ಫ್ರೀ ಪ್ರಯಾಣಕ್ಕಾಗಿ ಬಸ್ ಮೇಲೆ ‘ಶಕ್ತಿ’ ತೋರಿಸಿ ಬರೋಬ್ಬರಿ 5000 ರೂ. ದಂಡ ತೆತ್ತ ಮಹಿಳೆ

ಫ್ರಿಯಾಗಿ ಹೋಗಬೇಕಿದ್ದ ಮಹಿಳೆ ಬಸ್ ಮೇಲೆ 'ಶಕ್ತಿ' ತೋರಿಸಿ ಬರೋಬ್ಬರಿ 5000 ರೂ. ದಂಡ ತೆತ್ತಿರು ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಏನಿದು ಸ್ಟೋರಿ ಅಂತೀರಾ? ಇಲ್ಲಿದೆ ನೋಡಿ.

Follow us
ರಮೇಶ್ ಬಿ. ಜವಳಗೇರಾ
|

Updated on:Jun 26, 2023 | 10:03 AM

ಕೊಪ್ಪಳ: ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ​ ಮಹಿಳೆಯರಿಗೆ ಉಚಿತ ಪ್ರಯಾಣ(Free Bus Travel For Women Scheme) ಕಲ್ಪಿಸುವ ಶಕ್ತಿ ಯೋಜನೆಗೆ (Shakti Yojana) ಭಾರೀ ಸ್ಪಂದನೆ ವ್ಯಕ್ತವಾಗುತ್ತಿದೆ. ಸಹಸ್ರಾರು ಮಹಿಳಾ ಪ್ರಯಾಣಿಕರು ಉಚಿತವಾಗಿ ಸುಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಬಸ್​ಗಳು ತುಂಬಿತುಳುಕುತ್ತಿವೆ. ಇನ್ನು ಕೆಲವೆಡೆ ಪ್ರಯಾಣಿಕರು ಹಾಗೂ ಬಸ್​ ಚಾಲಕ-ನಿರ್ವಹಕರ ನಡುವೆ ಗಲಾಟೆಗಳು ನಡೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇದರ ನಡುವೆ ಇಲ್ಲೋರ್ವ ಮಹಿಳಾ(Woman) ಪ್ರಯಾಣಿರೊಬ್ಬರು ಬಸ್​ಗೆ ಕಲ್ಲೆಸಿದಿದ್ದಾಳೆ. ಹೌದು..ಬಸ್​ ನಿಲ್ಲಿಸಲಿಲ್ಲವೆಂದು ಮಳೆಯೊಬ್ಬರು ಆಕ್ರೋಶಗೊಂಡು ಬಸ್​ಗೆ ಕಲ್ಲೆಸೆದಿರುವ ಘಟನೆ ಕೊಪ್ಪಳ (Koppal) ತಾಲೂಕಿನ ಹೊಸಲಿಂಗಾಪುರ ಬಳಿ ನಿನ್ನೆ (ಜೂನ್ 25) ಸಂಜೆ ನಡೆದಿದೆ.

ಇದನ್ನೂ ಓದಿ: Fact Check: ಕಿಟಕಿಯಿಂದ ಬಸ್ ಹತ್ತುವಾಗ ಮಹಿಳೆಯ ಕೈ ಕಟ್ ಆಯಿತೇ?: ವೈರಲ್ ವಿಡಿಯೋದ ಸತ್ಯಾಸತ್ಯತೆ ಇಲ್ಲಿದೆ

ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿದ್ದ ನಾನ್ ಸ್ಟಾಪ್ ಬಸ್​ಗೆ ಇಲಕಲ್​ ಬಳಿಯ ಪಾಪನಳ್ಳಿ ನಿವಾಸಿಯಾಗಿರುವ ಲಕ್ಷ್ಮಿ ಎನ್ನುವ ಮಹಿಳೆ ಕಲ್ಲೆಸೆದಿದ್ದಾಳೆ. KA-35, F-252 ಕೊಪ್ಪಳ ಡಿಪೋದ ಬಸ್ ಗ್ಲಾಸ್​ಗೆ ಡ್ಯಾಮೇಜ್ ಆಗಿದೆ. ಇದರಿಂದ ಚಾಲಕ ಬಸ್ ಅನ್ನು ಪ್ಯಾಸೆಂಜರ್ ಸಮೇತ ಮುನಿರಾಬಾದ್ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾನೆ. ಅಲ್ಲದೇ ಡ್ರೈವರ್ ಮುತ್ತಪ್ಪ ಮಹಿಳೆ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಮಧ್ಯೆ ಪ್ರವೇಶಿಸಿ ಸಂಧಾನ ಮಾಡಿದ್ದಾರೆ.

ಬಸ್ ಡ್ಯಾಮೇಜ್ ಹಿನ್ನೆಲೆಯಲ್ಲಿ 5000 ರೂ, ದಂಡ ಕಟ್ಟುವಂತೆ ಡ್ರೈವರ್ ಹೇಳಿದ್ದಾನೆ. ಇಲ್ಲವಾದಲ್ಲಿ ಎಫ್​ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾನೆ. ಕೊನೆಗೆ ಮಹಿಳೆ ಕ್ಷಮೆ ಕೇಳಿ ಪೊಲೀಸರ ಸಮ್ಮುಖದಲ್ಲಿ 5000 ರೂ. ದಂಡ ಕಟ್ಟಿ ಅಲ್ಲಿಂದ ತೆರಳಿದ್ದಾಳೆ. ಹುಲಿಗಿ ದರ್ಶನ ಪಡೆದು ಲಿಂಗಾಪುರ ಬಳಿ ಬಸ್ ಗಾಗಿ ಕಾದು ಕುಳಿತಿದ್ದ ಲಕ್ಷ್ಮಿ, ತನ್ನ ಊರಿಗೆ ತೆರಳಲು ಯಾವೊಂದು ಬಸ್ ನಿಲ್ಲಿಸದ ಕಾರಣ ಕೋಪ ಬಂದು ಬಸ್ ಗೆ ಕಲ್ಲೆಸೆದಿದ್ದಳು.

ಒಟ್ಟಿನಲ್ಲಿ ಫ್ರೀಯಾಗಿ ಪ್ರಯಾಣ ಮಾಡಬೇಕಿದ್ದ ಮಹಿಳೆ ಬಸ್ ಮೇಲೆ ‘ಶಕ್ತಿ’ ತೋರಿಸಿ ಬರೋಬ್ಬರಿ 5000 ರೂ. ದಂಡ ತೆತ್ತಿದ್ದಾಳೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:02 am, Mon, 26 June 23

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು