ರಾಮ ಮಂದಿರ ನಿರ್ಮಾಣ: ರಿವೇಂಜ್ ತೀರಿಸಿಕೊಳ್ಳಲು ಕಾಂಗ್ರೆಸ್​ ಹುಬ್ಬಳ್ಳಿಯಲ್ಲಿ ಹಳೇ ಕೇಸ್​ ಓಪನ್​ ಮಾಡಿಸಿದೆ- ಜೋಶಿ

| Updated By: ವಿವೇಕ ಬಿರಾದಾರ

Updated on: Jan 02, 2024 | 12:22 PM

ಹುಬ್ಬಳ್ಳಿಯಲ್ಲಿ ಪೊಲೀಸರು 72 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಪೊಲೀಸರು ದ್ವೇಷ ಭಾವನೆಯಿಂದ ವರ್ತಿಸಿದ್ದಾರೆ. ರಾಮಮಂದಿರದ ರಿವೇಂಜ್ ತೀರಿಸಿಕೊಳ್ಳಲಾಗುತ್ತಿದೆ. ಹೊಟ್ಟೆ ಕಿಚ್ಚಿನಿಂದ ಈ ರೀತಿ ಕಾಂಗ್ರೆಸ್ ವರ್ತಿಸುತ್ತಿದೆ. ಹುಬ್ಬಳ್ಳಿ ವಿಚಾರವಾಗಿ ಕಾನೂನು, ರಾಜಕೀಯ, ಸಾಮಾಜಿಕ ಹೋರಾಟ ಮಾಡುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಹೇಳಿದರು.

ರಾಮ ಮಂದಿರ ನಿರ್ಮಾಣ: ರಿವೇಂಜ್ ತೀರಿಸಿಕೊಳ್ಳಲು ಕಾಂಗ್ರೆಸ್​ ಹುಬ್ಬಳ್ಳಿಯಲ್ಲಿ ಹಳೇ ಕೇಸ್​ ಓಪನ್​ ಮಾಡಿಸಿದೆ- ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ
Follow us on

ವಿಜಯಪುರ, ಜನವರಿ 02: ಹುಬ್ಬಳ್ಳಿಯಲ್ಲಿ (Hubballi) ಪೊಲೀಸರು (Police) 72 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಪೊಲೀಸರು ದ್ವೇಷ ಭಾವನೆಯಿಂದ ವರ್ತಿಸಿದ್ದಾರೆ. ರಾಮಮಂದಿರದ (Ram Mandir) ರಿವೇಂಜ್ ತೀರಿಸಿಕೊಳ್ಳಲಾಗುತ್ತಿದೆ. ಹೊಟ್ಟೆ ಕಿಚ್ಚಿನಿಂದ ಈ ರೀತಿ ಕಾಂಗ್ರೆಸ್ ವರ್ತಿಸುತ್ತಿದೆ. ಹುಬ್ಬಳ್ಳಿ ವಿಚಾರವಾಗಿ ಕಾನೂನು, ರಾಜಕೀಯ, ಸಾಮಾಜಿಕ ಹೋರಾಟ ಮಾಡುತ್ತೇವೆ. ಡಿಜೆ ಹಳ್ಳಿ ಕೆಜಿ ಹಳ್ಳಿ ಹಾಗೂ ಹುಬ್ಬಳ್ಳಿ ಪೊಲೀಸ್​ ಠಾಣೆ ದ್ವಂಸ ಕೇಸ್​ನಲ್ಲಿದ್ದವರನ್ನು ಬಿಡಲು ಪತ್ರ ಬರೆಯುತ್ತೀರಿ. ಸಿದ್ದರಾಮಯ್ಯ ಏನು ಮಾಡುತ್ತಿದ್ದಿರಾ? ಐಸಿಸ್ ಸರ್ಕಾರ ಮಾಡಲು ಹೊರಟಿದ್ದೀರಾ? ನೀವು ಮೊಘಲ್ ಸರ್ಕಾರ, ಇಸ್ಲಾಮಿಕ್ ಸರ್ಕಾರ, ಐಸಿಸ್ ಸರ್ಕಾರ ನಡೆಸುತ್ತಿದ್ದೀರಾ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralahad Joshi) ಕಿಡಿಕಾರಿದರು.

ವಿಜಯಪುರ ನಗರದ ಸೈನಿಕ ಶಾಲಾ ಆವರಣದಲ್ಲಿರುವ ಹೆಲಿಫ್ಯಾಡ್​ನಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ  ಮಾತನಾಡಿದ ಅವರು, ಕಾಂಗ್ರೆಸ್​ಗೆ ರಾಮ ಮಂದಿರ ಆಗಬೇಕಾಗಿರಲಿಲ್ಲ. ರಾಮ ಮಂದಿರದ ಕಲ್ಪನೆಯೂ ಅವರಿಗೆ ಇರಲಿಲ್ಲ. ಕಾಂಗ್ರೆಸ್‌ಗೆ ಹೊಟ್ಟೆ ಕಿಚ್ಚು, ಆತಂಕ ಶುರುವಾಗಿದೆ. ರಾಮ ಮಂದಿರಕ್ಕೆ ಹೋಗಬೇಕೋ ಅಥವಾ ಬೇಡವೋ ಎಂಬ ಗೊಂದಲ್ಲಿ ಕಾಂಗ್ರೆಸ್​ನವರು ಇದ್ದಾರೆ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ ರೀ ಓಪನ್​​: ಹಳೆ ಕೇಸ್​​​ಗಳನ್ನು ಕ್ಲಿಯರ್ ಮಾಡಲು ಸೂಚನೆ: ಜಿ. ಪರಮೇಶ್ವರ್

ರಾಮ ಮಂದಿರಕ್ಕೆ ವಿರೋಧ ಮಾಡಿದ್ದರು. ರಾಮ ಬರೀ ಕಲ್ಪಿತ ವ್ಯಕ್ತಿ ಎಂದು ವಾದ ಮಾಡಿದ್ದರು. ರಾಮಮಂದಿರವನ್ನು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡುವುದರ ಬಗ್ಗೆ ಕಾಂಗ್ರೆಸ್​ನವರು ಖ್ಯಾತೆ ತೆಗೆಯುತ್ತಿದ್ದಾರೆ. ಇದನ್ನ ಜನರು ಒಪ್ಪದೆ ಇದ್ದಾಗ ಹಳೆ‌ ಕೇಸ್ ಓಪನ್ ಮಾಡಿಸುತ್ತಿದ್ದಾರೆ. ಈಗ ರಾಮ ಮಂದಿರ ಹಳೆ ಕೇಸ್ ತೆಗೆದು ಅರೆಸ್ಟ್ ಮಾಡಿಸುತ್ತಿದ್ದಾರೆ. ಅರೆಸ್ಟ್ ಮಾಡಿಸುವ ನೀಚ ಕೃತ್ಯಕ್ಕೆ ಕಾಂಗ್ರೆಸ್​ ಕೈ ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದೇಶ್ವರ ಶ್ರೀಗಳ ಗುರುನಮನ ಕಾರ್ಯಕ್ರಮ ವಿಚಾರವಾಗಿ ಮಾತನಾಡಿದ ಅವರು ಸಿದ್ದೇಶ್ವರ ಶ್ರೀಗಳಿಗೂ ನನಗು ನಿಕಟ ಸಂಬಂಧ ಇತ್ತು. ಪುಸ್ತಕ ಬಿಡುಗಡೆ ಬಗ್ಗೆಯೂ ಮಾತನಾಡಿದ್ದೇವು. ಹಲವು ದೃಷ್ಟಿಯಿಂದ ಸಂಬಂಧ ಇತ್ತು. ಆದರ್ಶ ಸಂತ, ಕಣ್ಣಾರೆ ಕಂಡ ದೇವರಿಗೆ ಇಂದು ಗುರುನಮನ ಸಲ್ಲಿಸಲು ಬಂದಿದ್ದೇನೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:19 pm, Tue, 2 January 24