ಬೀದರ್: ಲಿಂಗಾಯತ ನಾಯಕರನ್ನು ಬಿಜೆಪಿ ಕಡೆಗಣಿಸಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ‘ರಾಹುಲ್ ಗಾಂಧಿಗೆ ಧಮ್ ಇದ್ದರೆ ಲಿಂಗಾಯತ ನಾಯಕರನ್ನ ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಲಿ ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ. ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಬಿಜೆಪಿ ಡ್ಯಾಮೇಜ್ ಕಂಟ್ರೊಲ್ಗೆ ಮುಂದಾಗಿದೆ ಎಂಬ ಪ್ರಶ್ನೆಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ ‘ನಮ್ಮಲ್ಲಿ ಯಾವುದೇ ಡ್ಯಾಮೇಜ್ ಆಗಿಲ್ಲ, ಕಂಟ್ರೋಲ್ ಮಾಡೋದೆನಿದೆ. ಎಲ್ಲಾ ಸಮುದಾಯಕ್ಕೆ ನ್ಯಾಯ ಕೊಡುವಂತ ಕೆಲಸ ನಮ್ಮ ಸರ್ಕಾರ ಮಾಡಿದೆ. ಲಿಂಗಾಯತ ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಮಾನ್ಯತೆ ನೀಡಿದೆ ಎಂದಿದ್ದಾರೆ.
ಲಿಂಗಾಯತ ಸಮಾಜವನ್ನ ಒಡೆಯುವಂತ ಕೆಲಸ ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ 50 ವರ್ಷದಿಂದ ಲಿಂಗಾಯತರನ್ನ ಸಿಎಂ ಮಾಡಿಲ್ಲ. ಕಾಂಗ್ರೆಸ್‌ನಲ್ಲಿ ಎಸ್.ನಿಜಲಿಂಗಪ್ಪ ಹೊರತುಪಡಿಸಿದರೇ ಲಿಂಗಾಯತ ಸಿಎಂ ಯಾರೂ ಕೂಡ ಆಗಿಲ್ಲ. ಇದರ ಜೊತೆ ಕಾಂಗ್ರೆಸ್ ವಿರೇಂದ್ರ ಪಾಟೀಲ್ರನ್ನ ಎಷ್ಟು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಎಂದು ಕಾಂಗ್ರೆಸ್ ಟೀಕೆಗೆ ಪ್ರತ್ಯುತ್ತರ ನೀಡಿದ್ದಾರೆ.
ಇದನ್ನೂ ಓದಿ:ರಾಜ್ಯ ಚುನಾವಣಾ ಅಖಾಡದಲ್ಲಿ ಬಿಗ್ ಟ್ವಿಸ್ಟ್: ನಾಮಪತ್ರ ಸಲ್ಲಿಸಲು ಹೋಗುತ್ತಿದ್ದೇನೆ ಎಂದ ಡಿಕೆ ಸುರೇಶ್
ದಮ್ ಇದ್ದರೆ ಕಾಂಗ್ರೆಸ್ನಿಂದ ಒಬ್ಬ ಲಿಂಗಾಯತ ಸಿಎಂ ಮಾಡಲಿ ಎಂಬ ಬೊಮ್ಮಾಯಿ ಹೇಳಿಕೆಗೆ ಎಂ ಬಿ ಪಾಟೀಲ್ ತಿರುಗೇಟು
ವಿಜಯಪುರದಲ್ಲಿ ಲಿಂಗಾಯತ ಸಿಎಂ ಎಂಬ ಬೊಮ್ಮಾಯಿಯವರ ಹೇಳಿಕೆಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಲಿಂಗಾಯತ ನಾಯಕ ಎಂ.ಬಿ ಪಾಟೀಲ್ ಮಾತನಾಡಿ ‘ಬಸವರಾಜ್ ಬೊಮ್ಮಾಯಿಯವರು ಆಕ್ಸಿಡೆಂಟಲ್ ಚೀಫ್ ಮಿನಿಸ್ಟರ್. ಲಿಂಗಾಯತ ನಾಯಕ ಯಡಿಯೂರಪ್ಪರನ್ನು ಕೆಳಗಿಳಿದಾಗ ನಾನೇ ಮೊದಲು ವಿರೋಧ ಮಾಡಿದೆ. ನಂತರ ಶಾಮನೂರು ಶಿವಶಂಕರಪ್ಪ ಹಾಗೂ ಸ್ವಾಮೀಜಿಗಳು ವಿರೋಧ ಮಾಡಿದರು. ಆಗ ಎಚ್ಚೆತ್ತುಕೊಂಡು ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದರು. ಆದರೆ ಬಸವರಾಜ್ ಬೊಮ್ಮಾಯಿ ಅವರನ್ನು ಸಿಎಂ ಮಾಡೋ ಉದ್ದೇಶ ಅವರಗಿರಲಿಲ್ಲ ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.
ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿಗಳನ್ನ ಶಾಸಕಾಂಗ ಸಭೆಯಲ್ಲಿ ಶಾಸಕರ ಅಭಿಪ್ರಾಯ ತೆಗೆದುಕೊಳ್ಳಲಾಗುತ್ತದೆ. ಬಳಿಕ ಹೈಕಮಾಂಡ್ ವೀಕ್ಷಕರನ್ನು ಕಳುಹಿಸುತ್ತಾರೆ. ಅವರ ಅಭಿಪ್ರಾಯ ಪಡೆದು ಎಐಸಿಸಿ ಅಧ್ಯಕ್ಷರು ಇತರ ನಾಯಕರು ಕೂಡಿ ಮುಖ್ಯಮಂತ್ರಿ ಅಭ್ಯರ್ಥಿಯನ್ನ ಘೋಷಣೆ ಮಾಡುತ್ತಾರೆ. ಹೀಗಾಗಿ ಮುಖ್ಯಮಂತ್ರಿ ಅಭ್ಯರ್ಥಿಯನ್ನ ಘೋಷಣೆ ಮಾಡುವ ಪ್ರಶ್ನೆ ಯಾವತ್ತೂ ಉದ್ಭವಿಸಿಲ್ಲ. ಈ ಹಿಂದೆ ವೀರೇಂದ್ರ ಪಾಟೀಲ್ರನ್ನು ಸಿಎಂ ಮಾಡಿದಾಗಲೂ ಕೂಡ ಆಗಿನ 176 ಜನ ಶಾಸಕರ ಅಭಿಪ್ರಾಯ ತೆಗೆದುಕೊಂಡು ಮಾಡಲಾಗಿತ್ತು ಎಂದಿದ್ದಾರೆ.
ಬಸವರಾಜ್ ಬೊಮ್ಮಾಯಿಯವರು ಪದೇ ಪದೇ ತಾಕತ್ತು ಮಾತನಾಡುತ್ತಾರೆ. ದಮ್ ತಾಕತ್ತು ಇವೆಲ್ಲ ಈಗ ಹೋಗಿದ್ದಾವೆ ಎಂದು ಹೇಳಿದ ಎಂಬಿ ಪಾಟೀಲ್. ಇವರಿಗೆ ಒಂದೇ ಒಂದು ಮನೆಯನ್ನ ಕಟ್ಟುವ ದಮ್ ಇಲ್ಲ. ನಾಲ್ಕು ವರ್ಷದಲ್ಲಿ ಒಂದು ಮನೆ ಕಟ್ಟಿಲ್ಲ. ದಮ್ ತಾಕತ್ತು ಇದ್ದರೆ ಬಡವರಿಗೆ ಒಂದು ಮನೆ ಕಟ್ಟಬೇಕಿತ್ತು. ಇವರು ದಮ್ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಲಿಂಗಾಯತ ಧರ್ಮವನ್ನ ಒಡೆಯಲು ಹೋದ ಕಾಂಗ್ರೆಸ್ಸಿಗರಿಗೆ ಆ ಕುರಿತು ಮಾತನಾಡುವ ನೈತಿಕ ಹಕ್ಕಿಲ್ಲ ಎಂಬ ಸಿಎಂ ಹೇಳಿಕೆಗೆ ಎಂಬಿಪಿ ಉತ್ತರ ನೀಡಿದ್ದು, ‘ಲಿಂಗಾಯತ ಧರ್ಮವನ್ನು ಯಾರೂ ಒಡೆದೇ ಇಲ್ಲ. ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದವರು ಬಸವಣ್ಣನವರು. 98 ಉಪಜಾತಿಗಳನ್ನ ಕೂಡಿಸಿ ಪ್ರತ್ಯೇಕ ಸ್ಥಾನಮಾನವನ್ನ ಕೇಳಿದ್ದು, ಭವಿಷ್ಯದಲ್ಲಿ ನಮ್ಮ ಮಕ್ಕಳಿಗೆ ಶಿಕ್ಷಣ ಉದ್ಯೋಗ ಸಿಗಬೇಕೆಂಬ ಕಾರಣದಿಂದ ಎಲ್ಲ ಉಪ ಪಂಗಡಗಳನ್ನು ಕೂಡಿಸಿ ಮಾಡಿದ್ದೇವು. ನಾವು ಯಾವ ಧರ್ಮ ಒಡೆದಿಲ್ಲ. ಆ ಕುರಿತು ಅಪಪ್ರಚಾರ ಮಾಡಿದವರು ಬಿಜೆಪಿಯವರು ಎಂದಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ