ವಿಜಯಪುರ, ಜನವರಿ 22: ಶಾಲಾ ಕಟ್ಟಡ (building collapse) ಕುಸಿದು ಬಿದ್ದು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯವಾಗಿರುವಂತಹ ಘಟನೆ ಜಿಲ್ಲೆಯ ನಗರದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಕೈತೊಳೆಯುವ ತೊಟ್ಟಿಯ ಬಳಿ ಗೋಡೆ ಕುಸಿದು ಅವಘಡ ಸಂಭವಿಸಿದೆ. ವಿದ್ಯಾರ್ಥಿನಿ ಜುನೇರಾ ಚೋಕದಾರ್, ಹುಷ್ದಾ ಫತೇಪುರಗೆ ಗಾಯಗಳಾಗಿದ್ದು, ವಿದ್ಯಾರ್ಥಿನಿಯರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವಿದ್ಯಾರ್ಥಿನಿ ಜುನೇರಾ ತಲೆಗೆ 8 ಸ್ಟಿಚ್ ಹಾಕಲಾಗಿದೆ. ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಕಂಡುಬಂದಿದೆ.
ಇನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಕ್ಯಾನಿಂಗ್ಗೆ ಒಳಪಡಿಸಲಾಗುತ್ತಿದೆ. ಸ್ಕ್ಯಾನಿಂಗ್ ರಿಪೋರ್ಟ್ ಬಂದ ಬಳಿಕ ಮುಂದಿನ ಚಿಕಿತ್ಸೆ ನೀಡಲಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಘಟನೆಯಿಂದ ಪೋಷಕರು ಮಾತ್ರ ಆತಂಕಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: ಧಾರವಾಡ ಕರ್ನಾಟಕ ವಿವಿ ಯಿಂದ ಕರ್ನಾಟಕ ಶಿಕ್ಷಣ ನೀತಿ ಜಾರಿಗೆ ತರಲು ರಾಜ್ಯ ಸರ್ಕಾರ ಸಿದ್ಧತೆ
ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಪೋಷಕರ ಮಾಹಿತಿ ಪ್ರಕಾರ ಶಾಲಾ ಆವರಣದಲ್ಲಿ ಶಿಥಿಲವಾದ 7 ಕೊಠಡಿಗಳು ಇವೆ. ಇವುಗಳನ್ನು ನೆಲಸಮ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಂದ ಹಿಡಿದು ಬಿಇಓ ಡಿಡಿಪಿಐ ಅವರಿಗೂ ಮನವಿ ಸಲ್ಲಿಕೆ ಮಾಡಿದರು ಪ್ರಯೋಜನವಾಗಿಲ್ಲ. ಇನ್ನಾದರೂ ಇತ್ತ ಗಮನ ನೀಡಬೇಕೆಂದು ಪೋಷಕರು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಒತ್ತಾಯಿಸಿ ಮನವಿ ಮಾಡಿಕೊಂಡಿದ್ದಾರೆ.
ಆನೇಕಲ್: ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬಾಡರಹಳ್ಳಿ ಬಳಿ ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿ ಸೆಂಟ್ ಹಾನ್ಸ್ ಖಾಸಗಿ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದ ಖಾಸಗಿ ಶಾಲಾ ಕಟ್ಟಡ
ನೋಡ ನೋಡುತ್ತಿದ್ದಂತೆ ಸೆಂಟ್ರಿಂಗ್ ಸಹಿತ ಕಬ್ಬಿಣದ ಸರಳುಗಳು ಮತ್ತು ಸಿಮೆಂಟ್ ಕಾಂಕ್ರೀಟ್
ಕಾರ್ಮಿಕರ ಮೇಲೆ ಕುಸಿದು ಬಿದ್ದು, ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 17 ಜನರು ಗಂಭೀರವಾಗಿ ಗಾಯಗೊಂಡಿರುವಂತಹ ಘಟನೆ ನಡೆದಿತ್ತು.
ಇದನ್ನೂ ಓದಿ: ಧಾರವಾಡ ಕರ್ನಾಟಕ ವಿವಿಯಲ್ಲಿ 10 ವರ್ಷ ಹಿಂದಿನ ಅಕ್ರಮಗಳ ತನಿಖೆಗೆ ಮರುಜೀವ ನೀಡಿದ ರಾಜ್ಯಪಾಲ, ಆರೋಪಿಗಳ ಎದೆಯಲ್ಲಿ ಢವಢವ
ಬೆಳಗ್ಗೆ ಶಾಲಾ ಕಟ್ಟಡದ ಪೋರ್ಟಿಕಾದ ಮೋಲ್ಡ್ಗೆ ಸಿಮೆಂಟ್ ಕಾಂಕ್ರೀಟ್ ಹಾಕುವ ವೇಳೆ ಏಕಾಏಕಿ ಕುಸಿದು ಬಿದ್ದಿದೆ. ಸೆಂಟ್ರಿಂಗ್ ಸಹಿತ ಸಿಮೆಂಟ್ ಕಾಂಕ್ರೀಟ್ ಕಾರ್ಮಿಕರ ಮೇಲೆ ಕುಸಿದು ಬಿದ್ದಿದ್ದರಿಂದ ಪಶ್ಚಿಮ ಬಂಗಾಳ ಮೂಲದ ಸಾಯಿದ್ ಮಂಡಲ್ ಹಾಗೂ ಮಿನಲ್ ಬಿಸ್ಮಾಸ್ ಎಂಬ ಇಬ್ಬರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಸುಮಾರು 17 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿತ್ತು. ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕಾರ್ಮಿಕರ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಸೆಂಟ್ರಿಂಗ್ಗೆ ಕಬ್ಬಿಣದ ರಾಡ್ ಬಳಕೆ ಮಾಡಿಲ್ಲ. ಕಬ್ಬಿಣದ ಸರಳುಗಳನ್ನು ಸೂಕ್ತವಾಗಿ ಜೋಡಣೆ ಮಾಡಿಲ್ಲ. ಹಾಗಾಗಿ ನಿರ್ಲಕ್ಷ್ಯ ವಹಿಸಿದ ಅಮಾಯಕ ಕಾರ್ಮಿಕರ ಸಾವಿಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ತಿಳಿಸಿದ್ದರು.
ಮತ್ತಷ್ಟು ಮಾಹಿತಿ ಅಪ್ಡೇಟ್ ಆಗಲಿದೆ.
Published On - 5:07 pm, Mon, 22 January 24