ಇದನ್ನು ಸೋಲು ಎಂದು ಕರೆಯುವುದಿಲ್ಲ: ಸಿಂದಗಿಯ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 02, 2021 | 4:06 PM

ಈಗ ಸೋತಿರಬಹುದು, ಆದರೆ ಹೆಚ್ಚು ಮತ ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಎತ್ತರಕ್ಕೆ ಒಯ್ದಿದ್ದೇನೆ ಎಂಬ ಸಮಾಧಾನವಿದೆ. ಇನ್ನಷ್ಟು ಗಟ್ಟಿಯಾಗಿ ಕೆಲಸ ಮಾಡುತ್ತೇನೆ ಎಂದು ನುಡಿದರು

ಇದನ್ನು ಸೋಲು ಎಂದು ಕರೆಯುವುದಿಲ್ಲ: ಸಿಂದಗಿಯ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ
ಸಿಂದಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀನಿವಾಸ ಮಾನೆ
Follow us on

ವಿಜಯಪುರ: ಕ್ಷೇತ್ರದ ಜನ 60 ಸಾವಿರಕ್ಕೂ ಹೆಚ್ಚು ಮತ ನೀಡಿದ್ದಾರೆ‌‌. ಬಿಜೆಪಿಯವರು ದುಡ್ಡಿನಿಂದ ಉಪಚುನಾವಣೆ ಗೆದ್ದಿದ್ದಾರೆ. ನನಗೆ ಮತ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಿಂದಗಿ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಹೇಳಿದರು. ಉಪಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಮಾತನಾಡಿದ ಅವರು, ನಾನು ಇದನ್ನು ಸೋಲು ಎಂದು ಕರೆಯುವುದಿಲ್ಲ. ನನಗೆ ಸ್ವಲ್ಪ ಅನುಭವದ ಕೊರತೆಯೂ ಇರಬಹುದು. ಎಲ್ಲಿ ಎಡವಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ಅನುಕಂಪದ ಆಧಾರದ ಮೇಲೆ ಸೋತವರು ಈ ಹಿಂದೆಯೂ ಬಹಳಷ್ಟು ಜನರಿದ್ದಾರೆ‌‌. ಇದು ನನಗೆ ಮೊದಲ ಚುನಾವಣೆ. ಸ್ವಲ್ಪ ಅನುಭವದ ಕೊರತೆಯೂ ಇರಬಹುದು. ಈಗ ಸೋತಿರಬಹುದು, ಆದರೆ ಹೆಚ್ಚು ಮತ ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಎತ್ತರಕ್ಕೆ ಒಯ್ದಿದ್ದೇನೆ ಎಂಬ ಸಮಾಧಾನವಿದೆ. ಇನ್ನಷ್ಟು ಗಟ್ಟಿಯಾಗಿ ಕೆಲಸ ಮಾಡುತ್ತೇನೆ ಎಂದು ನುಡಿದರು.

ಬಿಜೆಪಿ ವಿರುದ್ಧ ಹಣಹಂಚಿಕೆ ಆರೋಪ ಮಾಡಿದ ಕಾಂಗ್ರೆಸ್
ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ. ಬಿಜೆಪಿಯು ಹಣ ಹಂಚಿಕೆ ಮಾಡಿದ್ದೇ ಕಾಂಗ್ರೆಸ್ ಸೋಲಿಗೆ ಕಾರಣ ವಿಜಯಪುರದಲ್ಲಿ ಮಾಜಿ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ಸಹ ಇಂಥದ್ದೇ ಆರೋಪ ಮಾಡಿದೆ.

ಬಿಜೆಪಿಯವರು ಹಣ ಹಂಚಿ ಉಪಚುನಾವಣೆ ಗೆದ್ದಿದ್ದಾರೆ‌. ಸಿಂದಗಿ ಕ್ಷೇತ್ರದಲ್ಲಿ ಈ ಹಿಂದೆ ಎಂದಿಗೂ ಕಾಂಗ್ರೆಸ್ ಇಷ್ಟು ಮತ ಪಡೆದಿರಲಿಲ್ಲ. ಆದರೆ ಈ ಬಾರಿ 60 ಸಾವಿರಕ್ಕೂ ಹೆಚ್ಚು ಮತ ಪಡೆದಿದೆ. ಅಧಿಕ ಮತ ಪಡೆದು ಕಾಂಗ್ರೆಸ್​​ ಪಕ್ಷದ ಮುಂದಿನ ಗೆಲುವಿಗೆ ಈ ಉಪ ಚುನಾವಣೆಯು ಬುನಾದಿ ಹಾಕಿದೆ. ಮುಂದಿನ ದಿನಗಳಲ್ಲಿ ಖಂಡಿತ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಅವರು ನುಡಿದರು.

ನಮ್ಮ ಅಭ್ಯರ್ಥಿ ಅಶೋಕ ಮನಗೂಳಿ ನಾವು ಸೋತಿದ್ದರೂ ಇದು ನಮ್ಮ ಸೋಲಲ್ಲ. ಎಂ.ಸಿ.ಮನಗೂಳಿ ಅಕಾಲಿಕ ಮರಣದಿಂ ಅವರ ಪುತ್ರನಿಗೆ ಆಸರೆಯಾಗಬೇಕಿದ್ದ ಒದಗಬೇಕಿದ್ದ ಅನುಕಂಪದ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಅವರು, ಎಲ್ಲ ಕಾಲದಲ್ಲೂ ಅನುಕಂಪ ಫಲ ಕೊಡುವುದಿಲ್ಲ. ಆದರೂ ಮತದಾರರು ಇಷ್ಟೊಂದು ಸಂಖ್ಯೆಯಲ್ಲಿ ಮತ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಶಿವಾನಂದ ಪಾಟಿಲ್ ಹೇಳಿದರು.

ಇದನ್ನೂ ಓದಿ: Sindagi By Election Winner: ಸಿಂದಗಿ ಅಸೆಂಬ್ಲಿ ಗದ್ದುಗೆ ಬಿಜೆಪಿಗೆ, ರಮೇಶ ಭೂಸನೂರ ಜಯಭೇರಿ
ಇದನ್ನೂ ಓದಿ:

Published On - 4:05 pm, Tue, 2 November 21