ಲೋಕಸಭಾ ಚುನಾವಣೆ: ಜಾತ್ರೆ, ಹಬ್ಬ, ಉತ್ಸವ ನಿಷೇಧಿಸಿ ವಿಜಯಪುರ ಜಿಲ್ಲಾಧಿಕಾರಿ ಆದೇಶ
ಲೋಕಸಭಾ ಚುನಾವಣೆಯ ಕಾವು ಜೋರಾಗಿದ್ದು, ಉಭಯ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿದೆ. ಅದರಂತೆ ಮೇ 06 ಮತ್ತು 07ರಂದು ನಡೆಯಲಿರುವ ಚುನಾವಣೆ ಸಲುವಾಗಿ ಜಾತ್ರೆ, ಹಬ್ಬ, ಸಂತೆ, ಉತ್ಸವಕ್ಕೆ ನಿಷೇಧಿಸಿ ವಿಜಯಪುರ (Vijayapura) ಜಿಲ್ಲಾ ಚುನಾವಣಾಧಿಕಾರಿ, ಡಿಸಿ ಟಿ.ಭೂಬಾಲನ್ ಆದೇಶಿಸಿದ್ದಾರೆ.
ವಿಜಯಪುರ, ಏ.19: ಲೋಕಸಭಾ ಚುನಾವಣೆ(Lok sabha election) ಹಿನ್ನೆಲೆ ಜಾತ್ರೆ, ಹಬ್ಬ, ಸಂತೆ, ಉತ್ಸವಕ್ಕೆ ನಿಷೇಧಿಸಿ ವಿಜಯಪುರ (Vijayapura) ಜಿಲ್ಲಾ ಚುನಾವಣಾಧಿಕಾರಿ, ಡಿಸಿ ಟಿ.ಭೂಬಾಲನ್ ಆದೇಶಿಸಿದ್ದಾರೆ. ಲೋಕಸಭಾ ಚುನಾವಣೆಯು ಮೇ 06 ಮತ್ತು 07ರಂದು ನಡೆಯಲಿದ್ದು, ಈ ಹಿನ್ನಲೆ ಜಿಲ್ಲೆಯ ಒಟ್ಟು 2,085 ಮತಗಟ್ಟೆಗಳಲ್ಲಿ ಮುಕ್ತ, ಶಾಂತಿಯುತ ಮತ್ತು ಪಾರದರ್ಶಕ ಮತದಾನ ನಡೆಸಲು ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ.
ಎರಡನೇ ಹಂತದ ಮತದಾನ ನಡೆಯೋ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಇನ್ನು ರಾಜ್ಯದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಎರಡು ಸೆಟ್ ನಾಮಪತ್ರ ಸಲ್ಲಿಕೆ ಮಾಡಿದರು. ಈ ಪೈಕಿ ಒಂದು ಸೆಟ್ ನಾಮಪತ್ರವನ್ನು ಜಿಲ್ಲಾ ಮಹಿಳಾ ಪದಾಧಿಕಾರಿಗಳೊಂದಿಗೆ ಮಾಡಿದ್ದು ಸಹ ವಿಶೇಷವಾಗಿತ್ತು. ಕೇಂದ್ರ ಸರ್ಕಾರದ ನಾರಿಶಕ್ತಿ ಯೋಜನೆಯ ಪ್ರತೀಕವಾಗಿ ಮಹಿಳಾ ಪದಾಧಿಕಾರಿಗಳ ಜೊತೆಗೆ ಬಿಜೆಪಿ ಆಭ್ಯರ್ಥಿ ರಮೇಶ್ ಜಿಗಜಿಣಗಿ ನಾಮಪತ್ರ ಸಲ್ಲಿಸಿದರು.
ಇದನ್ನೂ ಓದಿ:ನೂರಾರು ವರ್ಷಗಳಿಂದ ಇದ್ದರೂ ಸಿಗದ ಹಕ್ಕು ಪತ್ರಗಳು; ಲೋಕಸಭಾ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ ಗ್ರಾಮಸ್ಥರು
ನಾಮಪ್ರ ಸಲ್ಲಿಕೆ ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಶಿಲ್ಪಾ ಕಣಮುಚನಾಳ ‘ನಿಜವಾಗಿ ನಾರಿ ಶಕ್ತಿ ಪರವಾಗಿ ಇರೋದು ಬಿಜೆಪಿ ಸರ್ಕಾರ, ಮೋದಿ ಅವರ ಸರ್ಕಾರ. ಈ ಕಾರಣದಿಂದ ನಮ್ಮ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರವಾಗಿ ನಾವು ಮಹಿಳಾ ಪದಾಧಿಕಾರಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದೇವೆ ಎಂದರು. ಮೋದಿ ಸರ್ಕಾರದಲ್ಲಿ ಹಾಗೂ ಜಿಗಜಿಣಗಿ ಅವರು ಹತ್ತಾರು ಯೋಜನೆಗಳನ್ನು ಜಿಲ್ಲೆಗೆ ತಂದಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:18 pm, Fri, 19 April 24