ಪಂಪ್ಸೆಟ್ ಆನ್ ಮಾಡುವಾಗ ವಿದ್ಯುತ್ ಸ್ಪರ್ಶದಿಂದ ಬಾವಿಗೆ ಬಿದ್ದು ಅಣ್ಣ-ತಮ್ಮ ಜಲಸಮಾಧಿ
ತೋಟದ ಬಾವಿಯ ಪಂಪ್ ಸೆಟ್ ಆನ್ ಮಾಡಲು ಹೋದಾಗ ವಿದ್ಯುತ್ ತಗುಲಿದ ಕಾರಣ ಅವಘಡ ಜರುಗಿದೆ. ಅಣ್ಣ ಮುದ್ದುಗೌಡ ಪಂಪ್ ಸೆಟ್ ಆನ್ ಮಾಡಲು ಹೋದಾಗ ವಿದ್ಯುತ್ ತಗುಲಿದೆ. ಇದನ್ನು ಬಿಡಿಸಲು ಬಂದ ಕಿರಿಯ ಸಹೋದರ ಶಿವರಾಜ್‌ಗೂ ವಿದ್ಯುತ್ ತಗುಲಿದೆ. ವಿದ್ಯುತ್ ತಗುಲಿದ ಕಾರಣ ಇಬ್ಬರೂ ಸಹೋದರರು ಬಾವಿಯಲ್ಲಿ ಬಿದ್ದಿದ್ದಾರೆ.

ವಿಜಯಪುರ: ಇಂಡಿ ತಾಲೂಕಿನ ಭತಗುಣಕಿ ಗ್ರಾಮದ ಬಳಿ ತೋಟದಲ್ಲಿ ಪಂಪ್ಸೆಟ್ ಆನ್ ಮಾಡುವಾಗ ವಿದ್ಯುತ್ ಸ್ಪರ್ಶದಿಂದ ಬಾವಿಗೆ ಬಿದ್ದು ಅಣ್ಣ-ತಮ್ಮ ಜಲಸಮಾಧಿಯಾಗಿದ್ದಾರೆ. ಬಸವರಾಜ ಪಾಟೀಲ್(24) ಮತ್ತು ಶಿವರಾಜ ಪಾಟೀಲ್(20) ಮೃತರು. ನೀರೆತ್ತುವ ಪಂಪ್ ಸೆಟ್ನಿಂದ ವಿದ್ಯುತ್ ತಗುಲಿ ಬಾವಿಯಲ್ಲಿ ಬಿದ್ದು ಅಣ್ಣ ತಮ್ಮ ಮೃತಪಟ್ಟಿದ್ದಾರೆ. ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೋಟದ ಬಾವಿಯ ಪಂಪ್ ಸೆಟ್ ಆನ್ ಮಾಡಲು ಹೋದಾಗ ವಿದ್ಯುತ್ ತಗುಲಿದ ಕಾರಣ ಅವಘಡ ಜರುಗಿದೆ. ಅಣ್ಣ ಮುದ್ದುಗೌಡ ಪಂಪ್ ಸೆಟ್ ಆನ್ ಮಾಡಲು ಹೋದಾಗ ವಿದ್ಯುತ್ ತಗುಲಿದೆ. ಇದನ್ನು ಬಿಡಿಸಲು ಬಂದ ಕಿರಿಯ ಸಹೋದರ ಶಿವರಾಜ್‌ಗೂ ವಿದ್ಯುತ್ ತಗುಲಿದೆ. ವಿದ್ಯುತ್ ತಗುಲಿದ ಕಾರಣ ಇಬ್ಬರೂ ಸಹೋದರರು ಬಾವಿಯಲ್ಲಿ ಬಿದ್ದಿದ್ದಾರೆ. ಇಬ್ಬರು ಸಹೋದರರ ಶವಗಳನ್ನು ಭಾರೀ ಸಾಹಸಪಟ್ಟು ಅಗ್ನಿಶಾಮಕ ದಳ, ಪೊಲೀಸರು ಹಾಗೂ ಸ್ಥಳೀಯರು ಹೊರ ತೆಗೆದಿದ್ದಾರೆ. ಸ್ಥಳದಲ್ಲಿ ಮೃತರ ಯುವಕರ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.
ಬೃಹತ್ ಪೈಪು ಮೈಮೇಲೆ ಬಿದ್ದು ಕಾರ್ಮಿಕ ಸಾವು: ಕಾರವಾರ: ಬೃಹತ್ ಪೈಪು ಮೈಮೇಲೆ ಬಿದ್ದು ಬಿಹಾರ ಮೂಲದ ಕಾರ್ಮಿಕ ಸಾವಿಗೀಡಾಗುದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹನುಮಾಪುರ ಗ್ರಾಮದ ಬಳಿ ಘಟನೆ ನಡೆದಿದೆ. ರಾಜು ಯಾದವ್ (38) ಮೃತಪಟ್ಟ ದುರ್ದೈವಿ. ಏತ ನೀರಾವರಿ ಯೋಜನೆಗೆ ಬಳಸುತ್ತಿದ್ದ ಪೈಪು ಕಾಮಗಾರಿ ವೇಳೆ ಆಕಸ್ಮಿಕವಾಗಿ ಮೈಮೇಲೆ ಬಿದ್ದು ಕಾರ್ಮಿಕ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ಮುಂಡಗೋಡ ಪೊಲೀಸ್ಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮುಂಡಗೋಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೂ ಓದಿ: ಕೋಮು ಸಾಮರಸ್ಯ ಕದಡಲು ಪೊಲೀಸ್ ವೈಫಲ್ಯ ಕಾರಣವಾ? ಪೊಲೀಸರು ತಡವಾಗಿ ಎಚ್ಚೆತ್ತರಾ? ಟಿವಿ 9 ಡಿಜಿಟಲ್ ಲೈವ್ನಲ್ಲಿ ಚರ್ಚೆ
Published On - 6:24 pm, Tue, 12 April 22