Sindagi By Election Winner: ಸಿಂದಗಿ ಅಸೆಂಬ್ಲಿ ಗದ್ದುಗೆ ಬಿಜೆಪಿಗೆ, ರಮೇಶ ಭೂಸನೂರ ಜಯಭೇರಿ- ಫಲಿತಾಂಶ ಅಧಿಕೃತ ಘೋಷಣೆ ಬಾಕಿ

Ramesh Bhusanur: ನಿರಂತರವಾಗಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ರಮೇಶ ಭೂಸನೂರ ಅವರು ಪ್ರತಿ ಹಂತದ ಮತ ಎಣಿಕೆಯಲ್ಲೂ ಮತ ಅಂತರವನ್ನು ಹಿಗ್ಗಿಸಿಕೊಳ್ಳುತ್ತಾ ಮುನ್ನಡೆದರು.

Sindagi By Election Winner: ಸಿಂದಗಿ ಅಸೆಂಬ್ಲಿ ಗದ್ದುಗೆ ಬಿಜೆಪಿಗೆ, ರಮೇಶ ಭೂಸನೂರ ಜಯಭೇರಿ- ಫಲಿತಾಂಶ ಅಧಿಕೃತ ಘೋಷಣೆ ಬಾಕಿ
ಸಿಂದಗಿ ಅಸೆಂಬ್ಲಿ ಗದ್ದಿಗೆ ಆಡಳಿತಾರೂಢ ಬಿಜೆಪಿಗೆ, ರಮೇಶ ಭೂಸನೂರ ಜಯಭೇರಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 02, 2021 | 6:38 PM

ವಿಜಯಪುರ: ಸಿಂದಗಿ ಅಸೆಂಬ್ಲಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಜಯಭೇರಿ ಬಾರಿಸಿದ್ದಾರೆ, ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ. 63 ವರ್ಷದ ರಮೇಶ್ ಭೂಸನೂರ (Bhusanur Ramesh Balappa) ಅವರ ಪರ ಕಾರ್ಯಕರ್ತರು ಘೋಷಣೆ ಕೂಗಿ, ಜಯಕಾರ ಹಾಕುತ್ತಿದ್ದಾರೆ. ತೀವ್ರ ಪೈಪೋಟಿ ನೀಡಿದ್ದ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಠೇವಣಿಯನ್ನೂ ವಾಪಸ್​ ಗಳಿಸದೆ, ಸೋಲನ್ನೊಪ್ಪಿದ್ದಾರೆ. ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಫಲಿತಾಂಶದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಅಭ್ಯರ್ಥಿ ರಮೇಶ್ ಭೂಸನೂರ ಸಮಾಧಾನಕರ ಅಂತರದಲ್ಲಿ ಗೆದ್ದಿದ್ದಾರೆ. ಕರ್ನಾಟಕ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 30 ರಂದು ಉಪಚುನಾವಣೆ ನಡೆದಿತ್ತು.

ನಿರಂತರವಾಗಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ರಮೇಶ ಭೂಸನೂರ ಅವರು ಪ್ರತಿ ಹಂತದ ಮತ ಎಣಿಕೆಯಲ್ಲೂ ಮತ ಅಂತರವನ್ನು ಹಿಗ್ಗಿಸಿಕೊಳ್ಳುತ್ತಾ ಮುನ್ನಡೆದರು. ರಮೇಶ ಭೂಸನೂರ ಪಡೆದಿರುವ ಮತಗಳು 93,380. ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವು ಬಹುತೇಕ ಖಚಿತವಾಗಿದ್ದು, ಬಿಜೆಪಿಯಲ್ಲಿ ಸಂಭ್ರಮ ಮನೆ ಮಾಡಿದೆ.

ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಭರ್ಜರಿ ಗೆಲುವು; ಗಳಿಸಿದ ಮತ ವಿವರ 30,836 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗೆ ಜಯ. ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರಗೆ 93,380 ಮತ. ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಮನಗೂಳಿಗೆ 62,292 ಮತ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿಗೆ 4,321 ಮತ ದೊರೆತಿದೆ.

ಇದನ್ನೂ ಓದಿ:

ಸಿಂದಗಿಯಲ್ಲಿ ಬಿಜೆಪಿ ರಮೇಶ ಭೂಸನೂರ ಜಯಭೇರಿ: ಬಿಜೆಪಿ ಗೆಲುವಿಗೆ ಕಾರಣಗಳು- ಕಾಂಗ್ರೆಸ್ ಹಿನ್ನಡೆಗೆ ಕಾರಣ ಹೀಗಿದೆ

ByElection Sindagiಯಲ್ಲಿ BJP ಅಭ್ಯರ್ಥಿ ರಮೇಶ್​ ಭರ್ಜರಿ ಗೆಲುವು, ಬೆಂಬಲಿಗರ ಸಂಭ್ರಮ |Tv9kannada (bjp candidate Bhusanur Ramesh Balappa win sindagi assembly by election in karnataka)

Published On - 11:46 am, Tue, 2 November 21