ವಿಜಯಪುರ, ಜು.12: ನಕಲಿ ಮತದಾನ ಮಾಡಿದ್ದರೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ವಿರುದ್ದದ ಆರೋಪವನ್ನು ವಜಾ ಮಾಡಿ, ದೂರುದಾರ ಅಬ್ದುಲ್ ಹಮೀದ್ ಮುಶ್ರೀಫ್ಗೆ ಹೈಕೋರ್ಟ್(High Court) ದಂಡ ವಿಧಿಸಿದೆ. 2023 ರ ವಿಧಾನಸಭಾ ಚುನಾವಣೆಯಲ್ಲಿ ನಕಲಿ ಮತದಾನ ಮಾಡಿರುವ ಆರೋಪದ ಮೇಲೆ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಯತ್ನಾಳ್ ವಿರುದ್ದ ಪ್ರತಿಸ್ಪರ್ಧಿ ಕಾಂಗ್ರೆಸ್ನ ಅಬ್ದುಲ್ ಹಮೀದ್ ಮುಶ್ರೀಫ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಈ ಕುರಿತು ಇಂದು(ಶುಕ್ರವಾರ) ವಿಚಾರಣೆ ನಡೆಸಿದ್ದ ಹೈಕೋರ್ಟ‌್, ಯತ್ನಾಳ್ ವಿರುದ್ಧದ ಪ್ರಕರಣ ವಜಾ ಮಾಡಿ, ದೂರುದಾರ ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಅಬ್ದುಲ್ ಹಮೀದ್ ಮುಶ್ರೀಫ್ಗೆ 1 ಲಕ್ಷ ರೂ. ದಂಡ ಕಟ್ಟುವಂತೆ ನ್ಯಾಯಾಧೀಶೆ ಹೇಮಲೇಖಾ ಅವರು ಆದೇಶಿಸಿದ್ದಾರೆ. ಈ ಕುರಿತು ಶಾಸಕ ಯತ್ನಾಳ್ ತಮ್ಮ ಟ್ವಿಟ್ಟರ್, ಪೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನನ್ನ ವಿರುದ್ದ ರಾಜಕೀಯ ಪ್ರೇರಿತವಾಗಿ ದುರುದ್ದೇಶದಿಂದ ಧಾಖಲಿಸಿದ್ದ “ಚುನಾವಣಾ ಅರ್ಜಿಯನ್ನು” (Election Petition) ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ವಜಾಗೊಳಿಸಿದೆ ಹಾಗು ಅರ್ಜಿದಾರರಿಗೆ 1ಲಕ್ಷ ದಂಡ ಹಾಕಿದೆ.
ಸತ್ಯಮೇವ ಜಯತೆ. 🙏🏼 pic.twitter.com/UOB8ix2Oog
— Basanagouda R Patil (Yatnal) (@BasanagoudaBJP) July 12, 2024
ಇದನ್ನೂ ಓದಿ:ಉಚಿತ ಭಾಗ್ಯಗಳಿಂದ ಕರ್ನಾಟಕದ ಹಣಕಾಸು ಸ್ಥಿತಿ ಗಂಭೀರ: ಕ್ರಮಕ್ಕೆ ಆಗ್ರಹಿಸಿ ನಿರ್ಮಲಾ ಸೀತಾರಾಮನ್ಗೆ ಯತ್ನಾಳ್ ಪತ್ರ
‘ನನ್ನ ವಿರುದ್ದ ರಾಜಕೀಯ ಪ್ರೇರಿತವಾಗಿ ದುರುದ್ದೇಶದಿಂದ ದಾಖಲಿಸಿದ್ದ “ಚುನಾವಣಾ ಅರ್ಜಿಯನ್ನು” ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ವಜಾಗೊಳಿಸಿದೆ ಹಾಗೂ ಅರ್ಜಿದಾರರಿಗೆ 1ಲಕ್ಷ ದಂಡ ಹಾಕಿದೆ. ಸತ್ಯಮೇವ ಜಯತೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ