ಚಡಚಣ ತಾಲೂಕಿನ ಜಿಗಜಿವಣಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವ್ಯವಸ್ಥೆ; ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ತಾಲೂಕು ವೈದ್ಯಾಧಿಕಾರಿ

| Updated By: ವಿವೇಕ ಬಿರಾದಾರ

Updated on: May 24, 2022 | 11:26 AM

ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಜಿಗಜಿವಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಅವ್ಯವಸ್ಥೆ ತಾಂಡವಾಡುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಚಡಚಣ ತಾಲೂಕು ವೈದ್ಯಾಧಿಕಾರಿ ಡಾ ಅರ್ಚನಾ ಕುಲಕರ್ಣಿ ಹೇಳಿದ್ದಾರೆ.  

ಚಡಚಣ ತಾಲೂಕಿನ ಜಿಗಜಿವಣಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವ್ಯವಸ್ಥೆ; ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ತಾಲೂಕು ವೈದ್ಯಾಧಿಕಾರಿ
ಚಡಚಣ ಪ್ರಾಥಮಿಕ ಆರೋಗ್ಯ ಕೇಂದ್ರ
Follow us on

ವಿಜಯಪುರ: ವಿಜಯಪುರ (Vijaypur) ಜಿಲ್ಲೆ ಚಡಚಣ ತಾಲೂಕಿನ ಜಿಗಜಿವಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (Primary Health Center) ಅವ್ಯವಸ್ಥೆ ತಾಂಡವಾಡುತ್ತಿದೆ. ಈ ಬಗ್ಗೆ ಟಿವಿ9ಗೆ ಚಡಚಣ ತಾಲೂಕು ವೈದ್ಯಾಧಿಕಾರಿ ಡಾ ಅರ್ಚನಾ ಕುಲಕರ್ಣಿ  ಪ್ರತಿಕ್ರಯಿಸಿ ಗರ್ಭಿಣಿಗೆ ಚಿಕಿತ್ಸೆ ಸಿಗದೇ ನರಳಾಡಿದ ವಿಚಾರ ನನ್ನ ಗಮನಕ್ಕೆ ಬಂದಿದೆ. ಟಿವಿ9 ಮೂಲಕ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಶ್ರೀಮತಿ ಕಸ್ತೂರಿಬಾ‌ಯಿ ಈರಪ್ಪ ಲೋಣಿ ಮೊಮೋರಿಯಲ್ ಇನ್ಸ್ಟಿಟ್ಯೂಟ್ ರೀಸರ್ಚ್ ಡೆವೆಲಪ್ಮೆಂಟ್ ಆ್ಯಂಡ ಚಾರಿಟೇಬಲ್ ಟ್ರಸ್ಟ್ ಈ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಡೆಸುತ್ತಿದೆ. ವೈದ್ಯರ ಹಾಗೂ ಸಿಬ್ಬಂದಿ ನೇಮಕಾತಿ ಹಾಗೂ ಅವರಿಗೆ ಸಂಬಳ ಟ್ರಸ್ಟ್ ನೀಡುತ್ತದೆ. ಡಾ ಸುಜಾತಾ ಮಾಯಾಗೋಳ ಮತ್ತು ಡಾ ಸಂಜೀವ ಜಮಖಂಡಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಅವರು ಗರ್ಭಿಣಿಗೆ ಯಾಕೆ ಚಿಕಿತ್ಸೆ‌ ನೀಡಿಲ್ಲಾ ಎಂಬುದರ ಮಾಹಿತಿ ಪಡೆಯಲಾಗುತ್ತದೆ. ಈ ನಿಟ್ಟಿನಲ್ಲಿ ಇತರೆ ಎಲ್ಲಾ ಮಾಹಿತಿ ಪಡೆದು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ಡಾ ಅರ್ಚನಾ ಕುಲಕರ್ಣಿ ತಿಳಿಸಿದ್ದಾರೆ.

ಇದನ್ನು ಓದಿ : ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ರಾಗಿಣಿ; ‘ತುಪ್ಪದ ಬೆಡಗಿ’ಯ ಗ್ಲಾಮರಸ್ ಫೋಟೋಗಳು ಇಲ್ಲಿವೆ

ಇನ್ನು  ಘಟನೆ ಕುರಿತು ಮಾಹಿತಿಗಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ ರಾಜಕುಮಾರ ಯರಗಲ್ ಅವರಿಗೆ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.

ಇದನ್ನೂ ಓದಿ
Wild Poliovirus: ವೈಲ್ಡ್​ ಪೋಲಿಯೋವೈರಸ್ ಎಂದರೇನು? ಲಕ್ಷಣಗಳೇನು? ಹೇಗೆ ಹರಡುತ್ತೆ?
ಪಿಎಫ್​ಐ ರ್‍ಯಾಲಿಯಲ್ಲಿ ಹಿಂದೂ-ಕ್ರಿಶ್ಚಿಯನ್ನರ ವಿರುದ್ಧ ಘೋಷಣೆ: ಒಬ್ಬನ ಬಂಧನ, ನಾಯಕರ ವಿರುದ್ಧ ದೂರು ದಾಖಲು
INCOME TAX: ಆದಾಯ ತೆರಿಗೆ ಕಟ್ಟುವಾಗ ಮಾಡುವ ತಪ್ಪುಗಳಿವು: ಇಂಥ ತಪ್ಪುಗಳು ಅಪರಾಧವೆಂದು ತಿಳಿದಿದೆಯಾ?
GT vs RR: ಕೋಲ್ಕತ್ತಾ ಹವಾಮಾನ ಹೇಗಿದೆ?: ಕ್ವಾಲಿಫೈಯರ್ 1 ಪಂದ್ಯ ಮಳೆಯಿಂದ ರದ್ದಾದರೆ ಏನಾಗಲಿದೆ?

ನಿನ್ನೆ (ಮೇ 24) ರಂದು ಮದ್ಯಾಹ್ನ ಗರ್ಭಿಣಿ ಪೂರ್ಣಿಮಾ ಹೊನಕಾಂಡೆ ಹೆರಿಗೆಗೆ ವಿಜಯಪುರ  ಜಿಲ್ಲೆ ಚಡಚಣ ತಾಲೂಕಿನ ಜಿಗಜಿವಣಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾರೆ.  ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೆ ಗರ್ಭಿಣಿ ನರಳಾಡುತ್ತಿದ್ದಾರೆ. ಪೂರ್ಣಿಮಾ ಸಾಯಂಕಾಲದವರೆಗೂ ಆಸ್ಪತ್ರೆಯಲ್ಲಿ‌ ಚಿಕಿತ್ಸೆಗಾಗಿ  ಗರ್ಭಿಣಿ ಹಾಗೂ ಆಕೆಯ ಪೋಷಕರು ಕಾಯ್ದರು ವೈದ್ಯರು ಬರಲಿಲ್ಲ. ಗರ್ಭಿಣಿ ಪೂರ್ಣಿಮಾ ಆಸ್ಪತ್ರೆ ‌ನೆಲದ ಮೇಲೆ ಕುಳಿತು‌ ನರಳಾಡಿದ್ದಾರೆ.

ಈ ವೇಳೆ ಆಸ್ಪತ್ರೆಯಲ್ಲಿದ್ದ ಇಬ್ಬರು ಸಿಬ್ಬಂದಿಗಳು ತಾವು‌ ನಿಸ್ಸಾಯಕರು ಎಂಬಂತೆ  ಹೇಳಿಕೆ ನೀಡಿದ್ದಾರೆ. ಸಾಯಂಕಾಲ‌ ಆರು ಗಂಟೆವರೆಗೂ ಆಸ್ಪತ್ರೆಯಲ್ಲಿ ಕಾಯ್ದರೂ ವೈದ್ಯರು ಬಾರದಿದ್ದಕ್ಕೆ ಚಡಚಣದ ಸಮುದಾಯ ಆರೋಗ್ಯ ‌ಕೇಂದ್ರಕ್ಕೆ ಗರ್ಭಿಣಿ ಪೂರ್ಣಿಮಾ ತೆರಳಿದ್ದಾರೆ. ಅಂಬ್ಯುಲೆನ್ಸ್ ಮ‌ೂಲಕ ಸಮುದಾಯ ಆರೋಗ್ಯ ‌ಕೇಂದ್ರಕ್ಕೆ ತೆರಳುವಾಗ ಮಾರ್ಗ ಮಧ್ಯೆ ಅಂಬ್ಯುಲೆನ್ಸ್ ನಲ್ಲೇ ಹೆರಿಗೆ ಆಗಿದೆ. ಅಂಬ್ಯುಲೆನ್ಸ್ ನಲ್ಲಿ ಪೂರ್ಣಿಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಇದನ್ನು ಓದಿ : ಪರಿಷತ್​ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟ

ತಾಯಿ‌ ಹಾಗೂ ಮಗುವಿಗೆ ಚಡಚಣದ ಸಮುದಾಯ ಆರೋಗ್ಯ‌ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಮಗು ಆರೋಗ್ಯವಾಗಿದ್ದಾರೆಂದು ವೈದ್ಯರು ಮಾಹಿತಿ ನೀಡಿದ್ದಾರೆ. ಜಿಗಜಿವಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಹಾಗೂ ಸಿಬ್ಬಂದಿಗಳ ವರ್ತನೆಗೆ ಗರ್ಭಿಣಿ ಪೋಷಕರು ತೀವ್ರ ಅಸಮಾಧಾನ ವ್ಯಕ್ತಪಡಿದ್ದಾರೆ. ಕರ್ತವ್ಯ ‌ನಿರ್ಲಕ್ಷ್ಯ ಆರೋಪದ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿಗಳು  ಕ್ರಮ‌ ತೆಗೆದುಕೊಳ್ಳಬೇಕೆಂದು ಪೋಷಕರು ಒತ್ತಾಯ ಮಾಡುತ್ತಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:26 am, Tue, 24 May 22