ವಿಜಯಪುರದ ಐತಿಹಾಸಿಕ ಸ್ಮಾರಕಗಳು ಹೇಗಿವೆ? ಹೆಚ್ಕೆ ಪಾಟೀಲ್ ಜೊತೆ ಕನ್ನಡದಲ್ಲೇ ಮಾತನಾಡಿದ ಅಮೇರಿಕದ ಪ್ರಜೆಗಳು
ಅಮೇರಿಕದ ಪ್ರಜೆಗಳು ವಿಜಯಪುರದ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು. ಈ ವೇಳೆ ವಿಜಯಪುರದ ಜಿಲ್ಲಾಧಿಕಾರಿ ಕಚೇರಿಯಿಂದ ಹೊರ ಬಂದ ಸಚಿವ ಎಚ್ಕೆ ಪಾಟೀಲ್ ಅವರನ್ನು ಭೇಟಿಯಾದ ಪ್ರವಾರಿಗರೊಂದಿಗೆ ಸಚಿವರು ಕನ್ನಡದಲ್ಲೇ ಮಾತನಾಡಿದರು. ಇದಕ್ಕೆ ಪ್ರವಾಸಿಗರು ಕೂಡ ಕನ್ನಡದಲ್ಲೇ ಮಾತನಾಡಿ ಗಮನಸೆಳೆದರು.
ವಿಜಯಪುರ, ನ.21: ಜಿಲ್ಲಾ ಪ್ರವಾಸದಲ್ಲಿರುವ ಅಮೇರಿಕಾದ ನ್ಯೂಯಾರ್ಕ್ ನಗರದ ಇಬ್ಬರು ಪ್ರಜೆಗಳು ಕನ್ನಡದಲ್ಲಿ ಮಾತನಾಡುವ ಮೂಲಕ ಸಚಿವ ಎಚ್ಕೆ ಪಾಟೀಲ್ (HK Patil) ಅವರ ಮನಗೆದ್ದರು. ವಿದೇಶಿ ಪ್ರಜೆಗಳ ಕನ್ನಡ ಪ್ರೀತಿ ಕಂಡು ಸಚಿವರು ನಾಳೆ ಬೆಳಿಗ್ಗೆ ಉಪಹಾರಕ್ಕೆ ಆಹ್ವಾನಿಸಿದರು.
ಹೌದು, ನ್ಯೂಯಾರ್ಕ್ ನಗರದ ಪ್ರಜೆಗಳಾದ ರಿಚರ್ಡ್ ಹಾಗೂ ನ್ಯಾನ್ಸಿ ಅವರು ವಿಜಯಪುರದ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಣೆ ಮಾಡಿದ್ದಾರೆ. ಈ ವೇಳೆ ವಿಜಯಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ನಂತರ ಕಚೇರಿಯಿಂದ ಹೊರಬಂದ ಸಚಿವ ಎಚ್ಕೆ ಪಾಟೀಲರು, ರಿಚರ್ಡ್ ಮತ್ತು ನ್ಯಾನ್ಸಿ ಅವರನ್ನು ಭೇಟಿಯಾದರು.
ಇದನ್ನೂ ಓದಿ: ಬೇಸಿಗೆಯಲ್ಲಿ ಕುಡಿಯುವ ನೀರಿ ಸಮಸ್ಯೆ: ಗದಗದಲ್ಲಿ ಆತಂಕ ಹೊರಹಾಕಿದ ಸಚಿವ ಹೆಚ್ಕೆ ಪಾಟೀಲ್
ಭೇಟಿ ವೇಳೆ, ಐತಿಹಾಸಿಕ ಸ್ಮಾರಕಗಳ ಹೇಗಿವೆ ಎಂದು ಎಚ್ ಕೆ ಪಾಟೀಲ್ ಕೇಳಿದರು. ಇದಕ್ಕೆ ರಿಚರ್ಡ್ ಮತ್ತು ನ್ಯಾನ್ಸಿ ಅವರು ಕನ್ನಡದಲ್ಲೇ ಉತ್ತರಿಸಿದರು. ಅಲ್ಲದೆ, ವಿಜಯಪುರ, ಮೈಸೂರು, ರಾಯಚೂರು ಹಾಗೂ ಕರ್ನಾಟಕದ ಬಗ್ಗೆ ಕನ್ನಡದಲ್ಲೇ ತಮ್ಮ ಅನಿಸಿಕೆಗಳನ್ನು ರಿಚರ್ಡ್ ತಿಳಿಸಿದರು.
ಕನ್ನಡ ಚೆನ್ನಾಗಿದೆ, ವಿಜಯಪುರ ಚೆನ್ನಾಗಿದೆ, ಸ್ಮಾರಕಗಳು ಚೆನ್ನಾಗಿವೆ ಎಂದು ಅಮೇರಿಕಾದ ಪ್ರಜೆಗಳು ಹೇಳಿದರು. ಇವರ ಕನ್ನಡ ಪ್ರೇಮಕಂಡು ಸಂತಸ ವ್ಯಕ್ತಪಡಿಸಿದ ಸಚಿವರು, ನಾಳೆ ಬೆಳಿಗ್ಗೆ ತಮ್ಮ ಜೊತೆಗೆ ಉಪಹಾರಕ್ಕೆ ಬರುವಂತೆ ಆಹ್ವಾನ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ