ವಿಜಯಪುರ: ಭಾರತದ ಸಂವಿಧಾನಕ್ಕೆ ಗೌರವ ಕೊಡುವ, ದೇಶದ ಅನ್ನತಿಂದು ಭಾರತದ ಪರ ಮಾತನಾಡುವವರನ್ನ ಗೌರವಿದೆ. ಈ ದೇಶದ ಅನ್ನ ತಿಂದು ಪಾಕಿಸ್ತಾನ ಪರ ಮಾತನಾಡುವರಿಗೆ ಬಿಜೆಪಿ ವಿರೋಧಿಸುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ (Basavanagowda patil yatnal) ವಿಜಯಪುರದಲ್ಲಿ (Vijaypura) ಎಐಎಂಐಎಂ ಆಧ್ಯಕ್ಷ ಅಸಾದುದ್ದೀನ್ ಓವೈಸಿ (Akbaruddin oyc) ಹೇಳಿಕೆಗೆ ಟಾಂಗ್ ನೀಡಿದ್ದಾರೆ. ನಿನ್ನೆ (ಅ. 25) ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ವಿಜಯಪುರದಲ್ಲಿ ಅಸಾದುದ್ದೀನ್ ಓವೈಸಿ ತನ್ನ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ವೇಳೆ ದೇಶ ದ್ರೋಹಿಗಳಿಗೆ ತೊಂದರೆ ಇದೆ ಎಂದು ಪರೋಕ್ಷವಾಗಿ ಬಜೆಪಿಗೆ ಎಚ್ಚರಿಕೆ ನೀಡಿದ್ದರು. ಜೊತೆಗೆ ಹಿಜಾಬ್ ಹಾಕಿಕೊಂಡವರು ದೇಶದ ಪ್ರಧಾನಿ ಆಗುವ ಕನಸಿದೆ ಎಂಬ ಹೇಳಿಕೆಯನ್ನೂ ನೀಡಿದ್ದರು.
ಈ ವಿಚಾರವಾಗಿ ಇಂದು (ಅ. 26) ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯತ್ನಾಳ ಎಷ್ಟೋ ಮಂದಿ ದೇಶದಲ್ಲಿ ಕನಸು ಕಾಣುತ್ತಾರೆ. 2047ಕ್ಕೆ ಇಡೀ ಭಾರತವನ್ನೇ ಇಸ್ಲಾಮಿಕ್ ಮಾಡುತ್ತೇವೆಂದು ಎಸ್ಡಿಪಿಐ ಹೇಳಿತ್ತು. ಆದರೆ ಅದು ಯಾವ ಕಾಲಕ್ಕೂ ಸಾದ್ಯವಾಗಲ್ಲಾ. ನನಗೆ ಪಾಕಿಸ್ತಾನ ಮೇಲೆ ಪ್ರೀತಿ ಇದೆ ಎಂದು ಓವೈಸಿನೆ ಹೇಳಿದ್ದಾನೆ. ನನಗೆ (ಯತ್ನಾಳ) ಪಾಕಿಸ್ತಾನದ ಮೇಲೆ ಯಾಕೆ ಪ್ರೀತಿಯೆಂದರೆ, ಪಾಕಿಸ್ತಾನ ಬೇಗನೆ ಅಖಂಡ ಭಾರತದಲ್ಲಿ ಸೇರಬೇಕಿದೆ. ಧರ್ಮಾಂಧತೆ ನಾಶವಾಗಿ ಪಾಕಿಸ್ತಾನ ಹಾಗೂ ಅಫಘಾನಿಸ್ಥಾನ ಭಾರತದಲ್ಲಿ ಸೇರಬೇಕೆಂಬ ಕನಸಿದೆ ಎಂದು ಹೇಳಿದರು.
ಯತ್ನಾಳ ಮಾತು ಮಾತಿಗೆ ಪಾಕಿಸ್ತಾನ ಅನ್ನುತ್ತಾರೆ, ಪಾಕಿಸ್ತಾನದ ಬಗ್ಗೆ ಮಾತನಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೊಟ್ಟಿದ್ದರಾ? ಎಂಬ ಓವೈಸಿ ಹೇಳಿಗೆ ಪ್ರತಿಕ್ರಿಯಿಸಿದ ಅವರು ಪಾಕ್ ಬಗ್ಗೆ ಮಾತನಾಡುವಂತೆ ನನಗೆ ಪ್ರಧಾನಿ ಮೋದಿ ಹೇಳಿಲ್ಲಾ. ಓವೈಸಿ ಹಾಗೇ ಪ್ರಧಾನಿ ಮೋದಿ ಅಲ್ಲ. ಓವೈಸಿ ಪೊಲೀಸ್ ಮತ್ತು ಸೇನೆ 15 ನಿಮಿಷ ಸಮಯ ನೀಡಿದರೆ ಇಡೀ ಹಿಂದೂಗಳ ಕಗ್ಗೋಳೆ ಮಾಡುತ್ತೇವೆ ಎಂದು ಹೇಳಿದ್ದಾನೆ. ಓವೈಸಿ ಈ ದೇಶದ ಅನ್ನ ತಿಂದು, ನೀರು ಕುಡಿದು, ಸಂಸತ್ ಸದಸ್ಯನಾಗಿ ಎಲ್ಲಾ ಸೌಲಭ್ಯಗಳನ್ನು ಅನುಭವಿಸಿದ್ದಾನೆ. ದೇಶ ದ್ರೋಹದ ಮಾತನ್ನಾಡಿ ರಾಮ ಮಂದಿರ ನಾಶ ಮಾಡೋದಾಗಿ ಹೇಳುತ್ತಾನೆ. ಭವಿಷ್ಯದಲ್ಲಿ ಹಿಂದುತ್ವ ಇಡೀ ಜಗತ್ತನ್ನು ಆಳುತ್ತದೆ. ಇದಕ್ಕೆ ಮುಸ್ಲೀಂ ದೇಶಗಳಲ್ಲಿ ಹಿಂದೂ ದೇವಾಲಯ ನಿರ್ಮಾಣವಾಗುತ್ತಿರೋದೇ ಉತ್ತಮ ಉದಾಹರಣೆ ಎಂದರು.
ಮೋದಿ ಪ್ರಧಾನಿ ಆದ ಬಳಿಕ ಭಾರತದ ಒಂದಿಂಚೂ ಜಾಗ ಒತ್ತುವಾರಿ ಆಗಿಲ್ಲಾ
ಚೀನಾದವರು ಭಾರತದ ಗಡಿ ಭಾಗದ ಡೆಪ್ಸಾಂಗ್ ಹಾಗೂ ಡೆಪ್ಚಾಕ್ ಭಾಗದಲ್ಲಿ ಅತಿಕ್ರಮಣ ಮಾಡಿದ್ದಾರೆ ಎಂದು ಓವೈಸಿ ಆರೋಪ ಮಾಡಿರುವ ಕುರಿತು ಮಾತನಾಡಿದ ಅವರು ಇದು ಓವೈಸಿ ಮೂರ್ಖತನದ ಹೇಳಿಕೆ. ಮೋದಿ ಪ್ರಧಾನಿ ಆದ ಬಳಿಕ ಭಾರತದ ಒಂದಿಂಚೂ ಜಾಗ ಒತ್ತುವಾರಿ ಆಗಿಲ್ಲಾ. ಈ ಹಿಂದೆ ಅತಿಕ್ರಮಣ ಆಗಿದ್ದು ನೆಹರು ಅವರ ಕಾಲದಲ್ಲಿ. ನೆಹರು ತಪ್ಪು ನೀತಿಗಳಿಂದ ಚೀನಾದ ಯುದ್ದದಲ್ಲಿ ಸೋಲಬೇಕಾಯಿತು. ನಮ್ಮ ಸೈನಿಕರಿಗೆ ಸೂಕ್ತ ಶಸ್ತ್ರಾಸ್ತ್ರ ಹಾಗೂ ಸಲಕರಣೆಗಳು ಇರಲಿಲ್ಲಾ. ಹಿಂದೂ ಚೀನಿ ಭಾಯಿ ಭಾಯಿ ಎಂದು ಹೇಳಿ ಚೀನಾದವರು ಮೋಸ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಪುಟ ವಿಸ್ತರಣೆ ಆಗಲಿ ಬಿಡಲಿ, ನಾವಂತೂ ಅದರಾಗ ಇಲ್ಲ
ಸಚಿವ ಸಂಪುಟ ವಿಸ್ತರಣೆ ಆಗಲಿ ಬಿಡಲಿ, ನಾವಂತೂ ಅದರಾಗ ಇಲ್ಲ. ನಿನ್ನೆ (ಅ. 25) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನಗೆ ಕರೆ ಮಾಡಿದ್ದರು. ಡಿಸೆಂಬರ್ನಲ್ಲಿ ಟೆಕ್ಸ್ಟೈಲ್ ಪಾರ್ಕ್ ಉದ್ಘಾಟನೆ ಮಾಡಲು ಬರುತ್ತಿದ್ದಾರೆ. ಈ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಲಾಗುತ್ತದೆ. ವಿಜಯಪುರ ಮಹಾನಗರ ಪಾಲಿಕೆಗೆ ಹೆಚ್ಚುವರಿ 100 ಕೋಟಿ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:48 pm, Wed, 26 October 22