ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 6 ಜನರು ನೀರುಪಾಲು, ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಜಲಸಮಾಧಿ

ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 6 ಜನರು ನೀರುಪಾಲಾಗಿರುವ ಘಟನೆ ನಡೆದಿದೆ. ಪೊಲೀಸರು ಬರುತ್ತಾರೆಂದು ಮಾಹಿತಿ ಸಿಕ್ಕ ಬೆನ್ನಲೇ ಭಯದಿಂದ ನದಿ ತಟದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಗುಂಪು ತೆಪ್ಪದ ಮೂಲಕ ತಪ್ಪಿಸಿಕೊಳ್ಳಲು ಹೋಗಿ ಜಲಸಮಾಧಿಯಾಗಿದ್ದಾರೆ. ಇಬ್ಬರು ಈಜಿ ದಡ ಸೇರಿದ್ದರೆ ಇನ್ನೂ ಆರು ಜನರು ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 6 ಜನರು ನೀರುಪಾಲು, ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಜಲಸಮಾಧಿ
ಕೃಷ್ಣ ನದಿ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Jul 02, 2024 | 8:17 PM

ವಿಜಯಪುರ, (ಜುಲೈ 02): ತೆಪ್ಪ ಮಗುಚಿ 6 ಜನರು ನೀರುಪಾಲಾಗಿರುವ ಘಟನೆ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿಯ ಕೃಷ್ಣಾ ನದಿಯಲ್ಲಿ ನಡೆದಿದೆ. ಪೊಲೀಸರು ಬರುತ್ತಾರೆಂದು ಮಾಹಿತಿ ಸಿಕ್ಕ ಬೆನ್ನಲೇ ಭಯದಿಂದ ನದಿ ತಟದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಗುಂಪು ತೆಪ್ಪದ ಮೂಲಕ ತಪ್ಪಿಸಿಕೊಳ್ಳಲು ಮುಂದಾಗಿದೆ. ಆದ್ರೆ, ದುರ್ವೈವ ಜೋರಾಗಿ ಬೀಸಿದ ಗಾಳಿಗೆ ತೆಪ್ಪ ನದಿಯಲ್ಲಿ ಮುಗುಚಿ ಬಿದ್ದಿದೆ. ಪರಿಣಾಮ ಆರು ಜನರು ಜಲಸಮಾಧಿಯಾಗಿದ್ದು, ಇನ್ನಿಬ್ಬರು ಈಜಿಕೊಂಡು ಹೋಗಿ ದಡ ಸೇರಿದ್ದಾರೆ.

ಕೃಷ್ಣ ನದಿ ತಟದಲ್ಲಿ ಗುಂಪೊಂದು ಇಸ್ಪೀಟ್ ಆಟವಾಡುತ್ತಿತ್ತು. ಸ್ಥಳಕ್ಕೆ ಪೊಲೀಸರು ಬರುತ್ತಿದ್ದಾರೆಂಬ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಯದಿಂದ ತಪ್ಪಿಸಿಕೊಳ್ಳಲು ತೆಪ್ಪದ ಮೂಲಕ ನದಿಯ ನಡುಗಡ್ಡೆಯತ್ತ ಹೊರಟ್ಟಿದ್ದಾರೆ. ಆದ್ರೆ, ದುರದೃಷ್ಟವಶಾತ್ ಜೋರಾಗಿ ಬೀಸಿದ ಗಾಳಿಗೆ ತೆಪ್ಪ ನಡು ನದಿಯಲ್ಲೇ ಮುಗುಚಿ ಬಿದ್ದಿದೆ. ಪರಿಣಾಮ ಇಬ್ಬರು ಈಜಿಕೊಂಡು ದಡ ಸೇರಿದ್ದರೆ, ಇನ್ನೂ ಆರು ಜನರು ಜಲಸಮಾಧಿಯಾಗಿದ್ದಾರೆ.

ಸ್ಥಳಕ್ಕೆ ಕೊಲ್ಹಾರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹಗಳಿಗಾಗಿ ಹುಡುಕಾಟ ನಡೆಸಿದ್ದು, ಸದ್ಯದ ಮಾಹಿತಿ ಪ್ರಕಾರ ಇಬ್ಬರ ಶವ ಹೊರ ತೆಗೆದಿದ್ದಾರೆ. ಇನ್ನುಳಿದವರ ಮೃದೇಹಗಳಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಸ್ಪಿ ಋಷಿಕೇಶ ಸೋನೆವಣೆ, ಎಎಸ್ಪಿ ಶಂಕರ ಮಾರಿಹಾರ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಒಟ್ಟಿನಲ್ಲಿ ಇಸ್ಪೀಟ್​ ಆಟದ ಚಟಕ್ಕೆ ಬಿದ್ದವರು ದುರಂತ ಅಂತ್ಯಕಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:06 pm, Tue, 2 July 24

ತಾಜಾ ಸುದ್ದಿ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ಮುಂಬೈ: ಮುಗಿಲು ಮುಟ್ಟಿದ ಸಂಭ್ರಮ: ರೋಹಿತ್​, ಕೊಹ್ಲಿ ಪರ ಫ್ಯಾನ್ಸ್​ ಘೋಷಣೆ
ಮುಂಬೈ: ಮುಗಿಲು ಮುಟ್ಟಿದ ಸಂಭ್ರಮ: ರೋಹಿತ್​, ಕೊಹ್ಲಿ ಪರ ಫ್ಯಾನ್ಸ್​ ಘೋಷಣೆ
ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಡಿಕೆಶಿ ಆಶಯಕ್ಕೆ ರಾಜಣ್ಣ ಸ್ವಾಗತ
ರಾಮನಗರ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಡಿಕೆಶಿ ಆಶಯಕ್ಕೆ ರಾಜಣ್ಣ ಸ್ವಾಗತ
ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮ
ಟೀಮ್ ಇಂಡಿಯಾ ವಿಜಯೋತ್ಸವ: ಎಲ್ಲಿ ನೋಡಿದರಲ್ಲಿ ಜನ, ಅಭಿಮಾನಿಗಳ ಸಂಭ್ರಮ
ದರ್ಶನ್​ ಈಗ ಜಾಮೀನು ಕೇಳೋಕೆ ಆಗಲ್ಲ: ಕಾರಣ ತಿಳಿಸಿದ ಲಾಯರ್​
ದರ್ಶನ್​ ಈಗ ಜಾಮೀನು ಕೇಳೋಕೆ ಆಗಲ್ಲ: ಕಾರಣ ತಿಳಿಸಿದ ಲಾಯರ್​
ಮುಂಬೈನಲ್ಲಿ ಟೀಂ ಇಂಡಿಯಾ ಭರ್ಜರಿ ರೋಡ್​ ಶೋ
ಮುಂಬೈನಲ್ಲಿ ಟೀಂ ಇಂಡಿಯಾ ಭರ್ಜರಿ ರೋಡ್​ ಶೋ
ಜಮೀನು ಬೆಲೆ ₹ 62 ಕೋಟಿ ಆಗುತ್ತೆ, ಮುಡಾ ನಮಗೆ ಹಣ ಕೊಡಲಿ: ಸಿದ್ದರಾಮಯ್ಯ
ಜಮೀನು ಬೆಲೆ ₹ 62 ಕೋಟಿ ಆಗುತ್ತೆ, ಮುಡಾ ನಮಗೆ ಹಣ ಕೊಡಲಿ: ಸಿದ್ದರಾಮಯ್ಯ
ವಾವ್​! ಮಳೆಯಿಂದಾಗಿ ಮತ್ತೆ ಜೀವ ಕಳೆ ಪಡೆದ ಸಿರಿಮನೆ ಜಲಪಾತ
ವಾವ್​! ಮಳೆಯಿಂದಾಗಿ ಮತ್ತೆ ಜೀವ ಕಳೆ ಪಡೆದ ಸಿರಿಮನೆ ಜಲಪಾತ
ಸ್ವೀಟ್​ ಅಂಗಡಿಗಳ ಮೇಲೆ ದಾಳಿ; ಪತ್ತೆಯಾಯ್ತು ಕ್ಯಾನ್ಸರ್​ ಕಾರಕ ಅಂಶ
ಸ್ವೀಟ್​ ಅಂಗಡಿಗಳ ಮೇಲೆ ದಾಳಿ; ಪತ್ತೆಯಾಯ್ತು ಕ್ಯಾನ್ಸರ್​ ಕಾರಕ ಅಂಶ
ಮುಡಾ ನೀಡಿದ್ದನ್ನೇ ಸಿಎಂ ಪತ್ನಿ ಸ್ವೀಕರಿಸಿದ್ದು ಅಪರಾಧವಾಗಿದೆ: ಪೊನ್ನಣ್ಣ
ಮುಡಾ ನೀಡಿದ್ದನ್ನೇ ಸಿಎಂ ಪತ್ನಿ ಸ್ವೀಕರಿಸಿದ್ದು ಅಪರಾಧವಾಗಿದೆ: ಪೊನ್ನಣ್ಣ