ಅನುಮತಿ ಇಲ್ಲದೇ ಸೇವಾಲಾಲ್ ವೃತ್ತ ನಿರ್ಮಾಣ:ತೆರವಿಗೆ ಬಂದ ಅಧಿಕಾರಿಗಳ ಜತೆ ವಾಗ್ವಾದ, ಬಿಗುವಿನ ವಾತಾವರಣ

ಅನುಮತಿಯಿಲ್ಲದೆ ಸೇವಾಲಾಲ್ ವೃತ ನಿರ್ಮಾಣ ವಿಚಾರದಲ್ಲಿ ಅಧಿಕಾರಿಗಳು ಹಾಗೂ ಬಂಜಾರಾ ಸಮುದಾಯದ ಮುಖಂಡರು ನಡುವೆ ವಾಗ್ವಾದ ಶುರುವಾದ ಹಿನ್ನಲೆ ಸ್ಥಳದಲ್ಲಿಯೇ ಹಿರಿಯ ಪೊಲೀಸ್ ಅಧಿಕಾರಿಗಳು ಮುಕ್ಕಾಂ ಹೂಡಿದ್ದಾರೆ. ಸದ್ಯ ವೃತ್ತ ತೆರವಿಗೆ ಆಕ್ರೋಶ ಹಿನ್ನೆಲೆಯಲ್ಲಿ ಅಧಿಕಾರಿಗಳು ವಾಪಸ್ ತೆರಳಿದ್ದಾರೆ.

ಅನುಮತಿ ಇಲ್ಲದೇ ಸೇವಾಲಾಲ್ ವೃತ್ತ ನಿರ್ಮಾಣ:ತೆರವಿಗೆ ಬಂದ ಅಧಿಕಾರಿಗಳ ಜತೆ ವಾಗ್ವಾದ, ಬಿಗುವಿನ ವಾತಾವರಣ
ವಿಜಯಪುರದಲ್ಲಿ ಸೇವಾಲಾಲ್ ವೃತ್ತ ತೆರವಿಗೆ ಬಂದ ಅಧಿಕಾರಿಗಳ ಜತೆ ಬಂಜಾರ ಸಮುದಾಯದವರ ವಾಗ್ವಾದ
Edited By:

Updated on: Feb 16, 2024 | 9:47 PM

ವಿಜಯಪುರ, ಫೆ.16: ಸೇವಾಲಾಲ್ ವೃತ ನಿರ್ಮಾಣ ವಿಚಾರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ವಿಜಯಪುರ (Vijayapura) ನಗರದ ಬಂಜಾರಾ ಕ್ರಾಸ್​ನಲ್ಲಿ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ(ಫೆ.15) ಸೇವಾಲಾಲ್ ಜಯಂತಿ (sevalal jayanti) ಹಿನ್ನೆಲೆಯಲ್ಲಿ ಬಂಜಾರಾ ಸಮುದಾಯದ ಯುವಕರು ಸೇವಾಲಾಲ್ ವೃತ್ತ ನಿರ್ಮಾಣ ಮಾಡಿದ್ದರು. ಇದೀಗ ಅನುಮತಿ ಪಡೆದಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತೆರವಿಗೆ ಬಂದ ಹಿನ್ನಲೆ ತೆರವಿಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಸ್ಥಳದಲ್ಲಿ ಮುಕ್ಕಾಂ ಹೂಡಿದ ಹಿರಿಯ ಪೊಲೀಸ್ ಅಧಿಕಾರಿಗಳು

ಇನ್ನು ವೃತ್ತ ತೆರವು ವಿಚಾರವಾಗಿ ಅಧಿಕಾರಿಗಳು ಹಾಗೂ ಬಂಜಾರಾ ಸಮುದಾಯದ ಮುಖಂಡರು ನಡುವೆ ವಾಗ್ವಾದ ಶುರುವಾದ ಹಿನ್ನಲೆ ಸ್ಥಳದಲ್ಲಿಯೇ  ಹಿರಿಯ ಪೊಲೀಸ್ ಅಧಿಕಾರಿಗಳು ಮುಕ್ಕಾಂ ಹೂಡಿದ್ದಾರೆ. ಸದ್ಯ ವೃತ್ತ ತೆರವಿಗೆ ಆಕ್ರೋಶ ಹಿನ್ನೆಲೆಯಲ್ಲಿ ಅಧಿಕಾರಿಗಳು ವಾಪಸ್ ತೆರಳಿದ್ದಾರೆ. ನಾಳೆ ಬಂಜಾರಾ ಸಮುದಾಯದ ಮುಖಂಡರು ಸಭೆ ಮಾಡಲು ನಿರ್ಧಾರ ಮಾಡಿದ್ದಾರೆ. ಇನ್ನು ಈ ವಿಚಾರ ಎಲ್ಲಿಗೆ ಹೋಗಿ ನಿಲ್ಲುತ್ತೆ ಎಂಬುದನ್ನು ಕಾದುನೋಡಬೇಕಿ್ದೆ.

ಇದನ್ನೂ ಓದಿ:ಸಿದ್ದರಾಮಯ್ಯ ಸಂಪುಟದಲ್ಲಿ ಲಂಬಾಣಿ ಶಾಸಕರಿಗಿಲ್ಲ ಸ್ಥಾನ: ಸರ್ದಾರ್ ಸೇವಾಲಾಲ್ ಸ್ವಾಮೀಜಿ ಆಕ್ರೋಶ

ವಿಜಯಪುರದಲ್ಲಿ ಸಂತಸೇವಾಲಾಲ್​​ರ ಜಯಂತಿ ಆಚರಣೆ

ವಿಜಯಪುರ: ಇಂದು ಸಂತ ಸೇವಾಲಾಲ್​ರ 285 ನೇ ಜಯಂತಿಯನ್ನು ಜಿಲ್ಲೆಯಲ್ಲಿ ಸಡಗರದಿಂದ ಆಚರಿಸಲಾಗಿತ್ತು. ಬಂಜಾರ ಸಮುದಾಯದ ಮೂಲ ಗುರುಗಳಾಗಿದ್ದ ಸೇವಾಲಾಲರು ನಗರದ ಪ್ರಮುಖ ರಸ್ತೆಗಳಲ್ಲಿ ಸೇವಾಲಾಲ ಭಾವಚಿತ್ರ ಮೆರವಣಿಗೆ ಮಾಡಿದ್ದು, ಮಹಿಳೆಯರು ಬಂಜಾರ ನೃತ್ಯ ಮಾಡಿದ್ದರು. ಅಷ್ಟೇ ಅಲ್ಲ, ಈ ಮಹಿಳೆಯರ ಕುಣಿತಕ್ಕೆ ವಿದೇಶೀ ಮಹಿಳೆ ಕೂಡ ಸಾಥ್ ನೀಡಿದ್ದರು. ಅದೇ ರೀತಿಯಾಗಿ ಧಾರವಾಡ ನಗರದಲ್ಲಿಯೂ ಕೂಡ ಸಂತ ಶ್ರೀ ಸೇವಾಲಾಲ್​ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿದ್ದು, ಅದರ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ನಗರದ ಪ್ರಮುಖ ರಸ್ತೆ ಮೂಲಕ ಸೇವಾಲಾಲ್​​​ರ ಭಾವಚಿತ್ರ ​​ಮೆರವಣಿಗೆ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:40 pm, Fri, 16 February 24