ವಿಜಯಪುರ ಜಿಲ್ಲೆಯ ವಿವಿಧ ಪಕ್ಷದ ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ

ಲ್ಲಾ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದು, ಈ ವೇಳೆ ತಮ್ಮ ಆಸ್ತಿ ವಿವರವನ್ನ ತಿಳಿಸುತ್ತಿದ್ದಾರೆ. ಅದರಂತೆ ವಿಜಯಪುರ ಜಿಲ್ಲೆಯ ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ ಹೀಗಿದೆ.

ವಿಜಯಪುರ ಜಿಲ್ಲೆಯ ವಿವಿಧ ಪಕ್ಷದ ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ ಇಲ್ಲಿದೆ
ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​
Follow us
ಕಿರಣ್ ಹನುಮಂತ್​ ಮಾದಾರ್
|

Updated on: Apr 19, 2023 | 3:04 PM

ವಿಜಯಪುರ: ವಿಧಾನಸಭೆ ಚುನಾವಣೆಗೆ(Karnataka Assembly Election)ಈಗಾಗಲೇ ಉಭಯ ಪಕ್ಷಗಳು ಅಭ್ಯರ್ಥಿಗಳನ್ನ ಘೋಷಿಸಿದ್ದು, ಚುನಾವಣಾ ಕಾವು ಜೋರಾಗಿದೆ. ಎಲ್ಲಾ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದು, ಈ ವೇಳೆ ತಮ್ಮ ಆಸ್ತಿ ವಿವರವನ್ನ ತಿಳಿಸುತ್ತಿದ್ದಾರೆ. ಅದರಂತೆ ವಿಜಯಪುರ ಜಿಲ್ಲೆಯ ಪ್ರಮುಖ ಅಭ್ಯರ್ಥಿಗಳ ಆಸ್ತಿ ವಿವರ ಹೀಗಿದೆ.

ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ ಆಸ್ತಿ ಮಾಹಿತಿ

ವಿಜಯಪುರ ನಗರ ಕ್ಷೇತ್ರದ ಹಾಲಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ 6,81,32,842 ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ 3,04,30,893 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ 9,85,63,740 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಯತ್ನಾಳ್​ ಹೆಸರಿನಲ್ಲಿ 35 ಲಕ್ಷ ರೂಪಾಯಿ ಬೆಲೆಯ ಟೊಯೋಟಾ ಫಾರ್ಚೂನರ್ ಕಾರ್, 50 ಗ್ರಾಂ ಬಂಗಾರ, 2 ವಜ್ರದುಂಗುರ ಇದೆ. ಜೊತೆಗೆ ಸ್ಥಿರಾಸ್ತಿಯಾಗಿ ಕೃಷಿ, ಕೃಷಿಯೇತರ ಭೂಮಿ ವಾಣಿಜ್ಯ ಕಟ್ಟಡವಿದೆ. ಹಾಗೆಯೇ 6,39,38,293 ಕೋಟಿ ರೂಪಾಯಿ ಸಾಲವಿದೆ. ಇನ್ನು ಪತ್ನಿ ಶೈಲಜಾ ಅವರ ಹೆಸರಿನಲ್ಲಿ 3,49,92,016 ಕೋಟಿ ರೂಪಾಯ ಮೌಲ್ಯದ ಚರಾಸ್ತಿ, 1,37,97,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು 4,87,89,016 ರೂಪಾಯಿ ಮೌಲ್ಯದ ಆಸ್ತಿ ಇದೆ. ಜೊಯತೆ 2,36,58,337 ರೂಪಾಯಿ ಸಾಲವಿದೆ. ಹಿರಿಯ ಪುತ್ರ ರಾಮನಗೌಡ ಪಾಟೀಲ ಯತ್ನಾಳ ಹೆಸರಿನಲ್ಲಿ 3,20,70,907 ರೂಪಾಯಿ ಮೌಲ್ಯದ ಚರಾಸ್ಥಿ, 45,39,097 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹಾಗೂ 3,66,12,506 ರೂಪಾಯಿ ಸಾಲವಿದೆ. ಇನ್ನು ಎರಡನೇ ಪುತ್ರ ಆದರ್ಶಗೌಡ ಪಾಟೀಲ್​ ಯತ್ನಾಳ್​ ಹೆಸರಿನಲ್ಲಿ 5,67,02,212 ರೂಪಾಯಿ ಮೌಲ್ಯದ ಚರಾಸ್ಥಿ, 35,61,541 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹಾಗೂ 5,60,23,633 ರೂಪಾಯಿ ಸಾಲವಿದೆ.

ಬಸವನಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಆಸ್ತಿ ವಿವರ

ಶಿವಾನಂದ ಪಾಟೀಲ್ ಒಟ್ಟು 23.75 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. 1.80 ಲಕ್ಷ ರೂ. ನಗದು ಹಣ, ವಿವಿಧ ಹೂಡಿಕೆ, ವಾಹನಗಳು, 350 ಗ್ರಾಂ ಚಿನ್ನಾಭರಣ 1ಕೆಜಿ ಬೆಳ್ಳಿ ಸೇರಿದಂತೆ 10,33,95,349 ರೂಪಾಯಿ ಮೌಲ್ಯದ ಚರಾಸ್ತಿ. ಕೃಷಿ ಭೂಮಿ, ಕೃಷಿಯೇತರ ಭೂಮಿ ಕಟ್ಟಡ ಸೇರಿದಂತೆ 13,41,42,325 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಜೊತೆಗೆ 3,58,95,307 ರೂಪಾಯಿ ಸಾಲವಿದೆ. ಇನ್ನು ಪತ್ನಿ ಭಾಗ್ಯಶ್ರೀ ಪಾಟೀಲ್ ಹೆಸರಲ್ಲಿ 500 ಗ್ರಾಂ ಚಿನ್ನಾಭರಣ 5ಕೆಜಿ ಬೆಳ್ಳಿ ಹಾಗೂ ವಾಹನ, ಹೂಡಿಕೆ ಸೇರಿದಂತೆ 1,32,46,459 ರೂ. ಮೌಲ್ಯದ ಚರಾಸ್ತಿ. 10,31,28,305 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದ್ದು, 11,59,537 ರೂಪಾಯಿ ಸಾಲವಿದೆ.

ಇಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ್ ಆಸ್ತಿ ವಿವರ

ಯಶವಂತರಾಯಗೌಡ ಪಾಟೀಲ್ 6.47 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ. ಇಂಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ್ ಚರ ಹಾಗೂ ಸ್ಥಿರಾಸ್ತಿ ಸೇರಿದಂತೆ 6,47,61,77 ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ವಿವಿಧ ಹೂಡಿಕೆ, ವಾಹನ, ಚಿನ್ನಾಭರಣ ಸೇರಿದಂತೆ 1,93,10,779 ರೂಪಾಯಿ ಮೌಲ್ಯದ ಚರಾಸ್ತಿಯಿದ್ದು, ಕೃಷಿ ಭೂಮಿ ಕೃಷಿಯೇತರ ಭೂಮಿ ಕಟ್ಟಡ ಸೇರಿದಂತೆ 4,54,51,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ. ಜೊತೆಗೆ 2,01,90,417 ರೂ.ಪಾಯಿ ಸಾಲವಿದ್ದು, 7,63,434 ರೂಪಾಯಿ ನಗದು ಬಳಿಯಿದೆ. ಇನ್ನು ಪತ್ನಿ ಹೆಸರಲ್ಲಿ 9,32,315 ರೂ. ಮೌಲ್ಯದ ಚರಾಸ್ತಿ. ಪುತ್ರ ವಿಠಲಗೌಡ ಪಾಟೀಲ್ ಹೆಸರಲ್ಲಿ 41,48,415 ರೂಪಾಯಿ ಮೌಲ್ಯದ ಚರಾಸ್ತಿ. 4,62,56,812 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದ್ದು, 56,91,523 ರೂಪಾಯಿ ಸಾಲವಿದೆ.

ಇದನ್ನೂ ಓದಿ:Rahul Gandhi: ರಾಹುಲ್ ಪ್ರಧಾನಿ ಆಗುವವರೆಗೆ ಸಾಲ ನೀಡುವುದಿಲ್ಲ -ಪಾನ್ ಶಾಪ್‌ನಲ್ಲಿ ಹಾಕಿರುವ ಈ ಪೋಸ್ಟರ್ ರಾಹುಲ್ ಪರ ಇದೆಯೋ ಅಥವಾ ವಿರುದ್ಧವಾ?​

ಬಸವನಬಾಗೇವಾಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಕೆ ಬೆಳ್ಳುಬ್ಬಿ

ಬಸವನಬಾಗೇವಾಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿಗಿಂತ ಅವರ ಪತ್ನಿಯೇ ಹೆಚ್ಚಿನ ಶ್ರೀಮಂತರಾಗಿದ್ದಾರೆ. ಎಸ್.ಕೆ ಬೆಳ್ಳುಬ್ಬಿ ಹೆಸರಲ್ಲಿ ಬ್ಯಾಂಕ್ ಠೇವಣಿ, ಷೇರು, 25 ಲಕ್ಷ ರೂಪಾಯಿ ಮೌಲ್ಯದ ಆಭರಣ ಸೇರಿದಂತೆ 27,63,352 ರೂಪಾಯಿ ಮೌಲ್ಯದ ಚರಾಸ್ತಿ. 1.62 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ 1,89,63,352 ರೂಪಾಯಿ ಮೌಲ್ಯದ ಆಸ್ತಿಯಿದೆ. ಎಸ್.ಕೆ ಬೆಳ್ಳುಬ್ಬಿ 75 ಲಕ್ಷ ರೂಪಾಯಿ ಸಾಲ ಹೊಂದಿದ್ದಾರೆ. ಪತ್ನಿ ಕಸ್ತೂರಿಬಾಯಿ ಬೆಳ್ಳುಬ್ಬಿ ಹೆಸರಲ್ಲಿ 30.50 ಲಕ್ಷ ರೂಪಾಯಿ ಬೆಲೆಯ ಆಭರಣ ಸೇರಿ 31,00,958 ರೂಪಾಯಿ ಮೌಲ್ಯದ ಚರಾಸ್ತಿ. 2 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಸೇರಿ 2,31,00,958 ರೂಪಾಯಿ ಮೌಲ್ಯದ ಆಸ್ತಿ ಇದೆ. ಇನ್ನು ಕಸ್ತೂರಿಬಾಯಿ ಬೆಳ್ಳುಬ್ಬಿ 30.50 ಲಕ್ಷ ರೂಪಾಯಿ ಸಾಲವಿದೆ.

ವಿಜಯಪುರ ನಗರ ಕ್ಷೇತ್ರದ ಕಾಂಗ್ರೆಸ್ ಅಬ್ದುಲ್ ಹಮೀದ್ ಮುಶ್ರೀಫ್

ವಿಜಯಪುರ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ 3.8ಕೋಟಿ ರೂಪಾಯಿ ಆಸ್ತಿ ಒಡೆಯರಾಗಿದ್ದಾರೆ. ಅಬ್ದುಲ್ ಹಮೀದ್ ಮುಶ್ರೀಫ್ ಅವರು 3,82,05,022 ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. 4,32,154 ರೂಪಾಯಿ ನಗದು, ಹೂಡಿಕೆ, ವಾಹನ ಸೇರಿ 1,70,77,805 ರೂಪಾಯಿ ಮೌಲ್ಯದ ಚರಾಸ್ತಿ. ವಿವಿಧೆಡೆ ಕೃಷಿ ಭೂಮಿ, ಕೃಷಿಯೇತರ ಭೂಮಿ ಸೇರಿದಂತೆ 2,11,27,217 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇನ್ನು ಇವರು 19,10,257 ರೂಪಾಯಿ ಸಾಲಗಾರರಾಗಿದ್ದಾರೆ. ಅಬ್ದುಲ್ ಹಮೀದ್ ಪತ್ನಿ ಮೋಬಿನಾ ಬಾನು ಹೆಸರಲ್ಲಿ 13,76,925 ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ 15,22,000 ರೂಪಾಯಿ ಮೌಲ್ಯದ ಸ್ಥಿರಾಸ್ಥಿ ಇದೆ. ಮೊದಲ ಪುತ್ರ ಕನಾನ್ ಮುಶ್ರೀಫ್ ಹೆಸರಲ್ಲಿ 53,12,500 ರೂಪಾಯಿ ಮೌಲ್ಯದ ಚರಾಸ್ತಿ. 1,79,66,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಜೊತೆಗೆ 18,88,653 ರೂಪಾಯಿ ಸಾಲ ಇದೆ. ಎರಡನೇ ಪುತ್ರ ಸೋಯಬ್ ಮುಶ್ರೀಫ್ ಹೆಸರಲ್ಲಿ 3,40,533 ರೂಪಾಯಿ ಚರಾಸ್ತಿ. 99,95,500 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹಾಗೂ 24,20,743 ರೂಪಾಯಿ ಸಾಲ ಇದೆ. ಇನ್ನು ಮೂರನೇ ಪುತ್ರ ಪೈಜಾನ್ ಮುಶ್ರೀಫ್ ಹೆಸರಲ್ಲಿ 2,53,437 ರೂಪಾಯಿ ಮೌಲ್ಯದ ಚರಾಸ್ತಿ. 20 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ. 5,05,227 ರೂಪಾಯಿ ಮೌಲ್ಯದ ಚರಾಸ್ತಿ ಇದೆ.

ನಾಗಠಾಣ ಎಸ್ಸಿ ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದೇವಾನಂದ ಚೌವ್ಹಾಣ್

ನಾಗಠಾಣ ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದೇವಾನಂದ ಚೌವ್ಹಾಣ್​ಗಿಂತ ಅವರ ಪತ್ನಿ ಸುನೀತಾ ಹೆಚ್ಚಿನ ಆಸ್ತಿವಂತರಾಗಿದ್ದಾರೆ. ದೇವಾನಂದ ಚೌವ್ಹಾಣ್ ಹೆಸರಲ್ಲಿ 90 ಲಕ್ಷ ರೂಪಾಯಿ ಮೌಲ್ಯದ ಬೆಂಜ್ ಕಾರ್, 8.50 ಲಕ್ಷ ರೂಪಾಯಿ ಬೆಲೆಯ ಜೀಪ್, 46.12 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 13.28 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳು, ಇತರೆ ಹೂಡಿಕೆ ಸೇರಿದಂತೆ 1,80,20,325 ರೂಪಾಯಿ ಮೌಲ್ಯದ ಚರಾಸ್ತಿ. 1,28,40,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 3,08,60,326 ರೂಪಾಯಿ ಮೌಲ್ಯದ ಆಸ್ತಿ ಇದೆ. ದೇವಾನಂದ ಚೌವ್ಹಾಣ್ 3.15 ಲಕ್ಷ ರೂಪಾಯಿ ಸಾಲ ಹೊಂದಿದ್ದಾರೆ. ಇನ್ನು ಪತ್ನಿ ಸುನೀತಾ ಚೌವ್ಹಾಣ್ ಹೆಸರಲ್ಲಿ 57.65 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 9.13 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳು 45 ಲಕ್ಷ ರೂಪಾಯಿ ಬೆಲೆಯ ಸ್ಕೋಡಾ ಕಾರ್ ಸೇರಿದಂತೆ 1,62,13,016 ರೂಪಾಯಿ ಮೌಲ್ಯದ ಚರಾಸ್ತಿ, 1,61,05,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದ್ದು, 2,19,73,511 ರೂಪಾಯಿ ಸಾಲವನ್ನ ಹೊಂದಿದ್ದಾರೆ. ಮೊದಲ ಪುತ್ರ ಅಭಿನವ್ ಚೌವ್ಹಾಣ್ ಹೆಸರಲ್ಲಿ 12,13,800 ರೂಪಾಯಿ ಚರಾಸ್ತಿ ಹಾಗೂ ಪುತ್ರಿ ಕೀರ್ತಿ ಚೌವ್ಹಾಣ್ ಹೆಸರಲ್ಲಿ 50,47,318 ರೂಪಾಯಿ ಮೌಲ್ಯದ ಚರಾಸ್ತಿ ಇದ್ದು, 4.90 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ. ಹಾಗೇ 16,32,751 ರೂಪಾಯಿ ಸಾಲವಿದೆ.

ಇದನ್ನೂ ಓದಿ:Happiest State: ಈ ರಾಜ್ಯವು ಭಾರತದ ‘ಅತ್ಯಂತ ಸಂತೋಷದಾಯಕ’ ಎಂದು ಹೇಳುತ್ತಿದೆ ಅಧ್ಯಯನ

ನಾಗಠಾಣ ಎಸ್ಸಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಠಲ್ ಕಟಕದೊಂಡ

ನಾಗಠಾಣ ಎಸ್ಸಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಠಲ್ ಕಟಕದೊಂಡಗೆ ಒಟ್ಟು 4 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಿದೆ. 20 ಗ್ರಾಂ ಚಿನ್ನ 44 ಲಕ್ಷ ರೂಪಾಯಿ ಬೆಲೆಯ ಫಾರ್ಚುನರ್ ಕಾರ್, ವಿವಿಧ ಹೂಡಿಕೆ ಸೇರಿದಂತೆ 72.70 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿ, 3.30 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ. ಇದರ ಜೊತೆಗೆ ವಿಠಲ್ ಕಟಕದೊಂಡಗೆ 20 ಲಕ್ಷ ರೂಪಾಯಿ ಸಾಲ ಇದೆ. ಪತ್ನಿ ರೇಣುಕಾ ಹೆಸರಲ್ಲಿ 1.35 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ. 33.25 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದ್ದು, ವಿಠಲ್ ಪುತ್ರಿ ಸುಪರ್ಣಾ ಹೆಸರಲ್ಲಿ 3.65 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ 30 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ.

ದೇವರಹಿಪ್ಪರಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ್ ಸಾಸನೂರು

ದೇವರಹಿಪ್ಪರಗಿ ಕ್ಷೇತ್ರದ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಕ್ 5 ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಒಡೆಯರಾಗಿದ್ದಾರೆ. ಸೋಮನಗೌಡ ಪಾಟೀಲ್ ಸಾಸನೂರ 5,04,0,502 ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ವಾಹನ, ಹೂಡಿಕೆ ಸೇರಿದಂತೆ 1,48,20,402 ರೂಪಾಯಿ ಮೌಲ್ಯದ ಚರಾಸ್ತಿ. ಕೃಷಿ, ಕೃಷಿಯೇತರ ಭೂಮಿ ಸೇರಿದಂತೆ 3,56,00,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ. ಸೋಮನಗೌಡರ ಪತ್ನಿ ಸುಷ್ಮಾ ಹೆಸರಲ್ಲಿ 40.73 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ 11 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ. ಪುತ್ರ ಸಂಗನಗೌಡ ಪಾಟೀಲ್ ಹೆಸರಲ್ಲಿ 32,17,665 ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ 9 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದ್ದು, ಪುತ್ರಿ ಪೂಜಾ ಪಾಟೀಲ್ ಹೆಸರಲ್ಲಿ 18,72,931 ರೂಪಾಯಿ ಮೌಲ್ಯದ ಚರಾಸ್ತಿ ಇದೆ.

ಬಬಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್

ಬಬಲೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ್​ಗೆ 14.45 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ವಿಜುಗೌಡ ಪಾಟೀಲ ಹೆಸರಲ್ಲಿ ವಾಹನ, 62 ಲಕ್ಷ ರೂ.ಬೆಲೆಯ ಬಂಗಾರ, ಹೂಡಿಕೆ ಸೇರಿದಂತೆ 5,79,29,554 ರೂ. ಮೌಲ್ಯದ ಚರಾಸ್ತಿ. ಕೃಷಿ, ಕೃಷಿಯೇತರ ಭೂೂಮಿ ಸೇರಿದಂತೆ 8,66,50,000 ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ಪ್ರೀತಿ ಪಾಟೀಲ್ ಹೆಸರಲ್ಲಿ 3.86 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ 1.10 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ.

ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಎಸ್ ಪಾಟೀಲ್ ನಡಹಳ್ಳಿ ಆಸ್ತಿ ವಿವರ

ಎ.ಎಸ್ ಪಾಟೀಲ್​ ನಡಹಳ್ಳಿ 63,73,15,911 ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಮಿನರಲ್ಸ್ ಕಂಪನಿ, ರೆಸಾರ್ಟ್, ಮತ್ತಿತರ ಕಡೆ ಹೂಡಿಕೆ, ವಜ್ರ, ಬಂಗಾರ, ಮರ್ಸಿಡಿಸ್ ಬೆಂಜ್ ಕಾರ್ ಸೇರಿದಂತೆ 27,23,15,911 ರೂಪಾಯಿ ಮೌಲ್ಯದ ಚರಾಸ್ತಿ. ಕೃಷಿ ಭೂಮಿ, ಬೆಂಗಳೂರಿನಲ್ಲಿ ವಸತಿ, ವಾಣಿಜ್ಯ ಕಟ್ಟಡ ಸೇರಿದಂತೆ 36,50,00,000 ರೂಪಾಯಿ ಮೌಲ್ಯದ ಸ್ಥಿರಾಸ್ತಿಯಿದೆ. ಜೊತೆಗೆ 11,58,46,187 ರೂಪಾಯಿ ಸಾಲವಿದೆ. ಪತ್ನಿ ಮಹಾದೇವಿ ಹೆಸರಲ್ಲಿ ಬಂಗಾರ, ವಾಹನ, ಹೂಡಿಕೆ ಸೇರಿದಂತೆ 14,60,72,205 ರೂಪಾಯಿ ಮೌಲ್ಯದ ಚರಾಸ್ತಿಯಿದೆ. 16,12,00,000 ರೂಪಾಯಿ ಮೊತ್ತದ ಸ್ಥಿರಾಸ್ತಿ ಇದ್ದು, 10,94,32,252 ರೂಪಾಯಿ ಸಾಲವನ್ನು ನಡಹಳ್ಳಿ ಪತ್ನಿ ಮಹಾದೇವಿ ಹೊಂದಿದ್ದಾರೆ. ಇನ್ನು ಹಿರಿಯ ಪುತ್ರ ಭರತ್ ಪಾಟೀಲ್ ಹೆಸರಲ್ಲಿ 9,35,81,857 ರೂಪಾಯಿ ಮೌಲ್ಯದ ಚರಾಸ್ತಿ 1,03,00,000 ರೂಪಾಯಿ ಮೌಲ್ಯದ ಸ್ಥಿರಾಸ್ತಿಯಿದ್ದು, 84,62,200 ರೂಪಾಯಿ ಸಾಲವಿದೆ.

ಇದನ್ನೂ ಓದಿ:ಸಿದ್ದರಾಮಯ್ಯ ಮೊಮ್ಮಗ ರಾಜಕೀಯಕ್ಕೆ ಎಂಟ್ರಿ? ತಾತನ ಸ್ಫೂರ್ತಿ..ಅಪ್ಪನ ಕನಸು..ಧವನ್ ರಾಕೇಶ್ ಹೇಳಿದ್ದೇನು?

ದೇವರಹಿಪ್ಪರಗಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ

ಶರಣಪ್ಪ ಸುಣಗಾರಗೆ 32,40 ಕೋಟಿ ರೂಪಾಯಿ ಆಸ್ತಿಯಿದೆ. ವಿವಿಧ ಹೂಡಿಕೆ, ಬಂಗಾರ, ವಾಹನ ಸೇರಿದಂತೆ 1,10,92,598 ರೂಪಾಯಿ ಮೌಲ್ಯ ಚರಾಸ್ತಿ. ಕೃಷಿ ಭೂಮಿ, ಕೃಷಿಯೇತರ ಭೂಮಿ, ವಾಣಿಜ್ಯ ಕಟ್ಟಡ, ವಸತಿ ಕಟ್ಟಡ ಸೇರಿದಂತೆ 31.30 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯಿದ್ದು, 10 ಲಕ್ಷ ರೂಪಾಯಿ ಸಾಲವಿದೆ. ಶರಣಪ್ಪ ಸುಣಗಾರ ಪತ್ನಿ ಹೆಸರಲ್ಲಿ 58 ಲಕ್ಷ ರೂ.ಮೌಲ್ಯದ ಚರಾಸ್ತಿ ಹಾಗೂ 3.15 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ.

ಸಿಂದಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್​ ಭೂಸನೂರ ಆಸ್ತಿ ವಿವರ

ರಮೇಶ್​ ಭೂಸನೂರಗೆ 2.22 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಿದ್ದು, 91,94,434 ರೂಪಾಯಿ ಮೌಲ್ಯದ ಚರಾಸ್ತಿ ಹಾಗೂ 1.31 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ 2,22,94,434 ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. 4 ಲಕ್ಷ ರೂಪಾಯಿ ನಗದು, 12 ಲಕ್ಷ ರೂಪಾಯಿ ಬೆಲೆಯ ಚಿನ್ನ, 2 ಕಾರ್​ಗಳು ವಿವಿಧ ಹೂಡಿಕೆ ಸೇರಿದಂತೆ 91,94,434 ರೂಪಾಯಿ ಮೌಲ್ಯದ ಚರಾಸ್ತಿಯಿದ್ದು, ಕೃಷಿ ಭೂಮಿ ಹಾಗೂ ಕೃಷಿಯೇತರ ಭೂಮಿ ಸೇರಿದಂತೆ 1.31 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ. ಜೊತೆಗೆ 6.11 ಲಕ್ಷ ರೂಪಾಯಿ ವಾಹನ ಸಾಲ, 5.02 ಲಕ್ಷ ರೂಪಾಯಿ ಕೃಷಿ ಸಾಲ, 4.98 ಲಕ್ಷ ರೂಪಾಯಿ ಮನೆ ಕಟ್ಟಡಕ್ಕೆ ಸಾಲ ಪಡೆದಿರುವುದಾಗಿ ಮಾಹಿತಿ ಇದೆ. ಇನ್ನು ಇವರ ಪತ್ನಿ ಲಲಿತಾಬಾಯಿ ಹೆಸರಲ್ಲಿ 2 ಲಕ್ಷ ರೂಪಾಯಿ ನಗದು, ಹೂಡಿಕೆ, ವಾಹನಗಳು, 39ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಸೇರಿ 70.23 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿ. ಕೃಷಿ ಹಾಗೂ ಕೃಷಿಯೇತರ ಭೂಮಿ ಸೇರಿದಂತೆ 42.30 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿಯಿದೆ. ಜೊತೆಗೆ ಪುತ್ರ ಮಂಜುನಾಥ ಭೂಸನೂರ ಹೆಸರಲ್ಲಿ ಚಿನ್ನಾಭರಣ ವಾಹನ ಸೇರಿದಂತೆ 6.25 ಲಕ್ಷ ರೂಪಾಯಿ ಮೌಲ್ಯದ ಚರಾಸ್ತಿ. 36 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇರುವುದಾಗಿ ದಾಖಲೆಯಲ್ಲಿದೆ.

ಮುದ್ದೇಬಿಹಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಪ್ಪಾಜಿ ಉರ್ಫ್ ಸಿ.ಎಸ್ ನಾಡಗೌಡ ಆಸ್ತಿ ಮಾಹಿತಿ

ಸಿ.ಎಸ್ ನಾಡಗೌಡರಿಗೆ 11 ಕೋಟಿ ರೂಪಾಯಿ ಆಸ್ತಿ, 50 ಸಾವಿರ ನಗದು ಹೊಂದಿದ್ದಾರೆ. ವಿವಿಧ ಹೂಡಿಕೆ, ವಾಹನಗಳು, 620 ಗ್ರಾಂ ಚಿನ್ನಾಭರಣ ಸೇರಿದಂತೆ 78,15,421 ರೂಪಾಯಿ ಮೌಲ್ಯದ ಚರಾಸ್ತಿ. 10.86 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ. 1 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಪತ್ನಿ ಸುವರ್ಣಾ ನಾಡಗೌಡ ಹೆಸರಲ್ಲಿ 1.11ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ವಾಹನಗಳು, ವಿವಿಧ ಹೂಡಿಕೆ ಸೇರಿದಂತೆ 2,55,88,784 ರೂಪಾಯಿ ಮೌಲ್ಯದ ಚರಾಸ್ತಿ. ಕೃಷಿ, ಕೃಷಿಯೇತರ ಭೂಮಿ ಸೇರಿದಂತೆ 7.89 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?