Booming loud sound: ವಿಜಯಪುರ ಜಿಲ್ಲೆಯಲ್ಲಿ ಜೋರಾದ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ

| Updated By: ಸಾಧು ಶ್ರೀನಾಥ್​

Updated on: Sep 20, 2022 | 2:56 PM

vijayapura: ತುಂತುರು ಮಳೆಯ ನಡುವೆಯೆ ಭೂಮಿಯಿಂದ ಜೋರಾದ ಶಬ್ದ ಕೇಳಿಬಂದಿದೆ. ಘಟನೆಯಿಂದಾಗಿ ಗಾಬರಿಗೊಂಡ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಈ ಮಧ್ಯೆ, ಭೂಕಂಪನ ಅಗಿಲ್ಲ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

Booming loud sound: ವಿಜಯಪುರ ಜಿಲ್ಲೆಯಲ್ಲಿ ಜೋರಾದ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ
Booming loud sound: ವಿಜಯಪುರ ಜಿಲ್ಲೆಯಲ್ಲಿ ಜೋರಾದ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ
Follow us on

ವಿಜಯಪುರ: ವಿಜಯಪುರ (vijayapura) ಜಿಲ್ಲೆಯಲ್ಲಿ ಜೋರಾದ ಶಬ್ದದೊಂದಿಗೆ ( booming loud sound) ಭೂಮಿ ಕಂಪಿಸಿದ (earthquake) ಅನುಭವವಾಗಿದೆ. ನಿರ್ದಿಷ್ಟವಾಗಿ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ (Tikota village) ಮಧ್ಯಾಹ್ನ 2-04 ಗಂಟೆ ವೇಳೆಯಲ್ಲಿ, ಈ ಭಾರೀ ಶಬ್ದ ಕೇಳಿ ಬಂದಿದೆ. ಭೂ ಕಂಪನದ ಅನುಭವವಾಗುತ್ತಿದ್ದಂತೆ, ಜನ ಭಯಗೊಂಡಿದ್ದಾರೆ. ತಿಕೋಟಾ ತಾಲೂಕಿನ ಬಾಬಾನಗರ, ಬಿಜ್ಜರಗಿ, ಕಳ್ಳಕವಟಗಿ, ಘೋಣಸಗಿ ಸುತ್ತಮುತ್ತ ಈ ಭೂಕಂಪನದ ಅನುಭವವಾಗಿದೆ.

ತುಂತುರು ಮಳೆಯ ನಡುವೆಯೆ ಭೂಮಿಯಿಂದ ಜೋರಾದ ಶಬ್ದ ಕೇಳಿಬಂದಿದೆ. ಘಟನೆಯಿಂದಾಗಿ ಗಾಬರಿಗೊಂಡ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಈ ಮಧ್ಯೆ, ಭೂಕಂಪನ ಅಗಿಲ್ಲ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಬೆಂಗಳೂರಿನ ಆಧಿಕಾರಿಗಳೂ ಸಹ ಈ ಮಾಹಿತಿಹಯನ್ನು ದೃಢಪಡಿಸಿದ್ದಾರೆ.