ಪರ್ಮಿಶನ್ ಇಲ್ಲದೇ ಸಿಎಂ ಕಾರ್ಯಕ್ರಮಕ್ಕೆ ಜಾಗ ಬಳಕೆ: ಕೋರ್ಟ್‌ನಿಂದ ತಡೆಯಾಜ್ಞೆ ತಂದ ಬಿಜೆಪಿ ಮುಖಂಡ

ಅಖಲ ಭಾರತ 70ನೇ ಸಹಕಾರಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಸಚಿವರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಆದರೆ ಯಾವುದೇ ಮಾಹಿತಿ ನೀಡದೆ ಕಾರ್ಯಕ್ರಮಕ್ಕೆ ಸರ್ವೆ ನಂ. 52/1ರ 6.18 ಎಕರೆ, ಸರ್ವೆ ನಂ. 52/2ರ 6.24 ಎಕರೆ ಜಾಗ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ 2 ಜಾಗದ ಮಾಲೀಕ ಗೂಳಪ್ಪ ಶೆಟಗಾರ ಆರೋಪ ಮಾಡಿದ್ದು ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿದ್ದಾರೆ.

ಪರ್ಮಿಶನ್ ಇಲ್ಲದೇ ಸಿಎಂ ಕಾರ್ಯಕ್ರಮಕ್ಕೆ ಜಾಗ ಬಳಕೆ: ಕೋರ್ಟ್‌ನಿಂದ ತಡೆಯಾಜ್ಞೆ ತಂದ ಬಿಜೆಪಿ ಮುಖಂಡ
ಅಖಲ ಭಾರತ 70ನೇ ಸಹಕಾರಿ ಸಪ್ತಾಹ ಕಾರ್ಯಕ್ರಮ
Follow us
| Updated By: ಆಯೇಷಾ ಬಾನು

Updated on: Nov 20, 2023 | 6:59 AM

ವಿಜಯಪುರ, ನ.21: ವಿಜಯಪುರದ ಡಿಸಿಸಿ ಬ್ಯಾಂಕ್ (DCC Bank) ಆವರಣದಲ್ಲಿಂದು ಅಖಲ ಭಾರತ 70ನೇ ಸಹಕಾರಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಿಎಂ ಸಿದ್ದರಾಮಯ್ಯ (Siddaramaiah) ಸೇರಿದಂತೆ ಅನೇಕ ಸಚಿವರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದರ ನಡುವೆ ಇಂದಿನ ಕಾರ್ಯಕ್ರಮಕ್ಕೆ ನನ್ನ ಜಾಗವನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ವ್ಯಕ್ತಿಯೊಬ್ಬರು ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿದ್ದಾರೆ. ತಡೆಯಾಜ್ಞೆ ತಂದ ಜಾಗ ಅವರದ್ದಲ್ಲ ಎಂದು ಸಚಿವ ಶಿವಾನಂದ ಪಾಟೀಲ್ (Shivanand Patil) ಸ್ಪಷ್ಟಯನ್ನೂ ನೀಡಿದ್ದಾರೆ.

ಚೆನ್ನಮ್ಮ ನಗರದಲ್ಲಿರೋ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಅಖಲ ಭಾರತ 70ನೇ ಸಹಕಾರಿ ಸಪ್ತಾಹ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ವಿಶೇಷ ವಿಮಾನದ ಮೂಲಕ ಕೊಪ್ಪಳಕ್ಕೆ ಆಗಮಿಸಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಹಕಾರ ಖಾತೆ ಸಚಿವ ಕೆ.ಎನ್.ರಾಜಣ್ಣ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ವಿಜಯಪುರ ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಭವನ ಉದ್ಘಾಟನೆ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ 70 ಜನರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಲು ತಯಾರಿ ನಡೆದಿದೆ. ಇದರ ನಡುವೆ ಯಾವುದೇ ಮಾಹಿತಿ ನೀಡದೆ ಕಾರ್ಯಕ್ರಮಕ್ಕೆ ಭೂಮಿ ಬಳಕೆ ಆರೋಪ ಮಾಡಿ ಗೂಳಪ್ಪ ಶೆಟಗಾರ ಎಂಬುವವರು ವಿಜಯಪುರ ಜಿಲ್ಲಾ ಪ್ರಧಾನ ಸಿವಿಲ್ ಕೋರ್ಟ್​ನಿಂದ ತಡೆ ತಂದಿದ್ದಾರೆ.

ಕಾರ್ಯಕ್ರಮಕ್ಕೆ ಅಕ್ರಮ ಭೂಮಿ ಬಳಕೆ ಆರೋಪ

ತನ್ನ ಜಾಗವನ್ನು ಯಾವುದೇ ಅನುಮತಿಯನ್ನು ಪಡೆಯದೇ ಬಳಕೆ ಮಾಡಿದ್ದಾರೆ. ಅತಿಕ್ರಮಣ ಮಾಡಿದ್ದಾರೆ ಎಂದು ಆರೋಪಿಸಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಗೂಳಪ್ಪ ಶೆಟಗಾರ ಗಂಭೀರ ಆರೋಪ ಮಾಡಿದ್ದಾರೆ. ಕಾರ್ಯಕ್ರಮದ ಬಗ್ಗೆ ಯಾವುದೇ ತಕರಾರಿಲ್ಲಾ. ಆದರೆ ಕಾರ್ಯಕ್ರಮಕ್ಕೆ ನನ್ನ ಎರಡು ಜಾಗ ಅತಿಕ್ರಮಣ ಮಾಡಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲಿ ಪೆಂಡಾಲ ಹಾಕಲಾಗಿದೆ. ಸರ್ವೇ ನಂಬರ್ 52/1 ಪೈಕಿ 6.18 ಎಕರೆ ಹಾಗೂ 52/2 ಪೈಕಿ 6.24 ಎಕರೆ ಜಾಗ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ಧಾರೆ. ಈ ಕುರಿತು ವಿಜಯಪುರ ಜಿಲ್ಲಾ ಪ್ರಧಾನ ನ್ಯಾಯಾಲಯದಿಂದ ನನ್ನ ಜಾಗ ಬಳಕೆ ಮಾಡಿಕೊಳ್ಳಬಾರದು ಎಂದು ತಡೆಯಾಜ್ಞೆ ತಂದಿದ್ದೇನೆ. ಎರಡೂ ಜಾಗವನ್ನು ಎನ್ಎ ಮಾಡಿ ನಿವೇಶನ ಮಾಡಲಾಗಿದೆ, ಕೆಲ ನಿವೇಶನಗಳು ಮಾರಾಟವಾಗಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ ಕಾರ್ಯಕ್ರಮಕ್ಕಾಗಿ ನಿವೇಶನ ಮಾಡಿದ ಗುರುತಿನ ಕಲ್ಲುಗಳನ್ನು ಕಿತ್ತು ಹಾಕಿದ್ಧಾರೆ. ಮಾರಾಟವಾದ ನಿವೇಶನಗಳ ರಸ್ತೆ ಬಂದ್ ಮಾಡಿದ್ಧಾರೆಂದು ಗೂಳಪ್ಪ ಶೆಟಗಾರ ಆರೋಪ ಮಾಡಿದ್ಧಾರೆ.

ಇದನ್ನೂ ಓದಿ: ನಂಜುಂಡಸ್ವಾಮಿ, ಪ.ಮಲ್ಲೇಶ್‌ ಸಹವಾಸ ಇಲ್ಲದಿದ್ರೆ ನಾನು ರಾಜಕೀಯಕ್ಕೆ ಬರ್ತಿರಲಿಲ್ಲ: ಸಿಎಂ ಸಿದ್ದರಾಮಯ್ಯ

ಡಿಸಿಸಿ ಬ್ಯಾಂಕ್ ಆಧ್ಯಕ್ಷ ಹಾಗೂ ಸಚಿವ ಶಿವಾನಂದ ಪಾಟೀಲ್, ಬ್ಯಾಂಕ್ ಪ್ರಧಾನ ಕಾರ್ಯದರ್ಶಿ ಹಾಗೂ ಬ್ಯಾಂಕಿನ ಜನರಲ್ ಮ್ಯಾನೇಜರ್ ವಿರುದ್ದ ತಡೆಯಾಜ್ಞೆ ತಂದಿದ್ದು ಒಂದು ವೇಳೆ ಕಾರ್ಯಕ್ರಮಕ್ಕಾಗಿ ನಮ್ಮ ಜಾಗವನ್ನು ಬಳಕೆ ಮಾಡಿದರೆ ನ್ಯಾಯಾಲಯ ಆದೇಶ ಉಲ್ಲಂಘನೆ ಆಗುತ್ತದೆ. ಹಾಗೇನಾದರೂ ಆದರೆ ಮುಂದಿನ ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಇನ್ನು ಮತ್ತೊಂದೆಡೆ ಈ ಕುರಿತು ಸಚಿವ ಹಾಗೂ ಡಿಸಿಸಿ ಬ್ಯಾಂಕ್ ಆಧ್ಯಕ್ಷ ಶಿವಾನಂದ ಪಾಟೀಲ ಅವರ ಗಮನ ಸೆಳೆಯಲಾಗಿದ್ದು ಈ ಆರೋಪವನ್ನು ಅಲ್ಲಗಳೆದಿದ್ದಾರೆ. ನಾವು ನಮ್ಮ ಜಾಗದಲ್ಲಿ ಮಾತ್ರ ಕಾರ್ಯಕ್ರಮ ಮಾಡುತ್ತಿದ್ದೇವೆ. ಆರೋಪ ಮಾಡಿರುವ ವ್ಯಕ್ತಿಯಿಂದ ತಡೆಯಾಜ್ಞೆಯೂ ಇಲ್ಲಾ ಏನಿಲ್ಲ. ಅಷ್ಟಕ್ಕೂ ಆ ಜಾಗ ಗೂಳಪ್ಪ ಶೆಟಗಾರದ್ದೂ ಅಲ್ಲಾ, ಡಿಸಿಸಿ ಬ್ಯಾಂಕ್ ನವರದ್ದೂ ಅಲ್ಲಾ. ಆ ಜಾಗ ವಿಜಯಪುರ ನಗರಾಭಿವೃದ್ದಿ ಪ್ರಾಧಿಕಾರ ಜಾಗವಾಗಿದೆ. ಗೂಳಪ್ಪ ಶೆಟಗಾರಗೆ ಆ ಜಾಗವನ್ನು ಯಾರು ಬಿಡಿಸಿಕೊಟ್ಟಿದ್ಧಾರೆ ಅದನ್ನು ತನಿಖೆ ಮಾಡಿಸುವೆ ಎಂದು ಗುಡುಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ