ವಿಜಯಪುರ: ಸುಮಾರು ಒಂದು ಕಿಲೋ ಮೀಟರ್ ಗೂ ಆಧಿಕ ಉದ್ದದ ಹಗ್ಗವನ್ನು ದವಡೆಯೊಳಗೆ ಹಾಕಿಕೊಂಡು ಎಳೆದು ಪುರವಂತನೋರ್ವ ಸಾಧನೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಹಗ್ಗವನ್ನು ದವಡೆ ಹಲ್ಲಿನೊಳಗಿಂದ ಎಳೆದು ಜನರನ್ನು ಚಕಿತಗೊಳ್ಳುವಂತೆ ಮಾಡಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ಶ್ರೀ ಗುರುಪಾದೇಶ್ವರ ಜಾತ್ರಾ ಮಹೋತ್ಸವದಲ್ಲಿ ಪುರವಂತರು ತಮ್ಮ ಸೇವೆ ಮಾಡುತ್ತಾರೆ. ಈ ವೇಳೆ ಪುರವಂತ ಚೆನ್ನಪ್ಪ ಎಂಬುವವರು 1066 ಮೀಟರ್ ಉದ್ದದ ಹಗ್ಗವನ್ನು ಶಸ್ತ್ರದ ಮೂಲಕ ದವಡೆಯೊಳಗೆ ಹಾಕಿಕೊಂಡು ಹೊರಗಡೆ ಎಳೆದಿದ್ದಾರೆ. ಇತರೆ ಪುರವಂತರು ಚೆನ್ನಪ್ಪಗೆ ಸಾಥ್ ನೀಡಿದ್ರು. ದವಡೆಯೊಳಗಿನಿಂದ ಹಗ್ಗವನ್ನು ಎಳೆಯುವುದನ್ನು ಕಂಡ ಭಕ್ತರು ಆಶ್ಚರ್ಯ ಚಕಿತರಾಗಿದ್ದಾರೆ. 1066 ಮೀಟರ್ ಹಗ್ಗವನ್ನು ದವಡೆಯೊಳಗಿನಿಂದ ಎಳೆಯೋದು ಅಷ್ಟು ಸುಲಭದ ಮಾತಲ್ಲ. ಆದರೆ ಪುರವರಂತ ಚೆನ್ನಪ್ಪ ದವಡೆಯಲ್ಲಿಂದ ಹಗ್ಗವನ್ನು ಎಳೆದು ಸಾಧನೆ ಮಾಡಿದ್ದಾರೆ. ಗುರುಪಾದೇಶ್ವರ ಮಠದ ಪೀಠಾಧಿಪತಿ ಶ್ರೀ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಹಾಗೂ ಭಕ್ತರು ಪುರವಂತ ಚೆನ್ನಪ್ಪನ ಸಾಧನೆಗೆ ಶ್ಲಾಘಿಸಿದ್ದಾರೆ.
ಅಶೋಕ ಯಡಳ್ಳಿ, ಟಿವಿ9 ವಿಜಯಪುರ
ಇದನ್ನೂ ಓದಿ: Realme GT 2: ಮಾರುಕಟ್ಟೆಯಲ್ಲಿ ಮೋಡಿ ಮಾಡುತ್ತಿರುವ ರಿಯಲ್ ಮಿ GT 2 ಸರಣಿ ಸ್ಮಾರ್ಟ್ಫೋನ್: ಮುಂದಿನ ವಾರ ಬಿಡುಗಡೆ
Published On - 1:49 pm, Fri, 17 December 21