ರಾಹುಲ್​ ಗಾಂಧಿ, ಸಿದ್ದರಾಮಯ್ಯ ವಿರುದ್ಧ ಅವಾಚ್ಯ ಶಬ್ಧ ಬಳಕೆ: ಯತ್ನಾಳ್​ ವಿರುದ್ಧ ದೂರು

| Updated By: ವಿವೇಕ ಬಿರಾದಾರ

Updated on: Oct 19, 2024 | 11:07 AM

ಅಕ್ಟೋಬರ್​ 15 ರಂದು ವಿಜಯಪುರ ನಗರದಲ್ಲಿ ವಕ್ಫ್​ ಹಠಾವೋ ದೇಶ ಬಚಾವೋ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಭಾಷಣ ಮಾಡುವ ಭರದಲ್ಲಿ ಸಂಸದ ರಾಹುಲ್​ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್​ ಅಹ್ಮದ್​ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದರು.

ರಾಹುಲ್​ ಗಾಂಧಿ, ಸಿದ್ದರಾಮಯ್ಯ ವಿರುದ್ಧ ಅವಾಚ್ಯ ಶಬ್ಧ ಬಳಕೆ: ಯತ್ನಾಳ್​ ವಿರುದ್ಧ ದೂರು
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Follow us on

ವಿಜಯಪುರ, ಅಕ್ಟೋಬರ್​ 19: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi), ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಸಚಿವ ಜಮೀರ್ ಅಹ್ಮದ್ (Zameer Ahmed)​ ಖಾನ್​ ವಿರುದ್ಧ ಅವಾಚ್ಯ ಪದಬಳಸಿ ಭಾಷಣ ಮಾಡಿದ್ದ ಹಿನ್ನೆಲೆಯಲ್ಲಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ (Basangouda Patil Yatnal) ವಿರುದ್ಧ ವಿಜಯಪುರದ ಗಾಂಧಿ ಚೌಕ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಾಲಿಕೆ ನಾಮ‌ನಿರ್ದೇಶಿತ ಸದಸ್ಯ ಪರಶುರಾಮ ಹೊಸಮನಿ ಎಂಬುವರು ದೂರು ನೀಡಿದ್ದಾರೆ.

ಅಕ್ಟೋಬರ್​ 15 ವಿಜಯಪುರದ ಸಿದ್ದೇಶ್ವರ ಗುಡಿ ಹತ್ತಿರ ನಡೆದ “ವಕ್ಫ್​ ಹಠಾವೋ ದೇಶ ಬಚಾವೋ” ಕಾರ್ಯಕ್ರಮದಲ್ಲಿ ಭಾಷಣ ಮಾಡುವ ಭರದಲ್ಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್​ ಅಹ್ಮದ್​ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ಮುಸ್ಲಿಂ ಧರ್ಮಕ್ಕೆ ನಿಂದನೆ ಮಾಡಿದ್ದಾರೆ.

ಇದನ್ನೂ ಓದಿ: ಅವರ ಅಪ್ಪನಿಗೆ ಯಾರಾದರು ಹುಟ್ಟಿರುವವರು ಸಿಡಿ ಬಿಡುಗಡೆ ಮಾಡಲಿ: ಯತ್ನಾಳ್​ ಸವಾಲ್​

ಜೊತೆಗೆ ನಗರದ ಶಾಂತಿ ನಗರದ ಶಾಂತಿ ಸೌಹಾರ್ಧವನ್ನು ಕೆಡಿಸುವ ದುರುದ್ದೇಶದಿಂದ ಸಾರ್ವಜನಿಕವಾಗಿ ಇತರೆ ಧರ್ಮದವರನ್ನು ಹಿಯ್ಯಾಳಿಸಿ ಮಾತನಾಡಿ ಮತ್ತು ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಎಲ್ಲರಿಗೂ ಮಾನಸಿಕ ನೋವನ್ನುಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಬಂಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ವಿರುದ್ಧ​ ಭಾರತೀಯ ನ್ಯಾಯ ಸಂಹಿತೆ 2023 ರ (U/s-352,353(2)) ಕಲಂ ಅಡಿ ದೂರು ದಾಖಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ