ಮುಸ್ಲಿಂ ಧರ್ಮಗುರು ವಿರುದ್ಧ ಮತ್ತೆ ಗುಡುಗಿದ ಯತ್ನಾಳ್​​: ತನ್ವೀರ್​​​ ಪೀರಾ ಕೊಲೆ ಆರೋಪಿ ಎಂದು ಟ್ವೀಟ್​

| Updated By: ವಿವೇಕ ಬಿರಾದಾರ

Updated on: Dec 08, 2023 | 9:58 AM

ವಿಜಯಪುರದ ಹಾಸೀಂಪೀರಾ ದರ್ಗಾದ ಧರ್ಮ ಗುರು ಸಯ್ಯದ್ ಮೊಹಮ್ಮದ್ ತನ್ವೀರ್​​​ ಪೀರಾ ಹಾಸ್ಮೀಂ ಅವರಿಗೆ ಉಗ್ರರ ಜೊತೆ ನಂಟಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಆರೋಪ ಮಾಡಿದ್ದರು. ಇದೀಗ ಬಸನಗೌಡ ಪಾಟೀಲ್​ ಯತ್ನಾಳ್ ಅವರು ತನ್ವೀರ್​​​ ಪೀರಾ ವಿರುದ್ಧ ಮತ್ತೊಂದು ಆರೋಪ ಮಾಡಿದ್ದಾರೆ.

ಮುಸ್ಲಿಂ ಧರ್ಮಗುರು ವಿರುದ್ಧ ಮತ್ತೆ ಗುಡುಗಿದ ಯತ್ನಾಳ್​​: ತನ್ವೀರ್​​​ ಪೀರಾ ಕೊಲೆ ಆರೋಪಿ ಎಂದು ಟ್ವೀಟ್​
ಬಸನಗೌಡ ಪಾಟೀಲ್​ ಯತ್ನಾಳ್​, ತನ್ವಿರ್​ ಪೀರಾ
Follow us on

ವಿಜಯಪುರ, ಡಿಸೆಂಬರ್​ 08: ಹುಬ್ಬಳ್ಳಿಯಲ್ಲಿ (Hubballi) ನಡೆದ ಮುಸ್ಲಿಂ ಸಮಾವೇಶದಲ್ಲಿ ಮುಖ್ಯ ಸಿದ್ದರಾಮಯ್ಯ (Siddaramaiah) ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಸಯ್ಯದ್ ಮೊಹಮ್ಮದ್ ತನ್ವೀರ್​​​ ಪೀರಾ ಹಾಸ್ಮೀಂ ಅವರಿಗೆ ಉಗ್ರರ ಜೊತೆ ನಂಟಿದೆ ಎಂದು ವಿಜಯಪುರದ (Vijyapura) ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ (Basangouda Patil Yatnal)​ ಆರೋಪ ಮಾಡಿದ್ದರು. ಇದೀಗ ಬಸನಗೌಡ ಪಾಟೀಲ್​ ಯತ್ನಾಳ್​ ಅವರು ತನ್ವೀರಾ ಪೀರಾ (Tanveer Peera) ಅವರ ವಿರುದ್ಧ ಮತ್ತೊಂದು ಆರೋಪ ಮಾಡಿದ್ದಾರೆ. ಧರ್ಮಗುರು ತನ್ವೀರ್​ ಪೀರಾ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾರೆ ಎಂದು ಬಸನಗೌಡ ಪಾಟೀಲ್​ ಯತ್ನಾಳ್​ ಅವರು ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್ (ಹಿಂದಿನ ಟ್ವಿಟರ್​) ನಲ್ಲಿ ಪೋಸ್ಟ್​​ ಮಾಡಿದ್ದಾರೆ. “ತನ್ವೀರ್ ಪೀರಾ ಕೊಲೆ ಕೇಸ್ ಒಂದರಲ್ಲಿ ಆರೋಪಿತನಾಗಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿಯು ಸಾಕ್ಷಿ ನಾಶ ಮಾಡುವುದಲ್ಲದೆ, ನಮ್ಮ ಕುಟುಂಬಕ್ಕೆ, ಕಾರ್ಯಕರ್ತರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿರುವ ಪತ್ರ” ಸಮೇತ ಟ್ವೀಟ್​ ಮಾಡಿದ್ದಾರೆ.

“ಕೊಲೆ ಪ್ರಕರಣದಲ್ಲಿ ಈತನ ಮೇಲೆ ಪೊಲೀಸರು ಹಾಕಿದ್ದ ದೋಷಾರೋಪ ಪಟ್ಟಿ (ಚಾರ್ಜಶೀಟ್) ನಿಂದ ಈತನ ಹೆಸರು ಕೈಬಿಟ್ಟಿದ್ದು ಏಕೆ ? ಯಾರ ಒತ್ತಡದಿಂದ ಈತನ ಹೆಸರನ್ನು ಚಾರ್ಜಶೀಟ್​ನಿಂದ ತೆಗಿಸಲಾಯಿತು? ತನಿಖೆ ವೇಳೆ ಕೊಲೆಯಲ್ಲಿ ಈತ ಭಾಗಿಯಾಗಿದ್ದ ಎಂಬ ಶಂಕೆಯಿಂದ ಚಾರ್ಜಶೀಟ್​ನಲ್ಲಿ ಮೊದಲು ಈತನ ಹೆಸರನ್ನು ಹಾಕಿ, ನಂತರ ತೆಗೆದು ಹಾಕಿದ್ದು ಯಾರ ಒತ್ತಡದಿಂದ ಎಂದು ಸರ್ಕಾರ ಹೇಳಲಿ” ಎಂದು ಒತ್ತಾಯಿಸಿದರು.

ಇದನ್ನೂ ಓದಿ: ತನ್ವೀರ್ ಪೀರಾಗೆ ಐಸಿಸ್ ನಂಟು: ಯತ್ನಾಳ್​ ಸಾಬೀತುಪಡಿಸಿದರೆ ದೇಶ ಬಿಟ್ಟು ಹೋಗುತ್ತೇನೆ ಎಂದ ಮುಸ್ಲಿಂ ಧರ್ಮಗುರು

“ವೇದಿಕೆ ಮೇಲೆ ಕೊಲೆ ಆರೋಪಿತನಿಗೆ ಏನು ಕೆಲಸ ? ಇವನನ್ನು ವೇದಿಕೆ ಮೇಲೆ ಏಕೆ ಬಿಟ್ಟರು ? ಒಂದು ಬಡ ಕುಟುಂಬಕ್ಕೆ ಬೆದರಿಕೆ ಒಡ್ಡುವ ವ್ಯಕ್ತಿ ಅಥವಾ ವ್ಯಕ್ತಿಗಳೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಶ್ಯಕತೆ ಏನಿತ್ತು? ಈತನ ಬಗ್ಗೆ ಇನ್ನಷ್ಟು ಮಾಹಿತಿ ಅತಿ ಶೀಘ್ರದಲ್ಲೇ ಹಂಚಿಕೊಳ್ಳಲಿದ್ದೇನೆ. ಈತ ದೇಶದಿಂದ ಕಾಲ್ಕಿತ್ತುವ ಸಾಧ್ಯತೆಗಳಿದ್ದು ಪೊಲೀಸರು ಹಾಗೂ ಗುಪ್ತಚರ ಇಲಾಖೆ ತನ್ವೀರ್​ ಪೀರಾನ ಮೇಲೆ ನಿಗಾ ವಹಿಸಬೇಕು” ಎಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯನವರು “ನಮ್ಮ ಪೊಲೀಸರು ತನ್ವೀರ್​ ಪೀರಾ ಮನೆಗೆ ಹೋಗೋದು ಬೇಡ ಅಂತಾರೆ”. ಹೀಗೆ ಅಂದ ಮೇಲೂ ಸ್ವತಃ ಸಿದ್ದರಾಮಯ್ಯನವರೇ ತನ್ವೀರ್​ ಪೀರಾ ಅವರ ಮನೆಗೆ ಹೋಗಿರುವುದು ಓಲೈಕೆ ಅಲ್ಲದೆ ಮತ್ತೇನು? ಪೊಲೀಸರು ಸೂಕ್ಷ್ಮವಾಗಿ ಅವರ ಮನೆಗೆ ಹೋಗೋದು ಬೇಡ ಸಮಯ ಆಗಿದೆ ಅಂತ ಹೇಳಿದ ಮೇಲೂ ಸಿದ್ದರಾಮಯ್ಯನವರು ಪೀರಾ ಮನೆಗೆ ಭೇಟಿ ಕೊಟ್ಟಿದ್ದರು” ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:56 am, Fri, 8 December 23