ವಿಜಯಪುರ: ಡೀಸೆಲ್(diesel) ಹಾಕಿಸಿದ್ದ ಬಾಕಿ ಹಣಕ್ಕಾಗಿ ವ್ಯಕ್ತಿಯನ್ನು ಅರೆಬೆತ್ತಲೆಗೊಳಿಸಿ ಪೆಟ್ರೋಲ್ ಬಂಕ್ನಲ್ಲಿ(petrol bunk) ಕೂಡಿಸಿದ ಅಮಾನವೀಯ ಘಟನೆ ವಿಜಯಪುರ (Vijayapura) ಜಿಲ್ಲೆಯಲ್ಲಿ ನಡೆದಿದೆ. ವಾಹನಗಳಿಗೆ ಡೀಸೆಲ್ ಹಾಕಿಸಿದ್ದ ಬಾಕಿ ಹಣ ವಸೂಲಿಗೆ ಮೌನೇಶ್ ಪತ್ತಾರ್ ಎನ್ನುವಾತನನ್ನು ಅರೆಬೆತ್ತಲೆಗೊಳಿಸಿ ಮುದ್ದೇಬಿಹಾಳ ಪಟ್ಟಣದಲ್ಲಿರುವ ಬೋಸಲೆ ಬಂಕ್ನಲ್ಲಿ ಕೂಡಿಹಾಕಿದ್ದಾರೆ. 10 ರಿಂದ 15 ಲಕ್ಷ ರೂ. ಡೀಸೆಲ್ ಬಾಕಿ ಹಣ ನೀಡುವಂತೆ ಕಳೆದ 12 ದಿನಗಳಿಂದ ಮೌನೇಶ್ ಪತ್ತಾರನನ್ನು ಅರೆಬೆತ್ತಲೆಗೊಳಿಸಿ ಬಂಕ್ನಲ್ಲೇ ಕೂಡಿ ಹಾಕಿದ್ದಾರೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ಫ್ರೀ ಪ್ರಯಾಣಕ್ಕಾಗಿ ಬಸ್ ಮೇಲೆ ‘ಶಕ್ತಿ’ ತೋರಿಸಿ ಬರೋಬ್ಬರಿ 5000 ರೂ. ದಂಡ ತೆತ್ತ ಮಹಿಳೆ
ತಮಿಳುನಾಡು ಮೂಲದ ಶಿವಶಕ್ತಿ ಬೋರ್ ವೆಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಮೌನೇಶ, ವಾಹನಗಳಿಗೆ ಬೋಸಲೆ ಅವರ ಬಂಕ್ ನಲ್ಲಿ ಡೀಸೆಲ್ ಹಾಕಿಸುತ್ತಿದ್ದ. ಆದ್ರೆ, ಶವಶಕ್ತಿ ಬೋರ್ ವೆಲ್ಸ್ನವರು ಡೀಸೆಲ್ ಬಾಕಿ ಹಣ ನೀಡದೇ ಹೋಗಿದ್ದಾರೆ. ಹೀಗಾಗಿ ಬಾಕಿ ಹಣಕ್ಕಾಗಿ ಪೆಟ್ರೋಲ್ ಬಂಕ್ ಮಾಲೀಕ, ಮೌನೇಶ್ನನ್ನು ಹಿಡಿದುಕೊಂಡಿದ್ದಾರೆ. ಅಲ್ಲದೇ ಹಣ ಕೊಡಬೇಕೆಂದು ಮೌನೇಶ್ನನ್ನು ಬಂಕ್ನಲ್ಲೇ ಕೂಡಿಹಾಕಿದ್ದಾರೆ. ಇನ್ನು ಮೌನೇಶ ಬಿಡುಗಡೆಗಾಗಿ ಆತನ ಪತ್ನಿ ಹಾಗೂ ಮಕ್ಕಳು ಕಳೆದ ಮೂರು ದಿನಗಳಿಂದ ಬೋಸಲೆ ಪೆಟ್ರೋಲ್ ಬಂಕ್ ನಲ್ಲೇ ಕುಳಿತುಕೊಂಡಿದ್ದಾರೆ.
10 ರಿಂದ 15 ಲಕ್ಷ ರೂ. ಡೀಸೆಲ್ ಬಾಕಿ ಹಣ ನೀಡುವಂತೆ ಕಳೆದ 12 ದಿನಗಳಿಂದ ಮೌನೇಶ್ ಪತ್ತಾರನನ್ನು ಅರೆಬೆತ್ತಲೆಗೊಳಿಸಿ ಬಂಕ್ನಲ್ಲೇ ಕೂಡಿ ಹಾಕಿದ್ದಾರೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸ್ ಠಾಣೆಗೂ ತೆರಳಲು ಬಿಡದೇ ಬಂಕ್ ಮಾಲೀಕರು ಮೌನೇಶ ಕುಟುಂಬಸ್ಥರನ್ನು ತಡೆಹಿಡಿದಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 12:39 pm, Mon, 26 June 23