ಕಳ್ಳತನಕ್ಕೆ ಬಂದಿದ್ದ ಕಳ್ಳನ ಕರಾಮತ್ತು; ಸಾರ್ವಜನಿಕರ ಕೈಗೆ ಸಿಗ್ತಿದ್ದಂತೆ ಬಟ್ಟೆ ಬರೆ ಕಳಚಿ‌ ನಗ್ನನಾಗಿ ಪರಾರಿಯಾಗಲು ಯತ್ನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 07, 2024 | 3:02 PM

ಇತ್ತೀಚೆಗೆ ಕಳ್ಳತನ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಪೊಲೀಸರು ಎಷ್ಟೇ ಕ್ರಮಕೈಗೊಂಡರೂ ಇದಕ್ಕೆ ಬ್ರೇಕ್​ ಹಾಕಲಾಗುತ್ತಿಲ್ಲ. ಅದರಂತೆ ಇದೀಗ ವಿಜಯಪುರ (Vijayapura) ನಗರದ ಶಿಕಾರಿಖಾನೆಯಲ್ಲಿ ಕಳ್ಳತನ ಮಾಡಲು‌ ಬಂದಿದ್ದ ಕಳ್ಳ, ಸಾರ್ವಜನಿಕರ ಕೈಗೆ ಸಿಗುತ್ತಿದ್ದಂತೆ ಬಟ್ಟೆ ಬರೆ ಕಳಚಿ‌ ನಗ್ನನಾಗಿ ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ. ಈ ಕುರಿತು ಎಪಿಎಂಸಿ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನಕ್ಕೆ ಬಂದಿದ್ದ ಕಳ್ಳನ ಕರಾಮತ್ತು; ಸಾರ್ವಜನಿಕರ ಕೈಗೆ ಸಿಗ್ತಿದ್ದಂತೆ ಬಟ್ಟೆ ಬರೆ ಕಳಚಿ‌ ನಗ್ನನಾಗಿ ಪರಾರಿಯಾಗಲು ಯತ್ನ
ನಗ್ನನಾಗಿ ಪರಾರಿಯಾಗಲು ಯತ್ನಿಸಿದ ಕಳ್ಳ
Follow us on

ವಿಜಯಪುರ, ಜು.07: ಕಳ್ಳತನ ಮಾಡಲು‌ ಬಂದಿದ್ದ ಕಳ್ಳ, ಸಾರ್ವಜನಿಕರ ಕೈಗೆ ಸಿಗುತ್ತಿದ್ದಂತೆ ಬಟ್ಟೆ ಬರೆ ಕಳಚಿ‌ ನಗ್ನನಾಗಿ ಪರಾರಿಯಾಗಲು ಯತ್ನಿಸಿದ ಘಟನೆ ವಿಜಯಪುರ(Vijayapura) ನಗರದ ಶಿಕಾರಿಖಾನೆಯಲ್ಲಿ ನಡೆದಿದೆ. ನಗ್ನಗೊಂಡ ಸ್ಥಿತಿಯಲ್ಲೇ‌ ಜನರು ಕಳ್ಳನನ್ನ ಹಿಡಿದು ಕಟ್ಟಿ ಹಾಕಿದ್ದಾರೆ. ಇನ್ನು ಈ ಕಳ್ಳ, ತನ್ನ ದೇಹಕ್ಕೆಲ್ಲ ಎಣ್ಣೆ ಹಚ್ಚಿಕೊಂಡು ಬಂದಿದ್ದನಂತೆ. ಕೂಡಲೇ ಆತನನ್ನು ಹಗ್ಗದಿಂದ ಕಟ್ಟಿ ಪೊಲಿಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಎಪಿಎಂಸಿ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಗ್ಯಾಸ್ ಕಟರ್ ಬಳಸಿ ಎಟಿಎಂ ನಲ್ಲಿ ಹಣ ಕಳ್ಳತನ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಹಳ್ಳಿ ಕೈಗಾರಿಕಾ ಪ್ರದೇಶದ ಎಟಿಎಂ ನಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ತಡರಾತ್ರಿ ಎಟಿಎಂ ಗೆ ನುಗ್ಗಿದ ಖದೀಮರು, ಸಿಸಿ ಕ್ಯಾಮರಾಗಳಿಗೆ ಪೆಯೀಂಟ್ ಸ್ಪ್ರೇ ಮಾಡಿ. ಗ್ಯಾಸ್​ ಕಟರ್​ ಬಳಸಿ ಎಸ್​ಬಿಐ ಬ್ಯಾಂಕ್​ಗೆ ಸೇರಿದ ಎಟಿಎಮ್​ನಿಂದ ಬರೋಬ್ಬರಿ 15 ಲಕ್ಷಕ್ಕೂ ಅಧಿಕ ಹಣವನ್ನು ಕಳ್ಳತನ ಮಾಡಿ ಎಸ್ಕೇಫ್​ ಆಗಿದ್ದಾರೆ. ಯಾವುದೇ ಸೆಕ್ಯೂರಿಟಿ ಗಾರ್ಡ್​ಗಳಿಲ್ಲದ ಕಾರಣ ಈ ಘಟನೆ ನಡೆದಿದೆ. ಇನ್ನು ಬೆಳಗ್ಗೆ ಎಟಿಎಂ ಓಪನ್ ಆಗಿರುವುದನ್ನ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು  ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಮನೆ ಬೀಗ ಮುರಿದು ಚಿನ್ನಾಭರಣ ಕಳ್ಳತನ; ರಾಯರ ದರ್ಶನ ಪಡೆದು ಮನೆಗೆ ವಾಪಸ್ಸಾದವರಿಗೆ ಬಿಗ್ ಶಾಕ್

ನಿಂತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ; ಬೈಕ್ ಸವಾರ ಸಾವು

ಮಂಡ್ಯ: ನಿಂತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ. ಬೆಸಗರಹಳ್ಳಿ ಗ್ರಾಮದ ನಿವಾಸಿ ಮಧುಕುಮಾರ್(34) ಮೃತ ರ್ದುದೈವಿ. ಈ ಕುರಿತು ಮದ್ದೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸ್ಥಳೀಯ ಪತ್ರಿಕೆ ವರದಿಗಾರನಾಗಿದ್ದ ಮಧುಕುಮಾರ
ಕೆಲಸ ಮುಗಿಸಿ ರಾತ್ರಿ 9 ಗಂಟೆಯಲ್ಲಿ ಊರಿಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:55 pm, Sun, 7 July 24