Ambaari Dasara Bus: ಮೈಸೂರು ದಸರಾಗೆ ಮತ್ತಷ್ಟು ಮೆರಗು ನೀಡಲು ರಸ್ತೆಗೆ ಇಳಿಯುತ್ತಿದೆ ಅಂಬಾರಿ

ಈ ಬಾರಿಯ ದಸರೆಗಾಗಿ ಪ್ರವಾಸೋದ್ಯಮ ಇಲಾಖೆ ಒಟ್ಟು 6 ಅಂಬಾರಿ ಓಪನ್ ಬಸ್‌ಗಳನ್ನು ಸಿದ್ದಪಡಿಸಿದೆ. ಸಾಕಷ್ಟು ಆಕರ್ಷಕವಾಗಿರುವ ಈ ಅಂಬಾರಿ ಬಸ್‌ನಲ್ಲಿ ಪ್ರವಾಸಿಗರು ಮೈಸೂರನ್ನು ವಿಶೇಷವಾಗಿ ನೋಡಬಹುದಾಗಿದೆ. ಅಕ್ಟೋಬರ್ 15 ರಿಂದ ವಿಶೇಷ ದಸರಾ ಅಂಬಾರಿ ಬಸ್‌ಗೆ ಚಾಲನೆ ಸಿಗಲಿದೆ. ಸಿಎಂ ಸಿದ್ದರಾಮಯ್ಯ ಬಸ್‌ಗೆ ಚಾಲನೆ ನೀಡಲಿದ್ದಾರೆ. ಅಷ್ಟೇ ಅಲ್ಲ ಖುದ್ದು ಸಿಎಂ ಹಾಗೂ ಸಚಿವರು ಬಸ್‌ನಲ್ಲಿ ಪ್ರಯಾಣ ಮಾಡಲಿದ್ದಾರೆ.

Follow us
ರಾಮ್​, ಮೈಸೂರು
| Updated By: ಆಯೇಷಾ ಬಾನು

Updated on:Oct 05, 2023 | 3:24 PM

ಮೈಸೂರು, ಅ.05: ವಿಶ್ವವಿಖ್ಯಾತ ಮೈಸೂರು ದಸರಾಗೆ (Mysuru Dasara 2023) ದಿನಗಣನೆ ಆರಂಭವಾಗಿದೆ. ಈ ಬಾರಿ ದಸರೆಯನ್ನು ಸಾಂಪ್ರದಾಯಿಕ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ (Karnataka Government) ಮುಂದಾಗಿದೆ‌. ಹೀಗಾಗಿ ಪ್ರವಾಸಿಗರನ್ನು ಸೆಳೆಯುವ ಚಾಲೆಂಜ್ ಪ್ರವಾಸೋದ್ಯಮ ಇಲಾಖೆ (Tourism Department) ಮೇಲಿದೆ. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಸಾಕಷ್ಟು ಪ್ಲ್ಯಾನ್ ಮಾಡುತ್ತಿದೆ. ಅದರ ಒಂದು ಭಾಗ ದಸರಾ ಅಂಬಾರಿ ವಿಶೇಷ ಬಸ್ (Dasara Ambaari Bus). ಈ ಬಾರಿಯ ದಸರೆಗಾಗಿ ಪ್ರವಾಸೋದ್ಯಮ ಇಲಾಖೆ ಒಟ್ಟು 6 ಅಂಬಾರಿ ಓಪನ್ ಬಸ್‌ಗಳನ್ನು ಸಿದ್ದಪಡಿಸಿದೆ. ಸಾಕಷ್ಟು ಆಕರ್ಷಕವಾಗಿರುವ ಈ ಅಂಬಾರಿ ಬಸ್‌ನಲ್ಲಿ ಪ್ರವಾಸಿಗರು ಮೈಸೂರನ್ನು ವಿಶೇಷವಾಗಿ ನೋಡಬಹುದಾಗಿದೆ.

ಅಕ್ಟೋಬರ್ 15 ರಿಂದ ವಿಶೇಷ ದಸರಾ ಅಂಬಾರಿ ಬಸ್‌ಗೆ ಚಾಲನೆ ಸಿಗಲಿದೆ. ಸಿಎಂ ಸಿದ್ದರಾಮಯ್ಯ ಬಸ್‌ಗೆ ಚಾಲನೆ ನೀಡಲಿದ್ದಾರೆ. ಅಷ್ಟೇ ಅಲ್ಲ ಖುದ್ದು ಸಿಎಂ ಹಾಗೂ ಸಚಿವರು ಬಸ್‌ನಲ್ಲಿ ಪ್ರಯಾಣ ಮಾಡಲಿದ್ದಾರೆ. ದಸರಾ ದೀಪಾಲಂಕಾರ ಇರುವವರೆಗೂ ವಿಶೇಷ ಅಂಬಾರಿ ಬಸ್ ಸಂಚಾರವಿರುತ್ತದೆ. ಪ್ರತಿದಿನ ಸಂಜೆ 6 ಗಂಟೆ ರಾತ್ರಿ 8 ಗಂಟೆ ರಾತ್ರಿ 9 ಗಂಟೆಗೆ ಬಸ್ ವ್ಯವಸ್ಥೆ ಇರುತ್ತದೆ. ಬಸ್‌ನ ಒಳಭಾಗ 25 ಸೀಟು ಬಸ್ ಮೇಲ್ಭಾಗದಲ್ಲಿ 20 ಸೀಟ್ ವ್ಯವಸ್ಥೆ ಮಾಡಲಾಗಿದೆ. ಬಸ್ ಒಳಭಾಗಕ್ಕೆ 250 ರೂ. ದರ ಬಸ್ ಮೇಲ್ಭಾಗದಲ್ಲಿ 500 ರೂ. ದರ ನಿಗದಿ ಮಾಡಲಾಗಿದೆ.

ಇದನ್ನೂ ಓದಿ: ಅ.15ಕ್ಕೆ ಉಡುಪಿಯಲ್ಲಿ ಮಹಿಷಾ ದಸರಾ ಆಚರಣೆ, ದ್ರಾವಿಡ ದೊರೆ ಮಹಿಷ ಬಗ್ಗೆ ಜಾಗೃತಿ ಕಾರ್ಯಕ್ರಮ

ವಿಶೇಷ ಅಂಬಾರಿ ಬಸ್ ಸಂಚರಿಸುವ ಮಾರ್ಗ

ಮಯೂರ ಹೋಟೆಲ್‌ನಿಂದ ಆರಂಭವಾಗಿ ಹಳೆ ಡಿಸಿ ಕಚೇರಿ, ಕ್ರಾಫರ್ಡ್ ಹಾಲ್ ಸೆಂಟ್ರಲ್ ಲೈಬ್ರರಿ, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠಶಾಲಾ ಅರಮನೆ ಕೆ ಆರ್ ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಆಸ್ಪತ್ರೆ ವೃತ್ತ, ರೈಲು ನಿಲ್ದಾಣ ವೃತ್ತದ ಮೂಲಕ ವಾಪಸ್ಸು ಮಯೂರ ಯಾತ್ರಿ ನಿವಾಸಕ್ಕೆ ಆಗಮಿಸುತ್ತದೆ. ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಹೀಗಾಗಲೇ ಅಂಬಾರಿ ಬಸ್‌ನ ಟ್ರಯಲ್ ರನ್ ನಡೆಯುತ್ತಿದ್ದು ಉತ್ತಮ ಪ್ರತಿಕ್ರಿಯೆ ಆರಂಭವಾಗಿದೆ. ಜನರು ಹೆಚ್ಚು ಹೆಚ್ಚಾಗಿ ಅಂಬಾರಿ ಬಸ್‌ನ ಮೂಲಕ ಮೈಸೂರು ನೋಡಲು ಪ್ರವಾಸಿಗರು ಉತ್ಸುಕರಾಗಿದ್ದಾರೆ. ಒಟ್ಟಾರೆ ಮೈಸೂರು ದಸರೆಗೆ ಬರುವ ಪ್ರವಾಸಿಗರಿಗೆ ಮೈಸೂರಿನ ಅದ್ಬುತ ಕ್ಷಣಗಳನ್ನು ಕಣ್ತುಂಬಿಕೊಡಲು ಅಂಬಾರಿ ಸಜ್ಜಾಗಿದೆ. ನೀವು ಮೈಸೂರಿಗೆ ಬಂದಾಗ ಅಂಬಾರಿ ಬಸ್ ಹತ್ತಿ ಮೈಸೂರು ಸುತ್ತೋದನ್ನು ಮಿಸ್ ಮಾಡ್ಕೋಬೇಡಿ.

ಮೈಸೂರು ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:17 pm, Thu, 5 October 23

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ