Clean Air: ಭಾರತದಲ್ಲಿ ಅತ್ಯಂತ ಶುದ್ಧಗಾಳಿ ಇರುವ 10 ಸ್ಥಳಗಳ ಪೈಕಿ ಕರ್ನಾಟಕಕ್ಕೆ ಮೊದಲ ಸ್ಥಾನ
ಭಾರತದಲ್ಲಿ ಅತ್ಯಂತ ಶುದ್ಧಗಾಳಿ ಇರುವ ಅಗ್ರ 10 ಸ್ಥಳಗಳ ಪೈಕಿ ಕರ್ನಾಟಕ ಮೇಲುಗೈ ಸಾಧಿಸಿದೆ. ಟಾಪ್ 10ರ ಪೈಕಿ ರಾಜ್ಯದ 8 ನಗರಗಳಿಗೆ ಈ ಸ್ಥಾನ ದೊರೆಯುವ ಮೂಲಕ ಇಡೀ ದೇಶದಲ್ಲೇ ಕರ್ನಾಟಕ ಅತ್ಯಂತ ಶುದ್ಧಗಾಳಿ ಇರುವ ರಾಜ್ಯವೆಂಬ ಗರಿ ಕರುನಾಡಿಗೆ ಸಿಕ್ಕಿದೆ.
ಬೆಂಗಳೂರು, ಅ.05: ಗಾಳಿ ಗುಣಮಟ್ಟದ ಸೂಚ್ಯಂಕ ನೀಡುವ ರೆಸ್ಪೈರ್ ಲಿವಿಂಗ್ ಸೈನ್ಸಸ್ ಆ್ಯಂಡ್ ಕ್ಲೈಮೇಟ್ ಟ್ರೆಂಡ್ಸ್‌ನ (Respirer Living Sciences and Climate Trends) ವರದಿ ಬಿಡುಗಡೆ ಮಾಡಿದ್ದು ಭಾರತದಲ್ಲಿ ಅತ್ಯಂತ ಶುದ್ಧಗಾಳಿ ಇರುವ ಅಗ್ರ 10 ಸ್ಥಳಗಳ ಪೈಕಿ ಕರ್ನಾಟಕ ಮೇಲುಗೈ ಸಾಧಿಸಿದೆ (Clean Air Cities). ಟಾಪ್ 10ರ ಪೈಕಿ ರಾಜ್ಯದ 8 ನಗರಗಳಿಗೆ ಈ ಸ್ಥಾನ ದೊರೆಯುವ ಮೂಲಕ ಇಡೀ ದೇಶದಲ್ಲೇ ಕರ್ನಾಟಕ ಅತ್ಯಂತ ಶುದ್ಧಗಾಳಿ ಇರುವ ರಾಜ್ಯವೆಂಬ ಗರಿ ಕರುನಾಡಿಗೆ ಸಿಕ್ಕಿದೆ.
ಅತ್ಯಂತ ಶುದ್ಧ ಗಾಳಿ ಇರುವ ನಗರಗಳ ಪೈಕಿ ಮಿಜೋರಾಂನ ಐಜ್ವಾಲ್ (11 μg/m3) ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕರ್ನಾಟಕದ ಚಿಕ್ಕಮಗಳೂರು (17.6 μg/m3 ) ಮತ್ತು ಮೂರನೇ ಸ್ಥಾನದಲ್ಲಿ ಹರ್ಯಾಣದ ಮಂಡಿಖೇರಾ (17.7 μg/m3) ನಗರವಿದೆ. ಉಳಿದಂತೆ 7 ಸ್ಥಾನಗಳಲ್ಲೂ ಕರ್ನಾಟಕವೇ ಇದೆ. ಕ್ರಮವಾಗಿ ಚಾಮರಾಜನಗರ, ಮಡಿಕೇರಿ, ವಿಜಯಪುರ, ರಾಯಚೂರು, ಶಿವಮೊಗ್ಗ, ಗದಗ, ಮೈಸೂರು ಸ್ಥಾನ ಪಡೆದಿವೆ.
ಇದನ್ನೂ ಓದಿ: ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ಜಾತಿಗಣತಿ ವರದಿ: ಬಿಜೆಪಿ ನಿಲುವೇನು? ಕಾಂಗ್ರೆಸ್ ಹೇಳುವುದೇನು?
ರೆಸ್ಪೈರರ್ ಲಿವಿಂಗ್ ಸೈನ್ಸಸ್‌ನ ಉಪಕ್ರಮವಾದ ರೆಸ್ಪೈರ್ ರಿಪೋರ್ಟ್ಸ್ ಎರಡು ರೀತಿಯಲ್ಲಿ ಗಾಳಿಯ ಗುಣಮಟ್ಟದ ಡೇಟಾವನ್ನು ವಿಶ್ಲೇಷಿಸುತ್ತದೆ. ಮೊದಲನೆಯದು ಸರ್ಕಾರದ PM2.5 ಡೇಟಾದಲ್ಲಿ ಎನ್‌ಸಿಆರ್ ಮತ್ತು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದಲ್ಲಿ ಪಟ್ಟಿ ಮಾಡಲಾದ ಇತರ ನಗರಗಳಲ್ಲಿ ಹಿಂದಿನ ವರ್ಷಕ್ಕಿಂತ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆಯನ್ನು ಪತ್ತೆಹಚ್ಚಲು ಕಳೆದ ಒಂದು ವರ್ಷದ (1 ಅಕ್ಟೋಬರ್, 2022 ರಿಂದ 30 ಸೆಪ್ಟೆಂಬರ್, 2023) ಮಾಹಿತಿಯನ್ನು ಕಲೆ ಹಾಕಿ ವಿಶ್ಲೇಷಣೆ ಮಾಡಲಾಗುವುದು. ಇನ್ನೊಂದು ಕಡೆ ಚಳಿಗಾಲದಲ್ಲಿ PM2.5 ಡೇಟಾ, ಸರಿಸುಮಾರು ಅಕ್ಟೋಬರ್-ಮಾರ್ಚ್ ಮಾಲಿನ್ಯದ ಮಟ್ಟಗಳು ಹೆಚ್ಚಾದಾಗ ಅದರ ಮಾಹಿತಿ ಪಡೆದು ವಿಶ್ಲೇಷಣೆ ಮಾಡಿ ಅತ್ಯಂತ ಶುದ್ಧಗಾಳಿ ಇರುವ ನಗರವನ್ನು ಪತ್ತೆ ಮಾಡಲಾಗುತ್ತೆ.
ಮಾಲಿನ್ಯದಲ್ಲಿ ದೆಹಲಿಯೇ ಮೊದಲು
ಇನ್ನು ಶುದ್ಧಗಾಳಿ ಪಟ್ಟಿ ಹೊರೆತು ಪಡಿಸಿ ವಾಯುಮಾಲಿನ್ಯ ಹೆಚ್ಚಿರುವ ಪಟ್ಟಿ ನೋಡಿದರೆ. ಅದರಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಎನ್‌ಸಿಆರ್ ನಗರಗಳೇ ಅಗ್ರಸ್ಥಾನದಲ್ಲಿವೆ. 2022ರ ಅಕ್ಟೋಬರ್‌ನಿಂದ 2023ರ ಸೆಪ್ಟೆಂಬರ್‌ವರೆಗಿನ ದತ್ತಾಂಶವನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ. ಆ ಪ್ರಕಾರ ದೆಹಲಿಯಲ್ಲಿನ ವಾಯುಗುಣಮಟ್ಟ ಸುಧಾರಣೆ ಆಗಿದೆ. ಆದರೂ ದೇಶದಲ್ಲಿ ದೆಹಲಿಯಲ್ಲಿಯೇ ಅತ್ಯಂತ ವಾಯುಮಾಲಿನ್ಯ ವರದಿಯಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ