Women’s T20 Challenge 2022: ಪೂಜಾ ಮಾರಕ ದಾಳಿಗೆ ನಲುಗಿದ ಟ್ರೇಲ್‌ಬ್ಲೇಜರ್ಸ್: ಸೂಪರ್‌ನೋವಾಸ್ 49 ರನ್​ಗಳ ಭರ್ಜರಿ ಜಯ

Trailblazers vs Supernovas: ಟಾಸ್ ಗೆದ್ದ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ನಿಗದಿತ 20 ಓವರ್‌ಗಳಲ್ಲಿ ಸೂಪರ್‌ನೋವಾಸ್ 163 ರನ್ ಗಳಿಸಿತು. ಹರ್ಮನ್‌ಪ್ರೀತ್ 29 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ 36 ರನ್ ಗಳಿಸಿದರು.

Women’s T20 Challenge 2022: ಪೂಜಾ ಮಾರಕ ದಾಳಿಗೆ ನಲುಗಿದ ಟ್ರೇಲ್‌ಬ್ಲೇಜರ್ಸ್: ಸೂಪರ್‌ನೋವಾಸ್ 49 ರನ್​ಗಳ ಭರ್ಜರಿ ಜಯ
Trailblazers vs Supernovas
Follow us
TV9 Web
| Updated By: Vinay Bhat

Updated on:May 24, 2022 | 7:41 AM

ಮಹಿಳೆಯರ ಮಿನಿ ಐಪಿಎಲ್ ಖ್ಯಾತಿಯ ವುಮೆನ್ಸ್ ಟಿ20 ಚಾಲೆಂಜ್ (Women’s T20 Challenge 2022) ಟೂರ್ನಿಗೆ ಚಾಲನೆ ಸಿಕ್ಕಿದೆ. ಸ್ಮತಿ ಮಂದನಾ ಸಾರಥ್ಯದ ಟ್ರೈಲ್‌ಬ್ಲೇಜರ್ಸ್‌ ಮತ್ತು ಹರ್ಮಾನ್‌ಪ್ರೀತ್ ಕೌರ್ ನೇತೃತ್ವದ ಸೂಪರ್‌ನೋವಾಸ್ (Trailblazers vs Supernovas) ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಿದ್ದು ಇದರಲ್ಲಿ ಸೂಪರ್‌ನೋವಾಸ್ 49 ರನ್‌ಗಳಿಂದ ಗೆದ್ದು ಬೀಗಿದೆ. ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಪೂಜಾ ವಸ್ತ್ರಕರ್ (Pooja Vastrakar) ಅವರ ಪ್ರಭಾವಿ ದಾಳಿಗೆ ನಲುಗಿದ ಟ್ರೇಲ್‌ಬ್ಲೇಜರ್ಸ್ ತಂಡ ಕುಸಿಯಿತು. ಸೂಪರ್‌ನೋವಾಸ್ ತಂಡ ಭರ್ಜರಿ ಜಯ ಗಳಿಸಿತು. ಸೋಮವಾರ ನಡೆದ ಮಹಿಳೆಯರ ಟಿ20 ಚಾಲೆಂಜರ್ಸ್ ಟೂರ್ನಿಯ ಪಂದ್ಯದಲ್ಲಿ ಟ್ರೇಲ್‌ಬ್ಲೇಜರ್ಸ್ ತಂಡವನ್ನು ಮಣಿಸಿತು. ಈ ಗೆಲುವಿನ ಮೂಲಕ ಹರ್ಮನ್‌ಪ್ರೀತ್ ತಂಡವು ಉತ್ತಮ ರನ್ ರೇಟ್ ಅನ್ನು ಸಂಪಾದಿಸಿದೆ.

ಟಾಸ್ ಗೆದ್ದ ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ನಿಗದಿತ 20 ಓವರ್‌ಗಳಲ್ಲಿ ಸೂಪರ್‌ನೋವಾಸ್ 163 ರನ್ ಗಳಿಸಿತು. ಹರ್ಮನ್‌ಪ್ರೀತ್ 29 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ 36 ರನ್ ಗಳಿಸಿದರು. ಹರ್ಲೀನ್ ಡಿಯೋಲ್ 35, ಡಿಯಾಂಡಾ ಡೋಟಿನ್ 32 ಮತ್ತು ಪ್ರಿಯಾ ಪುನಿಯಾ 22 ರನ್ ಗಳಿಸಿದರು. ಇದು ಮಹಿಳಾ ಟಿ20 ಇತಿಹಾಸದಲ್ಲಿ ಅತಿ ಹೆಚ್ಚಿನ ಮೊತ್ತ ಆಗಿರುವುದು ವಿಶೇಷ. ಟ್ರೈಲ್‌ಬ್ಲೇಜರ್ಸ್ ಪರ ಹೈಲಿ ಮ್ಯಾಥ್ಯೂಸ್ 29 ರನ್ ನೀಡಿ ಮೂರು ವಿಕೆಟ್ ಪಡೆದರು. ಸಲ್ಮಾ ಖಾತುನ್ 30 ರನ್ ನೀಡಿ 2 ವಿಕೆಟ್ ಪಡೆದರು. ರಾಜೇಶ್ವರಿ ಗಾಯಕ್ವಾಡ್ 4 ಓವರ್‌ಗಳಲ್ಲಿ 34 ರನ್ ನೀಡಿ ಒಂದು ವಿಕೆಟ್ ಪಡೆದರು.

IPL 2022: ಇಡೀ ಸೀಸನ್​ನಲ್ಲಿ ಒಂದೇ ಒಂದು ಅವಕಾಶ ಪಡೆಯದ ಅರ್ಜುನ್ ತೆಂಡೂಲ್ಕರ್​ಗೆ ಅಕ್ಕನ ಭಾವನಾತ್ಮಕ ಸಾಂತ್ವನ

ಇದನ್ನೂ ಓದಿ
Image
GT vs RR Prediction Playing XI: ಗುಜರಾತ್ ಮತ್ತು ರಾಜಸ್ಥಾನದ ಮುಂದೆ ಒಂದೇ ಪ್ರಶ್ನೆ.. ಮೂರನೇ ವೇಗಿ ಯಾರು?
Image
GT vs RR, Playoff Prediction: ಫೈನಲ್ ಸುತ್ತು, ಪೈಪೋಟಿ ಗುಜರಾತ್ ಜೊತೆ; ರಾಜಸ್ಥಾನದ ಕಾಯುವಿಕೆ ಕೊನೆಗೊಳ್ಳುತ್ತಾ?
Image
Kusal Mendis: ಫೀಲ್ಡಿಂಗ್ ವೇಳೆ ಎದೆನೋವು: ಲಂಕಾ ಆಟಗಾರ ಆಸ್ಪತ್ರೆಗೆ ದಾಖಲು
Image
IPL 2022: ಈ ಸೀಸನ್​ನಲ್ಲಿ ಒಂದೇ ಒಂದು ಸೂಪರ್ ಓವರ್ ಇಲ್ಲ; ಮೊದಲ ಸೂಪರ್ ಓವರ್ ನಡೆದಿದ್ದು ಯಾವಾಗ?

ಸೂಪರ್‌ ನೋವಾ ತಂಡದ ನಿಖರ ದಾಳಿಗೆ ಕುಸಿದ ಟ್ರೈಲ್‌ಬ್ಲೇಜರ್ಸ್‌ ತಂಡವು 9 ವಿಕೆಟಿಗೆ 114 ರನ್‌ ಗಳಿಸಲಷ್ಟೇ ಶಕ್ತವಾಗಿ 49 ರನ್ನುಗಳಿಂದ ಸೋಲನ್ನು ಕಂಡಿತು. ಟ್ರೈಬ್ಲೇಜರ್ ತಂಡದ ಆರಂಭ ಉತ್ತಮವಾಗಿತ್ತು. ನಾಯಕಿ ಸ್ಮತಿ ಮಂಧನಾ ಎರಡನೆಯವರಾಗಿ ಔಟ್‌ ಆದಾಗ ತಂಡ 7.2 ಓವರ್‌ಗಳಲ್ಲಿ ಎರಡು ವಿಕೆಟಿಗೆ 63 ರನ್‌ ಗಳಿಸಿತ್ತು. ಮಂಧನಾ 23 ಎಸೆತ ಎದುರಿಸಿ 34 ರನ್‌ ಗಳಿಸಿದರು. ಇದು ತಂಡದ ಆಟಗಾರ್ತಿಯೊಬ್ಬರ ಗರಿಷ್ಠ ಮೊತ್ತವೂ ಆಗಿದೆ. ಆಬಳಿಕ ತಂಡವು ನಾಟಕೀಯ ಕುಸಿತ ಕಂಡಿತು. ಮುಂದಿನ 10 ರನ್‌ ಗಳಿಸುವಷ್ಟರಲ್ಲಿ ತಂಡವು ಮತ್ತೆ 5 ವಿಕೆಟ್‌ಗಳನ್ನು ಕಳೆದುಕೊಂಡು ಶೋಚನೀಯ ಸ್ಥಿತಿಗೆ ಬಿತ್ತು. ಅಂತಿಮವಾಗಿ 9 ವಿಕೆಟಿಗೆ 114 ರನ್‌ ಗಳಿಸಲಷ್ಟೇ ಶಕ್ತವಾಗಿ ಸೋಲನ್ನು ಒಪ್ಪಿಕೊಂಡಿತು. ಪೂಜಾ ವಸ್ತ್ರಾಕರ್‌ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 12 ರನ್‌ ನೀಡಿ 4 ವಿಕೆಟ್‌ ಕಿತ್ತು ಗೆಲುವಿನ ರೂವಾರಿಯಾದರು.

ಮುಂದಿನ ವರ್ಷದಿಂದ ಮಹಿಳೆಯರ ಪೂರ್ಣಪ್ರಮಾಣದ ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಈಗಾಗಲೆ ಸಿದ್ಧತೆ ಆರಂಭಿಸಿದೆ. ಹೀಗಾಗಿ ಅದಕ್ಕೆ ಪೂರ್ವಸಿದ್ಧತೆಯಂತಿರುವ ವುಮೆನ್ಸ್ ಟಿ20 ಚಾಲೆಂಜ್ ಈ ವರ್ಷವೇ ಕೊನೆಯದಾಗಿರಲಿದೆ. ಅನುಭವಿ ಆಟಗಾರ್ತಿಯರಾದ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ ಈ ಸಲದ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ.

ವುಮೆನ್ಸ್ ಟಿ20 ಚಾಲೆಂಜ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಸೂಪರ್‌ನೋವಾಸ್ ಹಾಗೂ ವೆಲೋಸಿಟಿ ನಡುವೆ ಕಾದಾಟ ನಡೆಯಲಿದೆ. ಈ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:41 am, Tue, 24 May 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ