ವಿಜಯಪುರದಲ್ಲಿ ಗುರು ಕೊಟ್ಟೂರೇಶ್ವರರ ರಥೋತ್ಸವ.. ಕೊಟ್ಟೂರು ದೊರೆಯೇ ನಿನಗಾರು ಸರಿಯೇ ಎಂದ ಭಕ್ತರು
ಭಕ್ತರು ಜಾತ್ರೆಗಾಗಿ ನೂರಾರು ಕೀಲೋಮೀಟರ್ಗಳಿಂದ ಪಾದಯಾತ್ರೆಯ ಮೂಲಕವೇ ಬರುತ್ತಾರೆ. ತಮ್ಮ ಇಷ್ಟಾರ್ಥ ಈಡೇರಿದ ಭಕ್ತರು ಕಾಲ್ನಡಿಗೆಯಲ್ಲಿ ಶ್ರೀಕ್ಷೇತ್ರಕ್ಕೆ ಬಂದು ಗುರು ಕೊಟ್ಟೂರೇಶ್ವರನ ಕೃಪೆಗೆ ಪಾತ್ರರಾದರೆ ಇನ್ನೂ ಕೆಲ ಭಕ್ತರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಪಾದಯಾತ್ರೆ ಮಾಡುತ್ತಾರೆ.

ವಿಜಯಪುರ: ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಗುರು ಕೊಟ್ಟೂರೇಶ್ವರ ಜಾತ್ರೆ ಅದ್ದೂರಿಯಾಗಿ ನಡೆಯಿತು. ಆದರೆ ಈ ವರ್ಷ ಕೊರೊನಾ ಕಾರಣಕ್ಕೆ ಸರ್ಕಾರದ ಕೆಲವೊಂದು ನಿಯಮಗಳು ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿತ್ತು. ಜಿಲ್ಲೆಯ ಶ್ರೀಕ್ಷೇತ್ರ ಕೊಟ್ಟೂರಿನಲ್ಲಿ ಪವಾಡ ಪುರುಷರಾಗಿರುವ ಶ್ರೀಗುರು ಕೊಟ್ಟೂರೇಶ್ವರ ರಥೋತ್ಸವ ಜರುಗಿತು. ಅತಿ ಎತ್ತರದ ತೇರು ಶ್ರೀಕ್ಷೇತ್ರದಲ್ಲಿ ಮೂಲ ನಕ್ಷತ್ರ ದಿನ ಲಕ್ಷಾಂತರ ಭಕ್ತರ ಸಮೂಹದಲ್ಲಿ ರಥವನ್ನು ಎಳೆಯಲಾಯಿತು. ಈ ರಥೋತ್ಸವವನ್ನ ಕಣ್ಣು ತುಂಬಿಕೊಳ್ಳಲು ಎರಡು ಕಣ್ಣು ಸಾಲುವುದಿಲ್ಲ. ಅಪಾರ ಭಕ್ತರು ಕೊಟ್ಟೂರೇಶ್ವರಗೆ ಆಗಮಿಸಿ ಪವಾಡ ಪುರುಷನ ಕೃಪೆಗೆ ಪಾತ್ರರಾದರು.
ರಥೋತ್ಸವಕ್ಕೆ ರಾಜ್ಯ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಭಕ್ತರು ಆಗಮಿಸಿದರು. ಶ್ರೀಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಭಕ್ತರು ತಾವು ಬೇಡಿಕೊಳ್ಳುವ ಇಷ್ಟಾರ್ಥಗಳು ಶ್ರೀ ಗುರು ಕೊಟ್ಟೂರೇಶ್ವರ ಈಡೇರಿಸುತ್ತಾನೆ ಎನ್ನುವ ನಂಬಿಕೆ ಪ್ರತಿಯೊಬ್ಬ ಭಕ್ತರದ್ದು. ಭಕ್ತರು ಜಾತ್ರೆಗಾಗಿ ನೂರಾರು ಕೀಲೋಮೀಟರ್ಗಳಿಂದ ಪಾದಯಾತ್ರೆಯ ಮೂಲಕವೇ ಬರುತ್ತಾರೆ. ತಮ್ಮ ಇಷ್ಟಾರ್ಥ ಈಡೇರಿದ ಭಕ್ತರು ಕಾಲ್ನಡಿಗೆಯಲ್ಲಿ ಶ್ರೀಕ್ಷೇತ್ರಕ್ಕೆ ಬಂದು ಗುರು ಕೊಟ್ಟೂರೇಶ್ವರನ ಕೃಪೆಗೆ ಪಾತ್ರರಾದರೆ ಇನ್ನೂ ಕೆಲ ಭಕ್ತರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಪಾದಯಾತ್ರೆ ಮಾಡುತ್ತಾರೆ. ಪಾದಯಾತ್ರೆಯ ಮೂಲಕ ಶ್ರೀಕ್ಷೇತ್ರ ಆಗಮಿಸಿದ ಭಕ್ತರಿಗೆ ತಂಪು ಪಾನೀಯ, ಪ್ರಸಾದ ನೀಡುತ್ತಾರೆ. ಜಾತಿ ಮತ ಪಂಥ ಭೇದ ಭಾವವಿಲ್ಲದೇ ಭಕ್ತರು ಆಗಮಿಸುತ್ತಾರೆ.
ದಲಿತ ಮಹಿಳೆಯಿಂದ ಕಳಸದಾರತಿ, ಧೂಪದಾರತಿ ನಡೆಯುತ್ತದೆ. ಪವಾಡಗಳ ಮೂಲಕ ಎಲ್ಲಾ ಭಕ್ತರ ಆರಾಧ್ಯ ದೈವರಾಗಿರುವ ಗುರು ಕೊಟ್ಟೂರೇಶ್ವರ ರಥೋತ್ಸವಕ್ಕಿಂತ ಮುಂಚೆಯೇ ಸ್ವಾಮಿಯ ಮೂರ್ತಿಯನ್ನ ಬೆಳ್ಳಿ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ. ದಿನವಿಡಿ ಉಪವಾಸ ಇರುವ ದಲಿತ ಮಹಿಳೆ ಪಲ್ಲಕ್ಕಿಯಲ್ಲಿರುವ ಸ್ವಾಮಿಗೆ ಕಳಸದಾರತಿ, ಧೂಪದಾರತಿ ಮಾಡುತ್ತಾರೆ.

ಜಾತ್ರೆಯಲ್ಲಿ ನೂಕುನುಗ್ಗಲು
ದಲಿತ ಮಹಿಳೆ ಆರತಿ ಮಾಡಿದ ಬಳಿಕ ಪಲ್ಲಕ್ಕಿ ಉತ್ಸವ ತೇರು ಬಜಾರ್ ಮೂಲಕ ಸಾಗಿ ರಥೋತ್ಸವ ಜರುಗುವ ಸ್ಥಳಕ್ಕೆ ಬರುತ್ತದೆ. ಆಗ ನಂದಿಕೋಲು, ಮತ್ತಿತರ ವಾದ್ಯಗಳು ರಥೋತ್ಸವಕ್ಕೆ ಮೆರಗು ತರುತ್ತವೆ. ಪಲ್ಲಕ್ಕಿಯನ್ನ ರಥದ ಸುತ್ತಲೂ ಐದು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ರಥದ ಒಳಗೆ ಸ್ವಾಮಿಯನ್ನ ಕೊಂಡೊಯ್ಯಲಾಗುತ್ತದೆ. ಇನ್ನು ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆಯೇ ಭಕ್ತರು ಕೊಟ್ಟೂರು ದೊರೆಯೇ ನಿನಗಾರು ಸರಿಯೇ, ಸರಿ ಸರಿ ಅಂದವರ ಹಲ್ಲುಮುರಿವೆ ಬಹುಪರಾಕ್ ಅಂತಾ ಘೋಷಣೆ ಮುಗಿಲು ಮುಟ್ಟುವಂತೆ ಕೂಗಿ ಬಾಳೆ ಹಣ್ಣುಗಳನ್ನ ರಥಕ್ಕೆ ಎಸೆದು ಭಕ್ತಿ ಸಮರ್ಪಿಸುತ್ತಾರೆ.

ಶ್ರೀ ಗುರು ಕೊಟ್ಟೂರೇಶ್ವರ

ಪಾದಯಾತ್ರೆ ಮೂಲಕ ಗುರುಕೊಟ್ಟೂರೇಶ್ವರ ರಥೋತ್ಸವಕ್ಕೆ ಆಗಮಿಸಿದ ಭಕ್ತರು
ಇದನ್ನೂ ಓದಿ