ಮನೆಯವರ ವಿರೋಧ ಕಟ್ಟಿಕೊಂಡು ಮಹಿಳೆ ಜತೆ ಅಕ್ರಮ ಸಂಬಂಧ, ಆಕೆಯಿಂದಲೇ ಪ್ರಾಣ ತೆತ್ತ
ಮನೆಯವರ ವಿರೋಧ ಕಟ್ಟಿಕೊಂಡು ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯೋರ್ವ ಇದೀಗ ಅದೇ ಮಹಿಳೆಯಿಂದಾಗಿ ಪ್ರಾಣ ತೆತ್ತಿದ್ದಾನೆ.
ವಿಜಯಪುರ, (ಜುಲೈ 25): ವ್ಯಕ್ತಿಯೋರ್ವ ಆತ್ಮಹತ್ಯೆ (Suicide) ಮಾಡಿಕೊಳ್ಳುವುದಾಗಿ ವಾಟ್ಸಾಪ್ ಸ್ಟೇಟಸ್ ಹಾಕಿ ನೇಣಿಗೆ ಶರಣಾಗಿರುವ ಘಟನೆ ವಿಜಯಪುರ(Vijayapura) ಜಿಲ್ಲೆಯ ಸಿಂದಗಿ ತಾಲೂಕಿನ ಪಿ.ಹೆಚ್.ಬೂದಿಹಾಳ ಗ್ರಾಮದಲ್ಲಿ ನಡೆದಿದೆ. ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಹೆಸರು ಬರೆದಿಟ್ಟು ಶಿವಣ್ಣ ಚೌಧರಿ(40) ಎನ್ನುವಾತ ಪಿ.ಹೆಚ್.ಬೂದಿಹಾಳ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿಗೆ ಅನೈತಿಕ ಸಂಬಂಧವಿರುವ(illicit relationship) ಮಹಿಳೆಯೇ ಕಾರಣವೆಂದು ವಾಟ್ಸಪ್ ಸ್ಟೇಟಸ್ನಲ್ಲಿ ಮಹಿಳೆ ಫೋಟೋ ಹಾಕಿ, ಗ್ರಾಮದ ಕೆಲವರ ಹೆಸರು ಉಲ್ಲೇಖಿಸಿದ್ದಾನೆ. ಅಲ್ಲದೇ ಆಕೆಗೆ ನೀಡಿರುವ ಹಣ ನನ್ನ ತನ್ನ ಮಕ್ಕಳಿಗೆ ಕೊಡಿಸಿ ಎಂದು ವಿಡಿಯೋ ಚಿತ್ರೀಕರಿಸಿ, ಡೆತ್ನೋಟ್ ಬರೆದಿಟ್ಟಿದ್ದಾನೆ.
ಇದನ್ನೂ ಓದಿ: ಹೆಂಡತಿ ಮಕ್ಕಳಿದ್ದರೂ ಪಕ್ಕದ ಮನೆಯಾಕೆ ಜೊತೆ ಮದುವೆಗೆ ಪ್ಲಾನ್, ಪ್ರಶ್ನಿಸಿದ ಯುವತಿಯ ತಾಯಿಗೆ ಚಾಕು ಇರಿತ
ಮನೆಯವರ ವಿರೋಧ ಕಟ್ಟಿಕೊಂಡು ಆಕೆ ಜೊತೆಗಿದ್ದೆ, ಹಣವನ್ನೂ ನೀಡಿದ್ದೆ. ನನ್ನ ಬಳಿ ಹಣ ಖಾಲಿಯಾದ ಬಳಿಕ ನನ್ನನ್ನು ದೂರ ಮಾಡಿದಳೆ. ನನ್ನ ಮೂವರು ಮಕ್ಕಳು ಅನಾಥವಾದರೂ ಪರವಾಗಿಲ್ಲ, ಆಕೆಗೆ ಶಿಕ್ಷೆಯಾಗಬೇಕು. ನಾನು ಆಕೆಗೆ ನೀಡಿರುವ ಹಣ ನನ್ನ ಮಕ್ಕಳಿಗೆ ಕೊಡಿಸಿ ಎಂದು ಮನವಿ ಮಾಡಿರುವ ಶಿವಣ್ಣ, ಆಕೆ ಹಲವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾನೆ.
ಹಾಗೇ ಪಿ.ಹೆಚ್.ಬೂದಿಹಾಳ ಗ್ರಾಮದ ಕೆಲವರ ಹೆಸರು ಹೇಳಿರುವ ಶಿವಣ್ಣ ಚೌಧರಿ, ಸಿದ್ದು ವಾಲೀಕಾರ ಮಾಟಮಂತ್ರ ಮಾಡಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದಾರೆ. ಸಿದ್ದು ವಾಲೀಕಾರಗೆ ಮೊಹಮ್ಮದ್ ಸಾಬ್ ಫತೇಪುರ, ಬಾಬು ನಾಟಿಕಾರ, ಮಲಕಪ್ಪ ಸಹಾಯ ಮಾಡುತ್ತಿದ್ದಾರೆಂದು ವಿಡಿಯೋನಲ್ಲಿ ಹೇಳಿ ಬಳಿಕ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಸ್ಥಳಕ್ಕೆ ಸಿಂದಗಿ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ