Sindagi: ಬಿಜೆಪಿ ರಮೇಶ ಭೂಸನೂರ ಜಯಭೇರಿ; ಬಿಜೆಪಿ ಗೆಲುವಿಗೆ ಕಾರಣಗಳು- ಕಾಂಗ್ರೆಸ್ ಹಿನ್ನಡೆಗೆ ಕಾರಣ ಹೀಗಿದೆ
Bhusanur Ramesh Balappa: ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಭರ್ಜರಿ ಗೆಲುವು; ಗಳಿಸಿದ ಮತ ವಿವರ ಹೀಗಿದೆ: 30,836 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗೆ ಜಯ. ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರಗೆ 93,380 ಮತ. ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಮನಗೂಳಿಗೆ 62,292 ಮತ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿಗೆ 4,321 ಮತ ದೊರೆತಿದೆ.
ವಿಜಯಪುರ: ಸಿಂದಗಿ ಅಸೆಂಬ್ಲಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಜಯಭೇರಿ ಬಾರಿಸಿದ್ದಾರೆ. 63 ವರ್ಷದ ರಮೇಶ್ ಭೂಸನೂರ (Bhusanur Ramesh Balappa) ಅವರ ಪರ ಕಾರ್ಯಕರ್ತರು ಘೋಷಣೆ ಕೂಗಿ, ಜಯಕಾರ ಹಾಕುತ್ತಿದ್ದಾರೆ. ತೀವ್ರ ಪೈಪೋಟಿ ನೀಡಿದ್ದ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಠೇವಣಿಯನ್ನೂ ವಾಪಸ್ ಗಳಿಸದೆ, ಸೋಲನ್ನೊಪ್ಪಿದ್ದಾರೆ. ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಫಲಿತಾಂಶದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ಅಭ್ಯರ್ಥಿ ರಮೇಶ್ ಭೂಸನೂರ ಸಮಾಧಾನಕರ ಅಂತರದಲ್ಲಿ ಗೆದ್ದಿದ್ದಾರೆ. ಕರ್ನಾಟಕ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 30 ರಂದು ಉಪಚುನಾವಣೆ ನಡೆದಿತ್ತು.
<ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಭರ್ಜರಿ ಗೆಲುವು; ಗಳಿಸಿದ ಮತ ವಿವರ 30,836 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗೆ ಜಯ. ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರಗೆ 93,380 ಮತ. ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಮನಗೂಳಿಗೆ 62,292 ಮತ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿಗೆ 4,321 ಮತ ದೊರೆತಿದೆ.
ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರಣಗಳು ಹೀಗಿವೆ: ಮುಂದಿನ ಸಾರ್ವತ್ರಿಕ ಚುನಾವಣೆ ಸನಿಹದಲ್ಲೇ ಇರುವಾಗ ಪ್ರಾಮುಖ್ಯತೆ ಪಡೆದಿದ್ದ ಈ ಉಪಚುನಾವಣೆ ಗಮನಾರ್ಹವಾಗಿತ್ತು. ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು ಪರ ಕಳೆದ ಬಾರಿಯ ಕಡಿಮೆ ಅಂತರದ ಸೋಲಿನ ಅನುಕಂಪ ಕೆಲಸ ಮಾಡಿದೆ. ಪಂಚಮಸಾಲಿ ಮತಗಳು ಕೈ ತಪ್ಪದಂತೆ ಸಚಿವ ಸಿ.ಸಿ. ಪಾಟೀಲ್ ಹೆಗಲಿಗೆ ಜವಾಬ್ದಾರಿ ಹೊರಿಸಲಾಗಿತ್ತು. ಲಿಂಗಾಯತ ವೋಟ್ ಬ್ಯಾಂಕ್ ಗಳಿಸಲು ಸಚಿವ ವಿ. ಸೋಮಣ್ಣ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕೆಲಸ ಮಾಡಿದ್ದಾರೆ. ನಿರೀಕ್ಷೆಗಿಂತ ಹೆಚ್ಚು ಪ್ರಮಾಣದಲ್ಲಿ ಪ್ರಭಾವ ಬೀರಿದ ಯಡಿಯೂರಪ್ಪ ಮತ್ತು ವಿಜಯೇಂದ್ರ ಪ್ರಚಾರ ಮಾಡಿದ್ದರು. ಇಎಲ್ಲದರಿಂದ ಲಿಂಗಾಯತ ಸಮುದಾಯದ ಮತಗಳು ವರ್ಗಾವಣೆ ಆಗದಂತೆ ತಡೆಯುವಲ್ಲಿ ಸಫಲವಾಗಿದ್ದರು.
ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ ಗೆ ಹೋಗದಂತೆ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿ ತಡೆದಿರುವುದು ಬಿಜೆಪಿಗೆ ಪರೋಕ್ಷ ಸಹಾಯವಾಗಿದೆ. ಪ್ರತಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಸಚಿವರನ್ನು ನೇಮಿಸಿ ಕಾರ್ಯತಂತ್ರ ರೂಪಿಸಿದ್ದು, ಶಾಸಕರು ಮತ್ತು ಜಿಲ್ಲಾ ನಾಯಕರು ಗ್ರಾಮಗಳಲ್ಲೇ ವಾಸ್ತವ್ಯ ಹೂಡಿ ಮತದಾರರ ಮನವೊಲಿಕೆಯಲ್ಲಿ ಸಫಲರಾಗಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗೆ ಆಡಳಿತಾರೂಢ ಪಕ್ಷವನ್ನು ಬೆಂಬಲಿಸುವ ಮನಸ್ಥಿತಿಗೆ ಮತದಾರರನ್ನು ಟರ್ನ್ ಮಾಡಿದ್ದು, ಜೆಡಿಎಸ್ ನಿಂದ ಪಕ್ಷಾಂತರಗೊಂಡ ಕೈ ಅಭ್ಯರ್ಥಿಯನ್ನು ಒಪ್ಪಿಕೊಳ್ಳಲು ಮತದಾರ ಹಿಂದೇಟು ಹಾಕಿದ್ದು, ಬಿಜೆಪಿ ನಾಯಕರ ಸಂಘಟಿತ ಪ್ರಚಾರ ಮತ್ತು ಸಿಂದಗಿ ಕ್ಷೇತ್ರದ ಅಭಿವೃದ್ಧಿಯ ವಿಚಾರ ಪ್ರಚಾರ ಮಾಡಿದ್ದು, ಹಿಂದೂಪರ ಸಂಘಟನೆಗಳು ತೆರೆಮರೆಯಲ್ಲಿ ನಡೆಸಿದ ಪ್ರಚಾರದಿಂದಾಗಿ ಹಿಂದೂ ಮತಗಳ ಕ್ರೋಢೀಕರಣವಾಗಿದ್ದು, ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರನ್ನು ಪೂರ್ಣ ವಿಶ್ವಾಸಕ್ಕೆ ತೆಗೆದುಕೊಂಡಿದ್ದು ಆಡಳಿತಾರೂಢ ಬಿಜೆಪಿಗೆ ವರವಾಗಿದೆ.
ಇನ್ನು ಸಿಂಧಗಿಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಕಾರಣಗಳು ಹೀಗಿವೆ: ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯ ಬಗ್ಗೆ ಸ್ಥಳೀಯ ನಾಯಕರಲ್ಲಿ ಅಸಮಾಧಾನ ಉದ್ಭವಿಸಿದ್ದು. ಜೆಡಿಎಸ್ ನಿಂದ ಬಂದ ಅಶೋಕ್ ಗೆ ಟಿಕೆಟ್ ನೀಡಿದ್ದಕ್ಕೆ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದ್ದು. ಸ್ಥಳೀಯ ತಾಲೂಕ ಅಧ್ಯಕ್ಷ ಶರಣಪ್ಪ ಸೇರಿದಂತೆ ಹಲವು ಮೂಲ ಕಾಂಗ್ರೆಸ್ಸಿಗರು ಒಲ್ಲದ ಮನಸ್ಸಿನಿಂದಲೇ ಪ್ರಚಾರ ಕೆಲಸದಲ್ಲಿ ತೊಡಗಿದ್ದು. ಕಾಂಗ್ರೆಸ್ ಕಾರ್ಯಕರ್ತರ ಜೊತೆ ಅಶೋಕ್ ಹೊಂದಾಣಿಕೆ ಮಾಡಿಕೊಳ್ಳದಿರುವುದು . ಪರ್ಯಾಯ ಕಾರ್ಯಕರ್ತರು ಬೆಂಬಲಿಗರ ಪಡೆ ಕಟ್ಟಿಕೊಂಡು ಕೆಲಸ ಮಾಡಿದ್ದು.
ಕಳೆದ ಒಂದು ವರ್ಷದಿಂದ ತಮ್ಮ ಬೆಂಬಲಿಗರ ಜೊತೆಯಷ್ಟೆ ಕೆಲಸ ಮಾಡಿಕೊಂಡಿದ್ದು. ಕೈ ಲೆಕ್ಕಾಚಾರದಂತೆ ಕಾಂಗ್ರೆಸ್ ಪರವಾಗಿ ಧ್ರುವಿಕರಣವಾಗದ ಪಂಚಮಸಾಲಿ ಮತಗಳು. ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳಾದ ತಳವಾರ ಪರಿವಾರ ಮತಗಳು ಈ ಬಾರಿ ಬಿಜೆಪಿ ಪರ ಒಲವು ತೋರಿದ್ದು. ಅಹಿಂದ ಮತಗಳು ಕೂಡ ಕಾಂಗ್ರೆಸ್ ನಿಂದ ದೂರವಾಗಿದ್ದು. ಬಿಜೆಪಿಗೇ ಹೆಚ್ಚಿನ ಮತ ಹಾಕಿದ ಅಲ್ಪಸಂಖ್ಯಾತ ಸಮುದಾಯ ಮತದಾರರು.
ಈಶ್ವರಪ್ಪ, ಎಂಟಿಬಿ ನಾಗರಾಜ್ ಹಾಗೂ ಭೈರತಿ ಬಸವರಾಜ್ ರಿಂದ ಕುರುಬ ಮತ ಸೆಳೆಯುವಲ್ಲಿ ಯಶಸ್ವಿಯಾಗಿದ್ದು. ಯಡಿಯೂರಪ್ಪ ಹಾಗೂ ವಿ ಸೋಮಣ್ಣ ಲಿಂಗಾಯಿತ ಮತಗಳನ್ನ ಆದಷ್ಟು ಬಿಜೆಪಿ ಪರ ಹಿಡಿದಿಟ್ಟುಕೊಂಡಿದ್ದು. ಯತ್ನಾಳ್ ಮೂಲಕ ಪಂಚಮ ಸಾಲಿ ಮತಗಳನ್ನ ಚದುರಿಸಿದ್ದು ಬಿಜೆಪಿ ಗೆಲುವಿಗೆ ಪೂರಕವಾಯಿತು. ಕಾಂಗ್ರೆಸ್ ನಾಯಕರು ದೊಡ್ಡ ಸಮಾವೇಶ ಮಾಡಿದರೂ ಕಾರ್ಯಕರ್ತರು ಮಾತ್ರ ಅಭ್ಯರ್ಥಿಯಿಂದ ದೂರವೇ ಉಳಿದುಬಿಟ್ಟರು!
ByElection Sindagiಯಲ್ಲಿ BJP ಅಭ್ಯರ್ಥಿ ರಮೇಶ್ ಭರ್ಜರಿ ಗೆಲುವು, ಬೆಂಬಲಿಗರ ಸಂಭ್ರಮ |Tv9kannada
(bjp Bhusanur Ramesh Balappa win sindagi assembly by election reasons for win)
Published On - 12:21 pm, Tue, 2 November 21