ವಿಜಯಪುರ, ನ.27: ನಾಯಿಗಳ ದಾಳಿಗೆ ನಾಲ್ಕು ಬಾಲಕರು ಗಾಯಗೊಂಡ ಘಟನೆ ವಿಜಯಪುರ (Vijayapura) ನಗರದಲ್ಲಿ ನಡೆದಿದೆ. ಮಕ್ಕಳು ಮನೆಯಾಚೆ ಬಂದಿದ್ದ ವೇಳೆ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ನಗರದ ಬಡೀಕಮಾನ್ ಬಳಿ ನಾಯಿಗಳ ಪ್ರತ್ಯೇಕ ಎರಡು ದಾಳಿಗಳು ನಡೆದಿವೆ. ಮನೆಯಿಂದ ಹೊರಗೆ ಬಂದಿದ್ದ ವೇಳೆ ಬಾಲಕರನ್ನು ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿವೆ. ನಾಯಿ ಕಡಿತದಿಂದ ದಾಳಿಗೊಳಗಾದ ಬಾಲಕರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ: ನಾಯಿ ದಾಳಿ ಪ್ರಕರಣ: ‘ಮತ್ತೆ ಹೀಗೆ ಆಗದಂತೆ ಎಚ್ಚರ ವಹಿಸುತ್ತೇನೆ’; ಪೊಲೀಸ್ ಠಾಣೆಗೆ ಬಂದು ದರ್ಶನ್ ಹೇಳಿಕೆ
ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಜನರು ಬೇಸತ್ತಿದ್ದಾರೆ. ಹೀಗಾಗಿ ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಜನರು ಒತ್ತಾಯಿಸುತ್ತಿದ್ದಾರೆ.
ಇತ್ತೀಚೆಗೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಳ ಟೌನ್ನಲ್ಲಿ ಹುಚ್ಚು ನಾಯಿ ದಾಳಿಗೆ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇನ್ಸ್‌ಪೆಕ್ಟರ್ ಶಶಿಧರ್ ನೇತೃತ್ವದಲ್ಲಿ ನಾಯಿ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸುವಷ್ಟರಲ್ಲಿ ಸಾರ್ವಜನಿಕರು ಆ ನಾಯಿಯನ್ನು ಹೊಡೆದು ಕೊಂದು ಹಾಕಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ