AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಸ್​ ಯಡಿಯೂರಪ್ಪರನ್ನು ಜೈಲಿಗೆ ಕಳಿಸಿದ್ದು ಮಗ ವಿಜಯೇಂದ್ರ; ಹೆಚ್​ ವಿಶ್ವನಾಥ್ ವಾಗ್ದಾಳಿ

ಹಿರಿಯ ರಾಜಕಾರಣಿ ಹೆಚ್​. ವಿಶ್ವನಾಥ್ ಅವರು ಶಾಸಕ ಬಸನ್​ಗೌಡ ಪಾಟೀಲ್​ ಯತ್ನಾಳ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೂ ಬಿ.ಎಸ್​. ಯಡಿಯೂರಪ್ಪನವರನ್ನು ಜೈಲಿಗೆ ಕಳುಸಿದ್ದು ವಿಜಯೇಂದ್ರ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬಿಎಸ್​ ಯಡಿಯೂರಪ್ಪರನ್ನು ಜೈಲಿಗೆ ಕಳಿಸಿದ್ದು ಮಗ ವಿಜಯೇಂದ್ರ; ಹೆಚ್​ ವಿಶ್ವನಾಥ್ ವಾಗ್ದಾಳಿ
ಬಿಜೆಪಿ ಎಂಎಲ್​ಸಿ ಹೆಚ್.ವಿಶ್ವನಾಥ್
TV9 Web
| Edited By: |

Updated on: Dec 17, 2023 | 1:56 PM

Share

ವಿಜಯಪುರ, ಡಿ.17: ನಿರಾಣಿ (Murugesh Nirani) ವಿರುದ್ದ ವಾಗ್ದಾಳಿ ನಡೆಸಿದ ಯತ್ನಾಳ್ (Basanagouda Patil Yatnal) ವಿರುದ್ಧ ವಿಜಯಪುರ ನಗರದಲ್ಲಿ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್ (H Vishwananth) ಆಕ್ರೋಶ ಹೊರ ಹಾಕಿದ್ದಾರೆ. ಹಾಗೂ ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ವಿರುದ್ದವೂ ಕಿಡಿಕಾರಿದ್ದು ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪನವರನ್ನು (BS Yediyurappa) ಜೈಲಿಗೆ ಕಳುಸಿದ್ದು ವಿಜಯೇಂದ್ರ ಎಂದಿದ್ದಾರೆ. ಈ ಮೂಲಕ ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದು ಕಾಂಗ್ರೆಸ್ ಮೇಲಿರುವ ಒಲವನ್ನು ವ್ಯಕ್ತಪಡಿಸಿದ್ದಾರೆ.

ಬಿಎಸ್​ ಯಡಿಯೂರಪ್ಪ ಸೇರಿದಂತೆ ಸ್ವಪಕ್ಷದ ವಿರುದ್ಧವೇ ಕಿಡಿಕಾಡುವ ಶಾಸಕ ಬಸನ್​ಗೌಡ ಪಾಟೀಲ್​ ಯತ್ನಾಳ್ ಅವರು ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ನನ್ನ ವಿರುದ್ಧ ಮಾತನಾಡಲೆಂದೇ ಬಿ.ವೈ. ವಿಜಯೇಂದ್ರ ಕೆಲವು ಹಂದಿ ಹಾಗೂ ಬೀದಿನಾಯಿಗಳನ್ನು ಬಿಟ್ಟಿದ್ದಾನೆ ಎಂದಿದ್ದರು. ಈ ಹಂದಿ, ಬೀದಿ ನಾಯಿಗಳ ಬಗ್ಗೆ ಕೇಳಬೇಡಿ. ಅದಕ್ಕೆಲ್ಲಾ ಉತ್ತರ ಕೊಡಲು ಆಗಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ಮುರುಗೇಶ್​ ನಿರಾಣಿ ಬಗ್ಗೆ ಮಾತನಾಡಿದ್ದರು. ಸದ್ಯ ಈಗ ಈ ಬಗ್ಗೆ ಹೆಚ್​. ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು ಯತ್ನಾಳ್​ಗೆ ತಿರುಗೇಟು ನೀಡಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ಹುಚ್ಚ, ಯತ್ನಾಳ ಮಾತಿಗೆ ರಾಜ್ಯದ ಯಾರೂ ಬೆಲೆ ಕೊಡಬೇಡಿ. ಯತ್ನಾಳ್ ರಾಜಕಾರಣಕ್ಕೆ ಅಪವಾದ. ತನ್ನದೇ ಜಾತಿಯ, ತನ್ನದೇ ಪಾರ್ಟಿಯ ಮುಖಂಡರಿಗೆ ಹಂದಿ, ನಾಯಿ ಅನ್ನುತ್ತಾರೆ. ನಾಚಿಕೆ ಆಗಲ್ವಾ ಇವನಿಗೆ, ನಿನೊಬ್ಬ ನಾಯಕನಾ? ಮುಂದಿನ ಯುವ ಪೀಳಿಗೆಗೆ ನೀನು ಕೊಡುವ ಸಂದೇಶವಾದರೂ ಏನು? ಅಯೋಗ್ಯ ತನಕ್ಕೆ ಒಂದು ಮಿತಿ ಬೇಕು ಎಂದು ಹೆಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಸಿದ್ದರಾಮಯ್ಯ ಭ್ರಷ್ಟಾಚಾರಿಯ ರಕ್ಷಣೆಗೆ ನಿಂತಿರುವುದು ದುರಂತ: ಯತ್ನಾಳ್ ಟ್ವೀಟ್

ಯಡಿಯೂರಪ್ಪರನ್ನು ಜೈಲಿಗೆ ಕಳಿಸಿದ್ದು ವಿಜಯೇಂದ್ರ

ಇನ್ನು ಮತ್ತೊಂದೆಡೆ ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಹೆಚ್​. ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ. ಬಿ.ಎಸ್​.ಯಡಿಯೂರಪ್ಪನವರಿಗೆ ಜೈಲಿಗೆ ಕಳುಸಿದ್ದು ಯಾರು? ಯಡಿಯೂರಪ್ಪ ಮುಖ್ಯಮಂತ್ರಿ ‌ಇದ್ದಾಗಲೇ ಇದೇ ಅವರ ಮಗ ಅವರಿಗೆ ಜೈಲಿಗೆ ಕಳುಹಿಸಲಿಲ್ಲವಾ? ಅಪ್ಪನ‌ ಸಹಿ ಮಾಡಿ ತಂದೆಯನ್ನೇ ಜೈಲಿಗೆ ಕಳುಹಿಸಲಿಲ್ಲವಾ. 20 ಕೋಟಿ‌ ಲಂಚ ಆರ್​ಟಿಜಿಎಸ್ ಮೂಲಕ ತೆಗೆದುಕೊಳ್ಳಲಿಲ್ಲವಾ. ಒಬ್ಬ ಪೆದ್ದ, ಲಂಚಕೋರ ರಾಜ್ಯದ ಬಿಜೆಪಿ ಅಧ್ಯಕ್ಷನಾ ಅವನು. ನಾನು ಬಿಜೆಪಿಯಲ್ಲಿ‌ ಇರಬಹುದು ಆದರೆ ನನ್ನ ಮನಸ್ಸು ಬೇರೆ ಎನ್ನುವ ಮೂಲಕ ಹೆಚ್​ ವಿಶ್ವನಾಥ್ ಅವರು ಕಾಂಗ್ರೆಸ್ ಬಗ್ಗೆ ಒಲವು ತೋರಿಸಿದ್ದಾರೆ.

ರಾಜ್ಯದ ಪಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ