ಗುಮ್ಮಟನಗರಿ ವಿಜಯಪುರದಲ್ಲಿ ಮತ್ತೊಮ್ಮೆ ಕಂಪಿಸಿದ ಭೂಮಿ; ಆತಂಕದಲ್ಲಿ ಜಿಲ್ಲೆಯ ಜನ
ವಿಜಯಪುರ ಜಿಲ್ಲೆಯಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.4ರಷ್ಟು ಕಂಪನದ ತೀವ್ರತೆ ದಾಖಲಾಗಿದೆ. ಈ ವರ್ಷದಲ್ಲಿ ಇದು ಎರಡನೇ ಬಾರಿಗೆ ಆಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ವಿಜಯಪುರ: ಜಿಲ್ಲೆಯಲ್ಲಿ ಮತ್ತೊಮ್ಮೆ ಭೂಕಂಪನ(Earthquake)ವಾಗಿದೆ. ತಡರಾತ್ರಿ 1:38ರ ಸುಮಾರಿಗೆ ವಿಜಯಪುರ ತಾಲೂಕಿನ ಐನಾಪುರ, ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣ ಹಾಗೂ ಸುತ್ತಮುತ್ತಲೂ ಹಲವೆಡೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.4ರಷ್ಟು ಕಂಪನದ ತೀವ್ರತೆ ದಾಖಲಾಗಿದೆ. ಈ ಕುರಿತು ವಿಜಯಪುರ ಜಿಲ್ಲಾಡಳಿತ ಖಚಿತಪಡಿಸಿದೆ. ಇಂತಹ ಘಟನೆಗಳು ಜಿಲ್ಲೆಯಲ್ಲಿ ಹಲವು ಬಾರಿ ನಡೆದಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಭೂಕಂಪನ ತಜ್ಞರು ಹೇಳಿದ್ದು, ಜಿಲ್ಲೆಯ ಆಲಮಟ್ಟಿ ಜಲಾಶಯವಿರುವುದರಿಂದ ಇದು ಸಾಮನ್ಯವಾಗಿದೆ ಎಂದಿದ್ದಾರೆ.
ಈ ಹಿಂದೆ ಹಲವು ಬಾರಿ ಕಂಪಿಸಿದ್ದ ಭೂಮಿ
ಕಳೆದ ಏಪ್ರಿಲ್ 21 ರಂದು ರಾತ್ರಿ 10.45ರ ಸುಮಾರಿಗೆ ದೊಡ್ಡ ಶಬ್ದದೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಭೂಮಿ ಕಂಪಿಸಿತ್ತು. ಇದರಿಂದ ಗಾಬರಿಗೊಂಡಿದ್ದ ಜನರು ಮನೆಗಳಿಂದ ಹೊರಬಂದು ನಿಂತುಕೊಂಡಿದ್ದರು. ಹಿಂದೆ ಈ ರೀತಿ ಭೂಮಿ ಕಂಪಿಸಿದ್ದರೂ ಈ ರೀತಿಯಾಗಿ ಶಬ್ದ ಬಂದಿರಲಿಲ್ಲವೆಂದಿದ್ದರು. ಇನ್ನು ಕಳೆದ 2 ವರ್ಷಗಳಿಂದ ಜಿಲ್ಲೆಯಲ್ಲಿ ಭೂಕಂಪನವಾಗುತ್ತಾ ಬಂದಿದೆ.
ಇದನ್ನೂ ಓದಿ:Vijayapura Earthquake: ವಿಜಯಪುರದಲ್ಲಿ ಮತ್ತೆ ಭೂಕಂಪನದ ಅನುಭವ: ಪದೇ ಪದೇ ಕಂಪನದಿಂದ ಆತಂಕಗೊಂಡ ಹಳ್ಳಿ ಜನ
ಇನ್ನು ಜಿಲ್ಲೆಯಲ್ಲಿ ಆಲಮಟ್ಟಿ ಜಲಾಶಯವಿರುವ ಕಾರಣ ಭೂಕಂಪನವಾಗುವುದು ಸಹಜ, ಇದಕ್ಕೆ ಹೆದರುವ ಅವಶ್ಯಕತೆಯಿಲ್ಲ ಎಂದು ಭೂಕಂಪನ ತಜ್ಞರು ಪರಿಶೀಲನೆ ನಡೆಸಿ, ಹೇಳಿದ್ದರು. ಆದರೂ, ಸಹ ಮಾರನೇ ದಿನವೂ ವಿಜಯಪುರ ನಗರದ ಹಲವು ಕಡೆ ಭೂಕಂಪನ ಅನುಭವನ್ನು ಸಾರ್ವಜನಿಕರು ಅನುಭವಿಸಿದ್ದರು. ಇದಾದ 2 ತಿಂಗಳ ನಂತರ ಇದೀಗ ಮತ್ತೆ ಭೂಕಂಪನವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ