ಇಡಿಗೆ ಸಿಕ್ಕವರು ಅಷ್ಟು ಸುಲಭವಾಗಿ ಪಾರಾಗಲು ಸಾಧ್ಯವಿಲ್ಲ: ಡಿಕೆಶಿ ವಿರುದ್ಧ ಹರಿಹಾಯ್ದ ಯತ್ನಾಳ್

| Updated By: preethi shettigar

Updated on: Feb 01, 2022 | 1:25 PM

ಇಂಥ ಕಳ್ಳರು ಒಳಗೆ ಹೋಗಬೇಕು. ರಾಜ್ಯದ ಜನರ ಹಣ ಲೂಟಿ ಮಾಡಿ ವಿದೇಶದಲ್ಲಿ ಆಸ್ತಿ ಮಾಡುವ ರಾಜಕಾರಣಿಗಳಿಗೆ ಶಿಕ್ಷೆಯಾಗಬೇಕು. ಅದು ಯಾವುದೇ ಪಕ್ಷದವರಾಗಿದ್ದರೂ ಅವರಿಗೆ ಶಿಕ್ಷೆಯಾಗಬೇಕೆಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.

ಇಡಿಗೆ ಸಿಕ್ಕವರು ಅಷ್ಟು ಸುಲಭವಾಗಿ ಪಾರಾಗಲು ಸಾಧ್ಯವಿಲ್ಲ: ಡಿಕೆಶಿ ವಿರುದ್ಧ ಹರಿಹಾಯ್ದ ಯತ್ನಾಳ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Follow us on

ವಿಜಯಪುರ: ಇಡಿಗೆ (ED) ಸಿಕ್ಕವರು ಅಷ್ಟು ಸುಲಭವಾಗಿ ಪಾರಾಗಲು ಸಾಧ್ಯವಿಲ್ಲ. ಈಗಲ್ಲಾ ಮುಂದಿನ ಹತ್ತು ವರ್ಷಕ್ಕಾದರೂ ಡಿ.ಕೆ.ಶಿವಕುಮಾರ್(DK Shivakumar)​ ಮೇಲೆ ಕ್ರಮ ಜರುಗುತ್ತದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagouda patil Yatnal), ಡಿಕೆಶಿನೇ ಆರೋಪಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಬಿ. ವೈ. ವಿಜಯೇಂದ್ರ ವಿರುದ್ಧವೂ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಬಿಎಂಟಿಸಿ ಕಂಡಕ್ಟರ್ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿತಲ್ಲಾ. ಕಂಡಕ್ಟರ್ ಬಳಿ ಸಿಕ್ಕ ಕೋಟಿ ಕೋಟಿ ಹಣ ಯಾರದ್ದು? ಅದು ಬಹಿರಂಗವಾಬೇಕೆಂದು ಒತ್ತಾಯ ಮಾಡಿದ್ದಾರೆ.

ಇಂಥ ಕಳ್ಳರು ಒಳಗೆ ಹೋಗಬೇಕು. ರಾಜ್ಯದ ಜನರ ಹಣ ಲೂಟಿ ಮಾಡಿ ವಿದೇಶದಲ್ಲಿ ಆಸ್ತಿ ಮಾಡುವ ರಾಜಕಾರಣಿಗಳಿಗೆ ಶಿಕ್ಷೆಯಾಗಬೇಕು. ಅದು ಯಾವುದೇ ಪಕ್ಷದವರಾಗಿದ್ದರೂ ಅವರಿಗೆ ಶಿಕ್ಷೆಯಾಗಬೇಕೆಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್​ನ ಭಸ್ಮಾಸುರ ಅಹಿಂದ ನಾಯಕರನ್ನು, ಸ್ವಜಾತಿಯ ನಾಯಕರನ್ನು ಸಿದ್ದರಾಮಯ್ಯ ಮುಗಿಸಿದ್ದಾರೆ ಎಂಬ ಬಿಜೆಪಿಯ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಗಂಭೀರ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಸಿದ್ದಾರಾಮ್ಯಯ ವಿರುದ್ಧ ವಿಶ್ವನಾರ್ಥ ವಾಗ್ದಾಳಿ ಕುರಿತು ಮಾತನಾಡಲ್ಲಾ. ಸಿದ್ದರಾಮಯ್ಯರನ್ನು ಮುಗಿಸಲು ಕಾಂಗ್ರೆಸ್​ನಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ. ಡಿಕೆಶಿ ಮೊದಲ ಅಜೆಂಡಾ ಸಿದ್ದರಾಮಯ್ಯರನ್ನು ಮುಗಿಸುವುದು. ಆದರೆ ಸಿದ್ದರಾಮಯ್ಯ ಭಲಿಷ್ಟವಾಗಿದ್ದರೆ ಡಿಕೆಶಿ ಸಿಎಂ ಆಗಲು ಸಾದ್ಯವಿಲ್ಲ ಎಂದು ತಿಳಿಸಿದ್ದಾರೆ.

ಮೇಕೆದಾಟು ಪಾದಯಾತ್ರೆಯ ವೇಳೆ ತಮ್ಮನ್ನು ತಾವು ಹೊಗಳಿಕೊಳ್ಳುವ ಕೆಲಸ ಮಾಡಿದ್ದಾರೆ ಡಿಕೆಶಿ. ಪಾದಯಾತ್ರೆ ಜನರಿಗಾಗಿ ಅಲ್ಲಾ. ರಾಜ್ಯದ ನಾಯಕತ್ವವನ್ನು ಸಿದ್ದರಾಮಯ್ಯರಿಂದ ಕಸಿದುಕೊಂಡು, ಏಕೈಕ ನಾಯಕನೆಂದು ತೋರಿಸಲು ಪ್ರಯತ್ನ. ಅದರ ಬದಲಾಗಿ ಇಡೀ ರಾಜ್ಯದಲ್ಲಿ ಕೊರೊನಾ ಹರಡಲು ಕಾರಣವಾದರು ಎಂದು ಡಿಕೆಶಿ ವಿರುದ್ಧ ಯತ್ನಾಳ್​ ವಾಗ್ದಾಳಿ ನಡೆಸಿದ್ದಾರೆ.

ನಿನ್ನೆ ಡಿಕೆಶಿ ನಿವಾಸಕ್ಕೆ ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಭೇಟಿ ವಿಚಾರ

ಸಚಿವ ಆನಂದಸಿಂಗ್ ನೇರಾನೇರ ವ್ಯಕ್ತಿತ್ವ ಉಳ್ಳವರು. ಅಭಿವೃದ್ಧಿ ವಿಚಾರವಾಗಿ ಹೋಗಿದ್ದಾರೆ ಎಂಬುವುದು ನನಗೆ ಗೊತ್ತಿಲ್ಲಾ. ಆನಂದಸಿಂಗ್ ಡಿಕೆಶಿ ಭೇಟಿ ಕುರಿತು ನನಗೂ ಏನೂ ತಿಳಿತಿಲ್ಲ. ಆದರೆ ವಿಜಯನಗರ ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಆನಂದಸಿಂಗ್ ಬೇಸರಗೊಂಡಿದ್ದಾರೆ. ನೂತನ ಜಿಲ್ಲೆಯಲ್ಲಿ ಮೊದಲ ಬಾರಿಗೆ ಧ್ವಜಾರೋಹಣ ಮಾಡಬೇಕೆಂದು ಇವರು ಆಸೆ ಹೊಂದಿದ್ದರು. ಪಕ್ಷದ ಚೌಕಟ್ಟಿನಲ್ಲಿ ಆಯಾ ಜಿಲ್ಲೆಯ ಸಚಿವರು ಜಿಲ್ಲಾ ಉಸ್ತುವಾರಿ ಬೇಡವೆಂದು ಪಕ್ಷ ತೀರ್ಮಾನಿಸಿದೆ. ಆ ಕಾರಣದಿಂದ ವಿಜಯನಗರ ಉಸ್ತುವಾರಿ ಸ್ಥಾನ ಆನಂದಸಿಂಗ್ ಅವರಿಗೆ ತಪ್ಪಿದೆ. ಅವರ ಬಗ್ಗೆ ಗೌರವಿದೆ. ಅವರೊಬ್ಬ ಒಳ್ಳೆಯ ಮನುಷ್ಯ. ಹಿಂದೆ ಮುಂದೆ ಮಾಡುವ ಮನುಷ್ಯರಲ್ಲ. ಡಿಕೆಶಿ ಹಾಗೂ ಆನಂದಸಿಂಗ್ ಭೇಟಿ ನನಗೂ ಕುತೂಹಲ ಮೂಡಿಸಿದೆ ಎಂದು ಯತ್ನಾಳ್ ತಿಳಿಸಿದ್ದಾರೆ.

ಆನಂದಸಿಂಗ್ ಬಿಜೆಪಿ ಬಿಟ್ಟು ಹೋಗಲ್ಲಾ ಎನಿಸುತ್ತಿದೆ. ಬಿಜೆಪಿ ಬಿಟ್ಟು ಹೋಗುವವರ ಪಟ್ಟಿನಲ್ಲಿ ಆನಂದಸಿಂಗ್ ಇಲ್ಲಾ. ಅವರ ಮನಸ್ಸಿಗೆ ಬೇಜಾರಾಗಿ ಡಿಕೆಶಿ ಭೇಟಿ ಮಾಡಿರಬಹುದು ಎಂದು ನಗರದ ವಾರ್ಡ್ ನಂಬರ್ 22 ರ ಕೆಎಚ್​​ಬಿ ಕಾಲೋನಿಯ ಒಳಚರಂಡಿ ಕಾಮಗಾರಿ ಭೂಮಿ ಪೂಜೆ ಬಳಿಕ ಯತ್ನಾಳ್​ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಪ್ರತಿಭಟನೆ ಬಿಸಿ.. ವೀರಶೈವ ಮಹಾಸಭಾದಿಂದ ಧರಣಿ, ಆಕ್ರೋಶ

ಶಾಸಕ ಯತ್ನಾಳ್​ ಒಬ್ಬ ದುರಹಂಕಾರಿ ನಾಯಕ: ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ

Published On - 1:09 pm, Tue, 1 February 22