹೋಗಿ, ವಿಧಾನ ಪರಿಷತ್ ಸದಸ್ಯರ ಚಿತ್ರವನ್ನು ಎದೆಯ ಮೇಲೆ ಟ್ಯಾಟೂ ಆಗಿ ಹಾಕಿಕೊಂಡಿದ್ದಾನೆ. ಗುಮ್ಮಟನಗರಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಮುದ್ದಣ್ಣ ಪರೀಟ್ ಎಂಬ 20 ವರ್ಷದ ಯುವಕ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಚಿತ್ರವನ್ನು ಎದೆಯ ಮೇಲೆ ಬರೆಸಿಕೊಂಡಿದ್ದಾನೆ.

ಸುನೀಲಗೌಡ ಪಾಟೀಲ್ ಅವರ ಕಟ್ಟಾ ಬೆಂಬಲಿಗ ಮುದ್ದಣ್ಣ ಪರೀಟ್. ಸುನೀಲಗೌಡ ಅವರ ಮೇಲಿನ ಅಭಿಮಾನವನ್ನು ಎದೆಯ ಮೇಲೆ ಟ್ಯಾಟೂ ಹಾಕಿಕೊಳ್ಳುವ ಮೂಲಕ ತೋರಿಸಿದ್ದಾನೆ. ನೆರೆಯ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಪಟ್ಟಣದಲ್ಲಿನ ಟ್ಯಾಟೂ ಶಾಪ್​ನಲ್ಲಿ ₹ 9,000 ಖರ್ಚು ಮಾಡಿ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಟ್ಯಾಟೂ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು, ಅವೆಲ್ಲಾ ಇದೀಗ ವೈರಲ್ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಮುದ್ದಣ್ಣ ಪರೀಟ್ ಅಭಿಮಾನಕ್ಕೆ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್ಸ್​ ಬಂದಿವೆ. ನಾನು ಸುನೀಲಗೌಡ ಪಾಟೀಲರ ಅಭಿಮಾನಿ. ಕೊನೆಯವರೆಗೂ ಅವರು ನನ್ನ ಎದೆಯ ಮೇಲೆ ಟ್ಯಾಟೂ ಮೂಲಕ ಇರುತ್ತಾರೆ ಎಂಬುದು ಮುದ್ದಣ್ಣನ ಮಾತಾಗಿದೆ.

‘ವಿದೇಶಿಗರು ಕನ್ನಡ ಅಕ್ಷರಗಳನ್ನು ಟ್ಯಾಟೂ ಹಾಕಿಸಿಕೊಂಡಾಗ ಎನ್ನೆದೆ ಉಬ್ಬುವುದು!’

Published On - 6:43 am, Thu, 24 December 20