GT vs RR: ಕೋಲ್ಕತ್ತಾ ಹವಾಮಾನ ಹೇಗಿದೆ?: ಕ್ವಾಲಿಫೈಯರ್ 1 ಪಂದ್ಯ ಮಳೆಯಿಂದ ರದ್ದಾದರೆ ಏನಾಗಲಿದೆ?

Weather Report, GT vs RR Qualifier 1: ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಐಪಿಎಲ್ 2022ರ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈಡನ್ ಗಾರ್ಡನ್ಸ್​​ನಲ್ಲಿ (Eden Gardens) ನಿಗದಿಯಾಗಿರುವ ಪ್ಲೇ ಆಫ್ ಪಂದ್ಯಗಳಿಗೆ ವರುಣನ ಅವಕೃಪೆ ಎದುರಾಗಿದೆ.

GT vs RR: ಕೋಲ್ಕತ್ತಾ ಹವಾಮಾನ ಹೇಗಿದೆ?: ಕ್ವಾಲಿಫೈಯರ್ 1 ಪಂದ್ಯ ಮಳೆಯಿಂದ ರದ್ದಾದರೆ ಏನಾಗಲಿದೆ?
Eden Gardens Weather
Follow us
TV9 Web
| Updated By: Vinay Bhat

Updated on:May 24, 2022 | 10:29 AM

ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಇಂದು ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ (GT vs RR) ನಡುವೆ ಐಪಿಎಲ್ 2022ರ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಆದರೆ, ಈಡನ್ ಗಾರ್ಡನ್ಸ್​​ನಲ್ಲಿ (Eden Gardens) ನಿಗದಿಯಾಗಿರುವ ಪ್ಲೇ ಆಫ್ ಪಂದ್ಯಗಳಿಗೆ ವರುಣನ ಅವಕೃಪೆ ಎದುರಾಗಿದೆ. ಕೋಲ್ಕತ್ತಾದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದೀಗ ಪ್ಲೇ ಆಫ್‍ನ ಎರಡು ಪಂದ್ಯಗಳು ಕೋಲ್ಕತ್ತಾದಲ್ಲಿ ನಡೆಯಲಿದೆ. ಕೋಲ್ಕತ್ತಾದಲ್ಲಿ ಇನ್ನೆರಡು ದಿನ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗಾಗಿ ಪ್ಲೇ ಆಫ್ (Playoffs) ಪಂದ್ಯಗಳು ಸೂಕ್ತ ಫಲಿತಾಂಶ ಹೊರಬೀಳುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಅಲ್ಲದೆ ಪಂದ್ಯಕ್ಕೂ ಮುನ್ನ ಸಂಪೂರ್ಣ ಸಿದ್ಧಗೊಂಡಿದ್ದ ಕ್ರೀಡಾಂಗಣ ಭಾರೀ ಬಿರುಗಾಳಿ ಹಾಗೂ ಧಾರಾಕಾರ ಮಳೆಗೆ ಸಿಲುಕಿದ್ದು, ಇಲ್ಲಿನ ವ್ಯವಸ್ಥೆ ಹದಗೆಟ್ಟಿದೆ. ಪ್ರೇಕ್ಷಕರ ಗ್ಯಾಲರಿಯಲ್ಲಿಯೂ ಮೇಲ್ಚಾವಣಿಗಳು ಕುಸಿದು ಬಿದ್ದಿವೆ. ಗಾಳಿಯ ರಭಸಕ್ಕೆ ಪ್ರೆಸ್ ಬಾಕ್ಸ್‌ನ ಗಾಜಿನ ಕಿಟಕಿಯೂ ಒಡೆದಿದೆ.

ಮಳೆ ಬಂದರೆ ಏನು ಗತಿ?:

ಮಳೆ ಬಂದು ನಿಗದಿತ ಸಮಯದಲ್ಲಿ ಪಂದ್ಯ ನಡೆಯದೇ ಇದ್ದರೆ ಈ ವೇಳೆ ಸೂಪರ್ ಓವರ್ ಮೂಲಕ ಪಂದ್ಯದ ಫಲಿತಾಂಶ ನಿರ್ಧರಿಸುವ ಸಾಧ್ಯತೆ ಇದೆ. ಅಲ್ಲದೇ 2 ಗಂಟೆಗಳ ಕಾಲ ಹೆಚ್ಚಿನ ಅವಧಿಯನ್ನು ಈಗಾಗಲೇ ನಿಗದಿಪಡಿಸಲಾಗಿದ್ದು, ಒಂದು ವೇಳೆ ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗದೇ ಇದ್ದರೆ 9:30ಕ್ಕೆ ಪ್ರಾರಂಭಿಸಲು ಐಪಿಎಲ್ ಆಡಳಿತ ಮಂಡಳಿ ಪ್ಲಾನ್ ಮಾಡಿಕೊಂಡಿದೆ. ಜೊತೆಗೆ ಎರಡು ತಂಡಗಳಿಗೂ ತಲಾ 5 ಓವರ್‌ಗಳ ಆಟದ ಮೂಲಕ ಫಲಿತಾಂಶ ಕಾಣುವಂತೆ ನಿಯಮ ತರಲಾಗಿದೆ.

ಇದನ್ನೂ ಓದಿ
Image
Women’s T20 Challenge 2022: ಪೂಜಾ ಮಾರಕ ದಾಳಿಗೆ ನಲುಗಿದ ಟ್ರೇಲ್‌ಬ್ಲೇಜರ್ಸ್: ಸೂಪರ್‌ನೋವಾಸ್ 49 ರನ್​ಗಳ ಭರ್ಜರಿ ಜಯ
Image
IPL 2022: ಇಡೀ ಸೀಸನ್​ನಲ್ಲಿ ಒಂದೇ ಒಂದು ಅವಕಾಶ ಪಡೆಯದ ಅರ್ಜುನ್ ತೆಂಡೂಲ್ಕರ್​ಗೆ ಅಕ್ಕನ ಭಾವನಾತ್ಮಕ ಸಾಂತ್ವನ
Image
GT vs RR Prediction Playing XI: ಗುಜರಾತ್ ಮತ್ತು ರಾಜಸ್ಥಾನದ ಮುಂದೆ ಒಂದೇ ಪ್ರಶ್ನೆ.. ಮೂರನೇ ವೇಗಿ ಯಾರು?
Image
GT vs RR, Playoff Prediction: ಫೈನಲ್ ಸುತ್ತು, ಪೈಪೋಟಿ ಗುಜರಾತ್ ಜೊತೆ; ರಾಜಸ್ಥಾನದ ಕಾಯುವಿಕೆ ಕೊನೆಗೊಳ್ಳುತ್ತಾ?

ಇನ್ನು ಎಲಿಮಿನೇಟರ್ ಮತ್ತು ಪ್ರತಿ ಕ್ವಾಲಿಫೈಯರ್ ಪ್ಲೇ ಆಫ್ ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲದಿರುವುದಿಲ್ಲ. ಸೂಪರ್ ಓವರ್ ಸಹ ಸಾಧ್ಯವಾಗದ ಸನ್ನಿವೇಶದಲ್ಲಿ, ನಿಯಮಿತ ಋತುವಿನ 70 ಪಂದ್ಯಗಳ ನಂತರ ಲೀಗ್ ಕೋಷ್ಟಕದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದ ತಂಡವನ್ನು ಸಂಬಂಧಿತ ಪ್ಲೇಆಫ್ ಪಂದ್ಯ ಅಥವಾ ಫೈನಲ್‌ನ ವಿಜೇತ ಎಂದು ಘೋಷಿಸಲಾಗುತ್ತದೆ. ಆದರೆ, ಮೇ 29ರ ಫೈನಲ್ ಪಂದ್ಯದಂದು (ಕನಿಷ್ಠ ಒಂದು ಚೆಂಡನ್ನು ಬೌಲ್ ಮಾಡಲಾಗುತ್ತದೆ) ಆದರೆ ಮೂಲ ದಿನದಂದು ಪೂರ್ಣಗೊಳಿಸದಿದ್ದರೆ, ನಂತರ ಪಂದ್ಯವನ್ನು ಮೀಸಲು ದಿನದಂದು ಮುಂದುವರೆಸುವ ಬಗ್ಗೆ ಐಪಿಎಲ್ ಸೂಚಿಸಿದೆ. ಪಂದ್ಯವು ಹಿಂದಿನ ದಿನದಂದು ನಿಲ್ಲಿಸಿದ ಹಂತದಲ್ಲಿ ಪುನರಾರಂಭಗೊಳ್ಳುತ್ತದೆ.

GT vs RR: ಐಪಿಎಲ್​​ನಲ್ಲಿಂದು ಗುಜರಾತ್-ರಾಜಸ್ಥಾನ್ ನಡುವೆ ಮೊದಲ ಕ್ವಾಲಿಫೈಯರ್: ಗೆದ್ದ ತಂಡ ಫೈನಲ್​ಗೆ ಲಗ್ಗೆ

ಆರ್​ಸಿಬಿಗೆ ಸಂಕಷ್ಟ:

ಸೂಪರ್ ಓವರ್ ಆಡದೇ ಫಲಿತಾಂಶವಿಲ್ಲದೇ ಪಂದ್ಯ ರದ್ದಾದರೆ ನೆಟ್‍ ರನ್‌ರೇಟ್‌ನಲ್ಲಿ ಮುಂದಿರುವ ತಂಡ 2ನೇ ಎಲಿಮಿನೇಟರ್‌ಗೆ ತೇರ್ಗಡೆ ಆಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಎಲಿಮಿನೇಟರ್ ಪಂದ್ಯವಾಡುತ್ತಿರುವ ಲಖನೌ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಲಖನೌ ತಂಡಕ್ಕೆ ನೆಟ್ ರನ್‌ರೇಟ್ ವರದಾನವಾಗುವ ಸಾಧ್ಯತೆ ಹೆಚ್ಚಿದೆ. ಲಖನೌ 18 ಅಂಕಗಳೊಂದಿಗೆ +0.251 ಮತ್ತು ಬೆಂಗಳೂರು 16 ಅಂಕಗಳೊಂದಿಗೆ -0.253 ನೆಟ್ ರನ್‌ರೇಟ್ ಹೊಂದಿದೆ. ಇದೆಲ್ಲವನ್ನು ಗಮನಿಸಿದಾಗ ಅದೃಷ್ಟದ ಮೂಲಕ ಪ್ಲೇಆಫ್ ಪ್ರವೇಶಿಸಿರುವ ಆರ್‌ಸಿಬಿ ತಂಡಕ್ಕೆ ಪ್ಲೇಆಫ್‍ನಲ್ಲಿ ನೆಟ್ ರನ್‌ರೇಟ್ ಮತ್ತು ಅಂಕಗಳು ಕಡಿಮೆ ಇರುವುದು ಚೊಚ್ಚಲ ಐಪಿಎಲ್ ಟ್ರೋಫಿ ಕನಸು ನುಚ್ಚುನೂರಾಗಲಿದೆ. ಆರ್‌ಸಿಬಿ ಮತ್ತು ಲಕ್ನೋ ನಡುವಿನ ಪಂದ್ಯಕ್ಕೆ ಮಳೆ ಅಡಚಣೆ ನೀಡಿ ಒಂದೂ ಎಸೆತ ಕಾಣದೇ ಪಂದ್ಯ ರದ್ದಾದರೆ, ನೆಟ್‍ ನೆಟ್ ರನ್‌ರೇಟ್ ಆಧಾರದ ಮೇಲೆ ಲಖನೌ 2ನೇ ಕ್ವಾಲಿಫೈಯರ್‌ಗೆ ತೇರ್ಗಡೆ ಹೊಂದಲಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:29 am, Tue, 24 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ