Vijayapur: ಧೂಳಾಪುರ ಎಂದೇ ಜರಿಯಲಾಗುತಿದ್ದ ವಿಜಯಪುರ ಈಗ ಶುದ್ದಗಾಳಿ ಇರುವ ಜಿಲ್ಲೆಗಳ ಪಟ್ಟಿಯಲ್ಲಿ ನಿರೀಕ್ಷೆ ಮೀರಿ 6ನೇ ಸ್ಥಾನ ಪಡೆದಿದೆ! ಏನೀ ಬದಲಾವಣೆ?
Swachh Bharat India Cleanest City Vijayapur: ಈ ಕುರಿತು ಮಾತನಾಡಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಈ ಹಿಂದೆ ವಿಜಯಪುರ ಮಹಾನಗರವನ್ನು ಧೂಳಾಪುರ ಎಂದು ಜರಿಯಲಾಗುತಿತ್ತು. ಆದರೆ ಈಗ ನಾನಾ ಅಭಿವೃದ್ಧಿಪರ ಕಾಳಜಿಯಿಂದ ಮಾದರಿ ನಗರವಾಗಿ ರೂಪುಗೊಂಡಿದೆ. ನಗರದಲ್ಲಿನ ದುರವಸ್ಥೆಯಿಂದಾಗಿ ನಗರದ ಜನರು ಅಸ್ತಮಾ ಸೇರಿದಂತೆ ಇತರೆ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇದೀಗ ಧೂಳು ಮಾಯವಾಗಿರುವ ಕಾರಣ ಜನರಿಗೆ ರೋಗಗಳಿಂದ ಮುಕ್ತಿ ಸಿಗುತ್ತಿದೆ ಎಂದಿದ್ದಾರೆ.
Swachh Bharat: ವಿಜಯಪುರ ಜಿಲ್ಲೆ ಅಂದರೆ ಸಾಕು ಬರೀ ಧೂಳಿನ ನಗರ, ಬರಗಾಲದ ಊರು, ಸುಡು ಬಿಸಿಲಿನ ಜಿಲ್ಲೆ ಎಂದೆಲ್ಲಾ ವಿಶೇಷಣಗಳಿಂದ ಕರೆಯಲಾಗುತ್ತದೆ. ಇನ್ನು ಗುಳೆ ಹೋಗುವವರ ನಾಡು ಎಂದೂ ಕರೆಯುತ್ತಾರೆ. ಕಾರಣ ಮಳೆಯ ಪ್ರಮಾಣ ಕಡಿಮೆಯಿದ್ದು ಅರಣ್ಯದ ಪ್ರಮಾಣವೂ ಅತೀ ಕಡಿಮೆಯಿದೆ. ಆದ್ದರಿಂದ ಕೆಲಸ ಅರಸಿ ಅನ್ಯ ರಾಜ್ಯಗಳತ್ತ ಜನರು ಗುಳೆ ಹೋಗುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಿವಿಧ ನೀರಾವರಿ ಯೋಜನೆಗಳು ಆಗಿರೋ ಕಾರಣ ಕೃಷಿ ಹೈನುಗಾರಿಕೆ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಹೆಚ್ಚಿದ್ದು ಜನರು ಗುಳೆಯತ್ತ ಮುಖ ಮಾಡುವುದು ಕಡಿಮೆಯಾಗಿದೆ. ಇಷ್ಟರ ಮಧ್ಯೆ ವಿಜಯಪುರ ಜಿಲ್ಲೆ ಶುದ್ದ ಗಾಳಿ ಇರುವ (Clean City) ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಜಿಲ್ಲೆಯ (Vijayapur) ಮುಕುಟಕ್ಕೆ ಗರಿ ಸಿಕ್ಕಂತಾಗಿದೆ.
ಕ್ಲೈಮೆಟ್ ಟ್ರೆಂಡ್ಸ್, ರೆಸ್ಪೈರರ್ ಲಿವಿಂಗ್ ಸೈನ್ಸ್ ಹಾಗೂ ರೆಸ್ಪೈರರ್ ವರದಿಯಲ್ಲಿ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ದೇಶಕ್ಕೆ ವಿಜಯಪುರ ನಗರ 6ನೇ ಸ್ಥಾನ ಪಡೆದಿದೆ. ವಿಜಯಪುರ ನಿರೀಕ್ಷೆ ಮೀರಿ ಅಭಿವೃದ್ಧಿ ಹೊಂದಿದ್ದು, ಇದು ವಿಜಯಪುರದ ಜನರಿಗೆ ಹೆಮ್ಮೆಯ ವಿಷಯ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ. ಈ ಕುರಿತು ಪ್ರಕಟನೆ ನೀಡಿರೋ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ (Basanagouda Patil Yatnal) ಈ ಹಿಂದೆ ವಿಜಯಪುರ ಮಹಾನಗರವನ್ನು ಧೂಳಾಪುರ ಎಂದು ಜರಿಯಲಾಗುತಿತ್ತು. ವಿವಿಧ ಅಭಿವೃದ್ಧಿ ಕಾಳಜಿಯಿಂದ ವಿಜಯಪುರ ನಗರ ಇದೀಗ ಅಭಿವೃದ್ಧಿಯಲ್ಲಿ ಮಾದರಿ ನಗರವಾಗಿ ರೂಪುಗೊಂಡಿದೆ ಎಂದು ತಿಳಿಸಿದ್ದಾರೆ
ನಗರದಲ್ಲಿನ ದುರವಸ್ಥೆಯಿಂದಾಗಿ ನಗರದ ಜನರು ಅಸ್ತಮಾ ಸೇರಿದಂತೆ ಇತರೆ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇದೀಗ ಧೂಳು ಮಾಯವಾಗಿರುವ ಕಾರಣ ಜನರಿಗೆ ರೋಗಗಳಿಂದ ಮುಕ್ತಿ ಸಿಗುತ್ತಿದೆ ಎಂದಿದ್ದಾರೆ. ನಗರದಲ್ಲಿ ಉತ್ತಮ ಆರೋಗ್ಯಕ್ಕೆ ಪೂರಕವಾದ ಪರಿಸರ ನಿರ್ಮಾಣಗೊಂಡಿದೆ. ಇದರಿಂದಾಗಿ ದೇಶದಲ್ಲಿ ವಿಜಯಪುರ ನಗರ ಉತ್ತಮ ವಾತಾವರಣದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ನಗರ ಶಾಸಕರ ಕಾರ್ಯಕ್ಕೆ ಜನರೂ ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಅತ್ಯಂತ ಶುದ್ಧಗಾಳಿ ಇರುವ 10 ಸ್ಥಳಗಳ ಪೈಕಿ ಕರ್ನಾಟಕಕ್ಕೆ ಮೊದಲ ಸ್ಥಾನ
ನಗರದಲ್ಲಿ ಗುಣಮಟ್ಟದ ರಸ್ತೆಗಳು ಅಭಿವೃದ್ಧಿಗೊಂಡಿರುವುದು, ಸಮರ್ಪಕವಾಗಿ ಕಸ ವಿಲೇವಾರಿ ಆಗುತ್ತಿರುವುದು, ಎಲ್ಲೆಂದರಲ್ಲಿದ್ದ ಇರುತ್ತಿದ್ದ ಕಸದ ರಾಶಿ, ಮಾಲಿನ್ಯ ಮಾಯವಾಗಿವೆ. ವಿದ್ಯುತ್ ಅವಘಡ ತಪ್ಪಿವೆ. ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಎಲ್ಲ ನಕಾರಾತ್ಮಕ ಲೋಪಗಳನ್ನು ಸರಿಪಡಿಸಲಾಗಿದೆ. ಇದರಿಂದಾಗಿ ಉತ್ತಮ ವಾತಾವರಣ ಮೂಡಿದ್ದು, ಶುದ್ಧ ಗಾಳಿಯಿಂದಾಗಿ ವಿಜಯಪುರ ನಗರವೂ ದೇಶದಲ್ಲಿನ ಉತ್ತಮ ಗಾಳಿಯ ನಗರಗಳ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಬಂದಿದೆ ಎಂದು ಶ್ಲಾಘಿಸಲಾಗಿದೆ. ಒಟ್ಟಾರೆ ಬರದ ನಾಡು ಗುಳೆ ಹೋಗುವವರ ಜಿಲ್ಲೆ ಬಿಸಿಲೂರು ಎಂದು ಕರೆಯಿಸಿಕೊಳ್ಳುತ್ತಿದ್ದ ಜಿಲ್ಲೆಯು ಶುದ್ದ ಗಾಳಿಯಿರೋ ಜಿಲ್ಲೆಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಜಿಲ್ಲೆಯ ಜನರ ಹೆಮ್ಮೆಯಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:10 am, Mon, 9 October 23