Mysore Dasara 2023: ಮೈಸೂರು ಅರಮನೆಯಲ್ಲಿ ಯಾವಾಗ-ಯಾವ್ಯಾವ ಪೂಜೆ? ಇಲ್ಲಿದೆ‌ ಕಾರ್ಯಕ್ರಮಗಳ ಪಟ್ಟಿ

ಅರಮನೆ ಪೂಜಾ‌ ಕಾರ್ಯಕ್ರಮಗಳ ಪಟ್ಟಿ ಟಿವಿ9ಗೆ ಲಭ್ಯವಾಗಿದೆ. ಅ.9ರ ಸೋಮವಾರದಂದು ಬೆಳಗ್ಗೆ 10.05ರಿಂದ 10.35ರ ಶುಭ ಲಗ್ನದಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ ಮಾಡಲಾಗುತ್ತೆ. ಇದಕ್ಕೂ ಮುಂಚೆ ಬೆಳಗ್ಗೆ 7 ಗಂಟೆಗೆ ನವಗ್ರಹ ಹೋಮ ಸೇರಿ ಹಲವು ಪೂಜಾ ವಿಧಿವಿಧಾನ ನೆರವೇರಲಿದೆ. ಬನ್ನಿ ಅರಮನೆ ಪೂಜಾ‌ ಕಾರ್ಯಕ್ರಮಗಳ ಕಂಪ್ಲೀಟ್ ಪಟ್ಟಿ ಇಲ್ಲಿದೆ.

Mysore Dasara 2023: ಮೈಸೂರು ಅರಮನೆಯಲ್ಲಿ ಯಾವಾಗ-ಯಾವ್ಯಾವ ಪೂಜೆ? ಇಲ್ಲಿದೆ‌ ಕಾರ್ಯಕ್ರಮಗಳ ಪಟ್ಟಿ
ಮೈಸೂರು ಅರಮನೆಯಲ್ಲಿ ಯಾವಾಗ-ಯಾವ್ಯಾವ ಪೂಜೆ?
Follow us
| Updated By: ಆಯೇಷಾ ಬಾನು

Updated on:Oct 05, 2023 | 11:51 AM

ಮೈಸೂರು, ಅ.05: ವಿಶ್ವ ವಿಖ್ಯಾತ ಮೈಸೂರು ದಸರಾಗೆ (Mysuru Dasara 2023) ದಿನಗಣನೆ ಆರಂಭವಾಗಿದೆ. ಜಿಲ್ಲಾಡಳಿತ ಸಾಂಪ್ರದಾಯಿಕ ಹಾಗೂ ಅರ್ಥಪೂರ್ಣ ದಸರಾ ಆಚರಣೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಜೊತೆಗೆ ಮೈಸೂರು ಅರಮನೆಯಲ್ಲೂ ರಾಜ ಪರಂಪರೆ ದಸರಾಗೆ ಭರ್ಜರಿ ಸಿದ್ದತೆಗಳು ನಡೆಯುತ್ತಿವೆ. ಸದ್ಯ ಅರಮನೆ ಪೂಜಾ‌ ಕಾರ್ಯಕ್ರಮಗಳ ಪಟ್ಟಿ ಟಿವಿ9ಗೆ ಲಭ್ಯವಾಗಿದೆ. ಅ.9ರ ಸೋಮವಾರದಂದು ಬೆಳಗ್ಗೆ 10.05ರಿಂದ 10.35ರ ಶುಭ ಲಗ್ನದಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ ಮಾಡಲಾಗುತ್ತೆ. ಇದಕ್ಕೂ ಮುಂಚೆ ಬೆಳಗ್ಗೆ 7 ಗಂಟೆಗೆ ನವಗ್ರಹ ಹೋಮ ಸೇರಿ ಹಲವು ಪೂಜಾ ವಿಧಿವಿಧಾನ ನೆರವೇರಲಿದೆ. ಬನ್ನಿ ಅರಮನೆ ಪೂಜಾ‌ ಕಾರ್ಯಕ್ರಮಗಳ ಕಂಪ್ಲೀಟ್ ಪಟ್ಟಿ ಇಲ್ಲಿದೆ.

ಅರಮನೆ ಪೂಜಾ‌ ಕಾರ್ಯಕ್ರಮಗಳ ಪಟ್ಟಿ

  • ಅ.9ರ ಸೋಮವಾರ ಬೆಳಗ್ಗೆ 7 ಗಂಟೆಗೆ ನವಗ್ರಹ ಹೋಮ ಸೇರಿ ಹಲವು ಪೂಜಾ ವಿಧಿ ವಿಧಾನ ನೆರವೇರಲಿದೆ. ಬಳಿಕ 10.05 ರಿಂದ 10.35ರ ಶುಭ ಲಗ್ನದಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ ಮಾಡಲಾಗುತ್ತೆ. ಗೋ ಶಾಲೆಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮಿಸಲಿದೆ.
  • ಅ.15ರಂದು ಬೆಳಗ್ಗೆ 6ರಿಂದ 6.25ರ ಶುಭ ಮುಹೂರ್ತದಲ್ಲಿ ಸಿಂಹಾಸನ ಜೋಡಣೆ ಮಾಡಲಾಗುತ್ತೆ. ಬೆಳಗ್ಗೆ 7.05ರಿಂದ 7.45ರ ಶುಭ ಲಗ್ನದಲ್ಲಿ ಅರಮನೆಯ ವಾಣಿವಿಲಾಸ ಅರಮನೆಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ಪತ್ನಿ ತ್ರಿಷಿಕಾ ಕುಮಾರಿ ಅವರಿಗೆ ಕಂಕಣಧಾರಣೆ ನಡೆಯಲಿದೆ.
  • ಬೆ 9.45ಕ್ಕೆ ಅರಮನೆ ಸವಾರಿ ತೊಟ್ಟಿಗೆ ಗೋಶಾಲೆಗೆ ಪಟ್ಟದ ಆನೆ ಪಟ್ಟದ ಕುದುರೆ ಪಟ್ಟದ ಆನೆ ಪಟ್ಟದ ಹಸು ಆಗಮಿಸಲಿದೆ. ಬೆ 10.15ಕ್ಕೆ ಕಳಸ‌ ಪೂಜೆ, ಸಿಂಹಾಸನ‌ ಪೂಜೆ ನಡೆಯಲಿದೆ. ಬೆ 11.30ರಿಂದ 11.50ಕ್ಕೆ ಖಾಸಗಿ ದರ್ಬಾರ್ ನಡೆಯಲಿದ್ದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
  • ಮಧ್ಯಾಹ್ನ 1.45 ರಿಂದ 02.05ರ ಸುಮಾರಿಗೆ ತಾಯಿ ಚಾಮುಂಡೇಶ್ವರಿಯನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ರವಾನಿಸಲಾಗುತ್ತೆ.
  • ಅ. 20ರ ಶುಕ್ರವಾರ 10.05 ರಿಂದ 10.25ಕ್ಕೆ ಸರಸ್ವತಿ ಪೂಜೆ
  • ಅ. 21ರ ಶನಿವಾರ ಕಾಳರಾತ್ರಿ ಪೂಜೆ
  • ಅ. 22ರ ಭಾನುವಾರ ದುರ್ಗಾಷ್ಠಮಿ
  • ಅ. 23ರ ಸೋಮವಾರ ದುರ್ಗಾಷ್ಠಮಿ ಆಚರಣೆ. ಬೆ 5.30ಕ್ಕೆ ಚಂಡಿ‌ಹೋಮದೊಂದಿಗೆ ಪೂಜೆ ಆರಂಭವಾಗಲಿದೆ. ಬೆ 5.30ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮಿಸಲಿದೆ. ಬೆ 6.05 ರಿಂದ 06.15ಕ್ಕೆ ಖಾಸಾ ಆಯುಧಗಳು ಅರಮನೆ ಕೋಡಿ‌ ಸೋಮೇಶ್ವರ ದೇಗುಲಕ್ಕೆ ರವಾನೆ. ಬೆ 07.15ಕ್ಕೆ ಖಾಸಾ ಆಯುಧಗಳು ಕೋಡಿ ಸೋಮೇಶ್ವರ ದೇಗುಲದಿಂದ ಅರಮನೆಗೆ ವಾಪಸ್ಸು. ಕಲ್ಯಾಣಮಂಟಪಕ್ಕೆ ಆಯುಧಗಳ ಆಗಮನ. ಬೆ 9.30ಕ್ಕೆ ಚಂಡಿಹೋಮ ಪೂರ್ಣಾಹುತಿ.
  • ಅ. 23ರ ಬೆ 11.45ಕ್ಕೆ ಕಲ್ಯಾಣ ಮಂಟಪಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು ಆಗಮನ. ಮಧ್ಯಾಹ್ನ 12.20 ಆಯುಧ‌ಪೂಜೆ ಆರಂಭ. 12.45ರವರೆಗೆ ಆಯುಧಪೂಜೆ ನಡೆಯಲಿದೆ. ಅರಮನೆ ಕಲ್ಯಾಣ ಮಂಟಪದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಆಯುಧಗಳಿಗೆ ಪೂಜೆ ನಡೆಯಲಿದೆ.
  • ಸಂಜೆ ಖಾಸಗಿ ದರ್ಬಾರ್ ದರ್ಬಾರ್ ನಂತರ ಸಿಂಹ ವಿಸರ್ಜನೆ ಮಾಡಲಾಗುತ್ತೆ. ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಮಾಡಿ ಅಂಬಾವಿಲಾಸದಲ್ಲಿ ದಪ್ತಾರ್ ಪೂಜೆ ನಡೆಯಲಿದೆ. ಮಹಾಸನ್ನಿಧಾನದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರಿಂದ ಅಮಲದೇವಿ ದರ್ಶನ.
  • ಅ.24ರ ಬುಧವಾರ ವಿಜಯದಶಮಿ ಆಚರಣೆ. ಬೆಳಗ್ಗೆ 9.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆಗಮನ. ಕಲ್ಯಾಣಮಂಟಪದಲ್ಲಿ ಖಾಸ ಆಯುಧಗಳಿಗೆ ಪೂಜೆ. ಬೆ 11 ರಿಂದ 11.40 ವಿಜಯದಶಮಿ ಮೆರವಣಿಗೆ. ಅರಮನೆ ಆನೆ ಬಾಗಿಲಿನಿಂದ ಅರಮನೆ ಭುವನೇಶ್ವರಿ ದೇಗುಲದವರೆಗೂ ಮೆರವಣಿಗೆ ನಡೆಯಲಿದೆ. ಭುವನೇಶ್ವರಿ ದೇಗುಲದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರಿಂದ ಪೂಜೆ. ಪೂಜೆ ಮಗಿಸಿ ಅರಮನೆಗೆ ವಾಪಸ್ಸು.
  • ನ. 8ರ ಬುಧವಾರ ಸಿಂಹಾಸನ ಭದ್ರತಾ ಕೊಠಡಿಗೆ ರವಾನೆ

    ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:13 am, Thu, 5 October 23