AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೇಂಟ್ ಮಾಡಲು ಬಂದವನ ಜತೆ ಲವ್ವಿಡವ್ವಿ: ಗಂಡನ ಕಥೆ ಮುಗಿಸಲು ಡೀಲ್; ಬಯಲಿಗೆ ಬಂದಿದ್ದೇ ರೋಚಕ

ವಿಜಯಪುರ ನಗರದ ಹೊರವಲಯದಲ್ಲಿ ಅಪಘಾತದ ರೀತಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಪತಿಯ ಸಾವನ್ನು ಅಪಘಾತದಂತೆ ಬಿಂಬಿಸಿ ಕೊಲೆ ಮಾಡಿರುವ ಆರೋಪದಲ್ಲಿ ಪತ್ನಿ ಸೇರಿದಂತೆ ಆಕೆಯ ಪ್ರಿಯಕರ ಮತ್ತು ಇತರೆ ಇಬ್ಬರನ್ನು ವಿಜಯಪುರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಪೇಂಟ್ ಮಾಡಲು ಬಂದವನ ಜತೆ ಲವ್ವಿಡವ್ವಿ: ಗಂಡನ ಕಥೆ ಮುಗಿಸಲು ಡೀಲ್; ಬಯಲಿಗೆ ಬಂದಿದ್ದೇ ರೋಚಕ
ಆನಂದ್​, ಅಶ್ವಿನಿ, ರಾಜಶೇಖರ್
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Oct 19, 2026 | 9:18 PM

Share

ವಿಜಯಪುರ, ಅಕ್ಟೋಬರ್​ 19: ಹೊಸ ಮನೆಗೆ ಪೇಂಟಿಂಗ್​​ ಮಾಡಲು ಬಂದಿದ್ದ ಯುವಕನೊಂದಿಗೆ ಸ್ನೇಹ ಬೆಳಸಿ, ಪತ್ನಿಯೇ ಪತಿಯ ಕೊಲೆ ಮಾಡಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ಪತಿಯ ಕೊಲೆಗೆ ಪತ್ನಿಯೇ ಸಂಚು ರೂಪಿಸಿದ್ದು, ಆಕೆಯ ಪ್ರಿಯಕರ ಹಾಗೂ ಇತರೆ ಇಬ್ಬರು ಈ ಕೃತ್ಯಕ್ಕೆ ಸಹಕರಿಸಿದ್ದಾರೆ ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ನಾಲ್ವರನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದೇನು?

ರಾಜಶೇಖರ್ ಹಾಗೂ ಅಶ್ವಿನಿಗೆ ಸಂಬಂಧದಲ್ಲಿಯೇ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ 6 ವರ್ಷದ ಅವಳಿ ಗಂಡು ಮಕ್ಕಳಿದ್ದಾರೆ. ಆದರೆ ದಂಪತಿ ಮಧ್ಯೆ ಸಾಮರಸ್ಯವಿರಲಿಲ್ಲವಂತೆ. ಈ ಮಧ್ಯೆ ರಾಜಶೇಖರ್ ನೂತನವಾಗಿ ಮನೆ ಕಟ್ಟಿಸಿದ್ದರು. ಮನೆಯ ಪೇಂಟಿಂಗ್ ಕೆಲಸಕ್ಕೆ ಬಂದಿದ್ದ ಮದೀನಾ ನಗರ ವಾಸಿ ಆನಂದ್​ ಕಲ್ಲೂರ, ಅಶ್ವಿನಿಗೆ ಪರಿಚಯವಾಗಿದ್ದ. ಇವರಿಬ್ಬರ ಪರಿಚಯ ಮುಂದೆ ಪ್ರೀತಿಗೆ ತಿರುಗಿದೆ. ‘ಅಶ್ವಿನಿ ನನ್ನ ಗಂಡನನ್ನು ಮುಗಿಸಿ ಬಿಡೋಣ, ನಂತರ ನಾನು-ನೀನು ಜೊತೆಯಾಗಿರೋಣ’ ಎಂದು ಆನಂದ್​ಗೆ ಹೇಳಿದ್ದಳಂತೆ. ಆನಂದ್​ ಸಹ ತನಗೆ ಮದುವೆಯಾಗಿರುವ ವಿಚಾರ ಮುಚ್ಚಿಟ್ಟು ರಾಜಶೇಖರ್ ಕೊಲೆ ಮಾಡಿ ಇಡೀ ಆಸ್ತಿ ಹೊಡೆಯಲು ಮುಂದಾಗಿದ್ದ.

ಪತಿ ಹತ್ಯೆಗೆ ಪತ್ನಿಯ ಮಾಸ್ಟರ್​ ಪ್ಲ್ಯಾನ್ 

ರಾಜಶೇಖರ್ ಕೊಲೆಗೆ ಪಕ್ಕಾ ಪ್ಲ್ಯಾನ್ ಮಾಡುತ್ತಾರೆ. ಅದೊಂದು ದಿನ ರಾಜಶೇಖರ್ ಎಂದಿನಂತೆ ವಾಕಿಂಗ್​​ಗೆ ತೆರಳಿದ್ದು, ತಕ್ಷಣ ಈ ವಿಚಾರವನ್ನು ಅಶ್ವಿನಿ ಆನಂದ್​ಗೆ ತಿಳಿಸುತ್ತಾಳೆ. ಅತ್ತ ಆನಂದ್​ ತನ್ನದೇ ಏರಿಯಾದ ಸಹಚರರಾದ ಓರ್ವ ಅಪ್ರಾಪ್ತ ಬಾಲಕ ಹಾಗೂ ಸಚಿನ ಬಡಳ್ಳಿಗೆ ಮೊದಲೇ ಪ್ಲ್ಯಾನ್ ಮಾಡಿದಂತೆ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸ್ಕಾರ್ಪಿಯೋದಲ್ಲಿ ಬರಲು ಹೇಳಿ, ತಾನು ರೀಂಗ್ ರೋಡ್ ಬಳಿಯ ಜುಮನಾಳ ರಸ್ತೆಯಲ್ಲಿ ಕಾಯುತ್ತಾ ನಿಂತಿದ್ದ.

ಇದನ್ನೂ ಓದಿ: ಅಡುಗೆ ವಿಚಾರಕ್ಕೆ ಗಂಡ-ಹೆಂಡತಿ ಮಧ್ಯೆ ಜಗಳ: ಗಲಾಟೆ ಬಿಡಿಸಲು ಹೋದವ ಬರ್ಬರ ಹತ್ಯೆ

ಈ ವೇಳೆ ಅಶ್ವಿನಿ, ಆನಂದ್​ ಜೊತೆಗೆ ನಿರಂತರವಾಗಿ ಫೋನ್​ ಸಂಪರ್ಕದಲ್ಲಿದ್ದಳು. ಇದೇ ವೇಳೆ ಜಮನಾಳದತ್ತ ರಾಜಶೇಖರ್ ನಡೆದುಕೊಂಡು ಹೋಗುತ್ತಿರುವುದನ್ನ ಕಂಡ ಆನಂದ್​ ಈತನ ಮೇಲೆ ವಾಹನ ಚಲಾಯಿಸಿ ಬಿಡಿ ಎಂದು ಅಪ್ರಾಪ್ತ ವಯಸ್ಸಿನ ಬಾಲಕ ಹಾಗೂ ಸಚಿನ್​ಗೆ ಹೇಳುತ್ತಾನೆ. ಆಗ ಸಚಿಸ್​ ಬಡಳ್ಳಿ ವೇಗವಾಗಿ ಸ್ಕಾರ್ಪಿಯೋ ಚಲಾಯಿಸಿಕೊಂಡು ರಾಜಶೇಖರ್​ಗೆ ಡಿಕ್ಕಿ ಹೊಡೆಯುತ್ತಾನೆ. ಡಿಕ್ಕಿಯ ರಭಸಕ್ಕೆ ರಾಜಶೇಖರ್​​ನನ್ನ ನೂರು ಅಡಿ ದೂರ ಎಳೆದುಕೊಂಡ ಹೋಗಲಾಗಿದ್ದು, ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.

LIVE TV

ಸ್ಕೂಟಿಯಲ್ಲಿ ಬಂದ ಆನಂದ್​, ರಾಜಶೇಖರ್ ಮೃತಪಟ್ಟಿದ್ದನ್ನು ಖಚಿತ ಮಾಡಿಕೊಂಡು ಆಶ್ವಿನಿಗೆ ಕೆಲಸ ಮುಗಿಯಿತು ಎಂದು ವಿಷಯ ತಿಳಿಸಿ ಅಲ್ಲಿಂದ ಹೋಗುತ್ತಾನೆ. ಅಪರಿಚತ ವಾಹನ ಡಿಕ್ಕಿಯಾಗಿ ನನ್ನ ಪತಿ ಮೃತಪಟ್ಟಿದ್ದಾರೆಂದು ಅಶ್ವಿನಿ ಪೊಲೀಸ್​ ಠಾಣೆಗೆ ದೂರು ನೀಡಿ ಸುಮ್ಮನಿರುತ್ತಾಳೆ.

ಸಿಸಿಟಿವಿ ದೃಶ್ಯಗಳಿಂದ ಪ್ರಕರಣಕ್ಕೆ ತಿರುವು

ಇನ್ನು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ರಾಜಶೇಖರ್​ ಅಪಘಾತದಲ್ಲಿ ಸಾವಿಗೀಡಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ನಗರ ಡಿವೈಎಸ್ಪಿ ನಾಗರಾಜ್ ಅವರ ನೇತೃತ್ವದಲ್ಲಿ ಫೀಲ್ಡಿಗಿಳಿದ ತನಿಖಾ ತಂಡ ರಾಜಶೇಖರ್ ಮೃತಪಟ್ಟ ಸ್ಥಳದ ಸುತ್ತಮುತ್ತಲ ಸ್ಥಳಗಳಲ್ಲಿನ ಸಿಸಿ ಕ್ಯಾಮೆರಾಗಳನ್ನು ಚೆಕ್ ಮಾಡಿದ್ದಾರೆ. ಎರಡು ಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಹಾಗೂ ಓರ್ವ ವ್ಯಕ್ತಿ ಸ್ಕೂಟಿಯಲ್ಲಿ ಕುಳಿತುಕೊಂಡಿರುವುದು, ಸ್ಕ್ರಾರ್ಪಿಯೋ ವಾಹನ ಹೋಗಿರುವುದು ಸೆರೆಯಾಗಿತ್ತು. ಅದೇ ಸ್ಕಾರ್ಪಿಯೋ ರಾಖಶೇಖರ್​ಗೆ ಡಿಕ್ಕಿ ಹೊಡೆದು 100 ಅಡಿಗೂ ಹೆಚ್ಚು ದೂರು ಎಳೆದೊಯ್ದಿದ್ದು ಇನ್ನೊಂದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ: ಬೆಂಗಳೂರು: ವೈಟ್‌ಫೀಲ್ಡ್‌ನಲ್ಲಿ ತಡರಾತ್ರಿ ವಕೀಲನ ಕೊಲೆ! ಮನೆಗೆ ನುಗ್ಗಿ ಹಣೆಗೆ ಗುಂಡಿಟ್ಟು ಹತ್ಯೆ

ಇತ್ತ ರಾಜಶೇಖರ್ ಪತ್ನಿ ಅಶ್ವಿನಿ ನಡವಳಿಕೆ ಮೇಲೆಯೂ ಖಾಕಿ ಪಡೆ ಕಣ್ಣಿಟ್ಟಿತ್ತು. ಗಂಡ ಮೃತಪಟ್ಟ ದುಃಖ ಆಕೆಯ ಮುಖದಲ್ಲಿ ಕಂಡಿರಲಿಲ್ಲ. ಅತ್ತ ಸ್ಕಾರ್ಪಿಯೋ ವಾಹನ ಯಾರದ್ದೆಂದು ಕಂಡುಹಿಡಿದು ಚಾಲನನನ್ನು ವಿಚಾರಣೆ ಮಾಡಿದಾಗ ಇಡೀ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ರಾಜಶೇಖರ್​ನನ್ನು ಅಪಘಾತದ ರೂಪದಲ್ಲಿ ಕೊಲೆ ಮಾಡುವುದಕ್ಕೆ ಆತನ ಪತ್ನಿ ಅಶ್ವಿನಿಯೇ ಪಕ್ಕಾ ಪ್ಲ್ಯಾನ್ ಮಾಡಿದ್ದು ತನಿಖೆಯಲ್ಲಿ ಬಯಲಾಗಿದೆ. ಸದ್ಯ ಪತ್ನಿ ಸೇರಿ ನಾಲ್ವರನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಅಶೋಕ ಯಡಳ್ಳಿ, ವಿಜಯಪುರ
ಅಶೋಕ ಯಡಳ್ಳಿ, ವಿಜಯಪುರ

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
ಬಿಗ್ ಬಾಸ್ ಎಲಿಮಿನೇಷನ್ ಬಳಿಕ ಒಳ್ಳೆಯ ಸಿನಿಮಾ, ಸೀರಿಯಲ್ ನಿರೀಕ್ಷೆ: ಕಾವ್ಯಾ
ಬಿಗ್ ಬಾಸ್ ಎಲಿಮಿನೇಷನ್ ಬಳಿಕ ಒಳ್ಳೆಯ ಸಿನಿಮಾ, ಸೀರಿಯಲ್ ನಿರೀಕ್ಷೆ: ಕಾವ್ಯಾ
ಮಂಜನ ಆ ವರ್ತನೆಯಿಂದ ನನಗೆ ತುಂಬ ನೋವಾಯಿತು: ಬಿಗ್ ಬಾಸ್ ಕಾವ್ಯಾ ಗೌಡ
ಮಂಜನ ಆ ವರ್ತನೆಯಿಂದ ನನಗೆ ತುಂಬ ನೋವಾಯಿತು: ಬಿಗ್ ಬಾಸ್ ಕಾವ್ಯಾ ಗೌಡ
ಸಚಿವ ಶಿವಲಿಂಗೇಗೌಡರ ವಿರುದ್ಧ ಶಾಸಕ ಸ್ವರೂಪ್ ವಾಗ್ದಾಳಿ
ಸಚಿವ ಶಿವಲಿಂಗೇಗೌಡರ ವಿರುದ್ಧ ಶಾಸಕ ಸ್ವರೂಪ್ ವಾಗ್ದಾಳಿ
ನನ್ನ ಡಾಕ್ಟರ್​ ಸಿದ್ದರಾಮಯ್ಯ ಅಂತ ಕರೀಬೇಡಿ: ಮಾಜಿ ಸಿಎಂ ನಗೆ ಚಟಾಕಿ
ನನ್ನ ಡಾಕ್ಟರ್​ ಸಿದ್ದರಾಮಯ್ಯ ಅಂತ ಕರೀಬೇಡಿ: ಮಾಜಿ ಸಿಎಂ ನಗೆ ಚಟಾಕಿ
ಬೆಸ್ಟ್ ದಸರಾ ರೀಲ್ಸ್​​​​ಗೆ​​​ ಬಹುಮಾನ ಘೋಷಿಸಿದ ಸಿಎಂ: ಮಿಸ್ ಮಾಡ್ಕೋಬೇಡಿ
ಬೆಸ್ಟ್ ದಸರಾ ರೀಲ್ಸ್​​​​ಗೆ​​​ ಬಹುಮಾನ ಘೋಷಿಸಿದ ಸಿಎಂ: ಮಿಸ್ ಮಾಡ್ಕೋಬೇಡಿ
‘ಬಿಗ್ ಬಾಸ್ ಮನೆಯಲ್ಲಿ ನಮ್ಮ ಲೆಕ್ಕಾಚಾರ ನಡೆಯಲ್ಲ’: ಕಾವ್ಯಾ ಗೌಡ ಎಲಿಮಿನೇಟ್
‘ಬಿಗ್ ಬಾಸ್ ಮನೆಯಲ್ಲಿ ನಮ್ಮ ಲೆಕ್ಕಾಚಾರ ನಡೆಯಲ್ಲ’: ಕಾವ್ಯಾ ಗೌಡ ಎಲಿಮಿನೇಟ್
ಮುಗ್ಧ ಕಂದಮ್ಮಗಳ ದೊಡ್ಡ ಮನಸ್ಸಿಗೆ ಪ್ರಶಂಸೆ
ಮುಗ್ಧ ಕಂದಮ್ಮಗಳ ದೊಡ್ಡ ಮನಸ್ಸಿಗೆ ಪ್ರಶಂಸೆ
ಸ್ಟಿಂಗ್ ಆಪರೇಷನ್​ ಕೇಸ್ ತನಿಖೆಗೆ ಹಿಂಜರಿಯುವ ಪೊಲೀಸರನ್ನು ವಜಾ ಮಾಡ್ಬೇಕು
ಸ್ಟಿಂಗ್ ಆಪರೇಷನ್​ ಕೇಸ್ ತನಿಖೆಗೆ ಹಿಂಜರಿಯುವ ಪೊಲೀಸರನ್ನು ವಜಾ ಮಾಡ್ಬೇಕು
ಇಕ್ಕಟ್ಟಿನಲ್ಲಿ ಗಗನ್; ಸೌಂದರ್ಯಾ-ತಾಂಡವ್ ಪೈಕಿ ಯಾರು ನಾಮಿನೇಟ್?
ಇಕ್ಕಟ್ಟಿನಲ್ಲಿ ಗಗನ್; ಸೌಂದರ್ಯಾ-ತಾಂಡವ್ ಪೈಕಿ ಯಾರು ನಾಮಿನೇಟ್?
ನ್ಯೂಜಿಲೆಂಡ್ ಪ್ರವಾಸಕ್ಕೆ ಬೆಂಗಳೂರಿನಿಂದ ವಿಮಾನ ಹತ್ತಿದ ಟೀಂ ಇಂಡಿಯಾ
ನ್ಯೂಜಿಲೆಂಡ್ ಪ್ರವಾಸಕ್ಕೆ ಬೆಂಗಳೂರಿನಿಂದ ವಿಮಾನ ಹತ್ತಿದ ಟೀಂ ಇಂಡಿಯಾ