ವಿಜಯಪುರ, ಜು.20: ತಮ್ಮ ಜಮೀನಿನಲ್ಲಿ ಬೇರೆ ರೈತರಿಗೆ ದಾರಿ ನೀಡಬೇಕೆಂದು ಒತ್ತಾಯಿಸಿ ಸಹಿ ಮಾಡಿಸಿಕೊಂಡಿದ್ದಾರೆಂದು ಆರೋಪಿಸಿ, ಮಹಿಳೆಯೋರ್ವಳು ಸಿಂದಗಿ ತಹಶೀಲ್ದಾರ್(Sindagi Tahsildar) ಕಚೇರಿ ಎದುರು ವಿಷದ ಬಾಟಲ್ ಹಿಡಿದು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಚಾಂದಕವಟೆ ಗ್ರಾಮದ ಶಾಮಲಾಬಾಯಿ ಸುಳ್ಳೊಳ್ಳಿ ಎಂಬುವವರು ‘ಪಕ್ಕದ ಜಮೀನಿನವರಿಗೆ ದಾರಿ ಇದ್ದರೂ ನಮ್ಮದೇ ಜಮೀನಿನಲ್ಲಿ ಹಾಯ್ದು ಹೋಗಲು ಗ್ರಾಮ ಲೆಕ್ಕಿಗ ಪಿ ಕೆ ಹುಡೇದ್ ಎಂಬಾತ ‘ನನ್ನ ಬಳಿ ಸಹಿ ಮಾಡಿಸಿಕೊಂಡು ಅನುವು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಜೊತೆಗೆ ಈ ವಿಚಾರದಲ್ಲಿ ನನ್ನ ಹಾಗೂ ಮಗನಿಂದ ಒತ್ತಾಯ ಪೂರ್ವಕವಾಗಿ ಸಹಿ ಮಾಡಿಸಿಕೊಂಡಿದ್ದಾರೆಂದು ಆಕ್ರೋಶ ಹೊರಹಾಕಿ, ತಹಶೀಲ್ದಾರ್ ಕಚೇರಿ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಪಟ್ಟು ಹಿಡಿದಿದ್ದರು. ಕೂಡಲೇ ವಿಷದ ಬಾಟಲ್ ಕಸಿದುಕೊಂಡ ಸ್ಥಳಿಯರು, ತಹಶೀಲ್ದಾರ್ ಪ್ರದೀಪ್ ಹಿರೇಮಠ ಮುಂದೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ:ವಿಜಯಪುರ: ಕೃಷ್ಣಾ ನದಿ ಪಾತ್ರದಲ್ಲಿ ಭಾರಿ ಮಳೆ, ಭರ್ತಿಯಾಗುತ್ತಿದೆ ಆಲಮಟ್ಟಿ ಜಲಾಶಯ
ದಲಿತ ಸಮಾಜದ ಮಹಿಳೆಯೆಂದು ಆಕೆಯನ್ನು ಹಾಗೂ ಆಕೆಯ ಮಗನನ್ನು, ತಹಶೀಲ್ದಾರ್ ಬಸವರಾಜ ಹಿರೇಮಠ ಅವರು ಕಚೇರಿಯಲ್ಲಿ ನೆಲದ ಮೇಲೆ ಮಹಿಳೆ ಕೂರಿಸಿ ವಿಚಾರಿಸಿದ್ದಾರೆ. ಈ ಹಿನ್ನಲೆ ತಹಶೀಲ್ದಾರ್ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ದಲಿತ ಸಮಾಜದ ಮಹಿಳೆಯೆಂದು ಈ ರೀತಿ ನಡೆಸಿಕೊಂಡಿದ್ದು ತಪ್ಪು, ವಿಚಾರಣೆ ನೆಪದಲ್ಲಿ ನೆಲದ ಮೇಲೆ ಕೂಡಿಸಿದ್ದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು. ಇನ್ನು ಮಹಿಳೆ ಶಾಮಲಾಬಾಯಿ ಜಮೀನಿನಲ್ಲಿ ಬೇರೆಯವರಿಗೆ ದಾರಿ ನೀಡಿದ್ದಾಗಿ ಒತ್ತಾಯ ಪೂರ್ವಕವಾಗಿ ಸಹಿ ಪಡೆದದವರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟುಬ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:03 pm, Sat, 20 July 24