AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೇವಾಲಾಲ್ ಜಯಂತಿ ಆಚರಿಸಲು ಆದೇಶಿಸಿದ್ದೇ ನಮ್ಮ ಸರ್ಕಾರ: ಸಿಎಂ ಸಿದ್ದರಾಮಯ್ಯ

ಸೇವಾಲಾಲ್ ಜನ್ಮಸ್ಥಳ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸುತ್ತೇವೆ. ತಾಂಡಾಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಿದ್ದೆ, ಈಗಲೂ ನೀಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸೇವಾಲಾಲ್​ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಸೂಚಿಸಿದ್ದೇನೆ. ಸೇವಾಲಾಲ್ ಒಂದು ಜಾತಿಗೆ ಸೀಮಿತವಲ್ಲ, ಮನುಷ್ಯ ಸಮಾಜದ ಬೆಳಕು ಎಂದು ಹೇಳಿದ್ದಾರೆ.

ಸೇವಾಲಾಲ್ ಜಯಂತಿ ಆಚರಿಸಲು ಆದೇಶಿಸಿದ್ದೇ ನಮ್ಮ ಸರ್ಕಾರ: ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Anil Kalkere
| Edited By: |

Updated on: Feb 15, 2024 | 7:20 PM

Share

ಬೆಂಗಳೂರು, ಫೆಬ್ರವರಿ 15: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ್ ಜಯಂತಿ (Sant Sevalal Jayanti) ಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸೇವಾಲಾಲ್ ಜನ್ಮಸ್ಥಳ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸುತ್ತೇವೆ. ತಾಂಡಾಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಿದ್ದೆ, ಈಗಲೂ ನೀಡುತ್ತೇನೆ. ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗಲೂ ಅಗತ್ಯ ಅನುದಾನ ನೀಡಿದ್ದೆ. ವಾಸಿಸಿರುವವನೇ ಮನೆ ಒಡೆಯ ಕಾನೂನು ತಂದಿದ್ದು ನಮ್ಮ ಸರ್ಕಾರ. ಇದರಿಂದ ಬಂಜಾರ ಸಮುದಾಯಕ್ಕೆ ಸಾಕಷ್ಟು ಅನುಕೂಲವಾಯಿತು. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಸೂಚಿಸಿದ್ದೇನೆ. ನಮ್ಮ ಸರ್ಕಾರವೇ ಸೇವಾಲಾಲ್ ಜಯಂತಿ ಆಚರಿಸಲು ಆದೇಶಿಸಿದ್ದು, ಸೇವಾಲಾಲ್ ಒಂದು ಜಾತಿಗೆ ಸೀಮಿತವಲ್ಲ, ಮನುಷ್ಯ ಸಮಾಜದ ಬೆಳಕು. ಸ್ವಾಭಿಮಾನಿಗಳಾಗಿ ಬದುಕಲು ಪ್ರೇರಣೆ ಆಗಿದ್ದು ದಾರ್ಶನಿಕ ಸೇವಾಲಾಲ್ ಎಂದು ಹೇಳಿದ್ದಾರೆ.

ಸೇವಲಾಲ್​​ರನ್ನು ಸರ್ಕಾರವೇ ಮುಂದೆ ಗೌರವಿಸಬೇಕು ಎನ್ನುವ ಉದ್ದೇಶದಿಂದಲೇ ಕಾಂಗ್ರೆಸ್ ಸರ್ಕಾರ ಸೇವಲಾಲ್ ದಿನಾಚರಣೆಯನ್ನು ಆರಂಭಿಸಿತು. ಸೇವಾಲಾಲ್ ಜನ್ಮಸ್ಥಳ ಅಭಿವೃದ್ಧಿಗೆ ಈ ಸರ್ಕಾರದಲ್ಲೂ ಅಗತ್ಯ ಅನುದಾನ ಒದಗಿಸಲಾಗುವುದು ಎಂದಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವ ಶಿವರಾಜ್ ತಂಗಡಗಿ, ಸಮುದಾಯದ ಮುಖಂಡರು ಸೇರಿ ಹಲವರು ಭಾಗಿ ಆಗಿದ್ದರು.

ಸಂತಸೇವಾಲಾಲ್​​ರ 285 ನೇ ಜಯಂತಿ ಆಚರಣೆ

ವಿಜಯಪುರ: ಇಂದು ಸಂತಸೇವಾಲಾಲ್​ರ 285 ನೇ ಜಯಂತಿಯನ್ನು ಜಿಲ್ಲೆಯಲ್ಲಿ ಸಡಗರದಿಂದ ಆಚರಿಸಲಾಗಿದೆ. ಬಂಜಾರ ಸಮುದಾಯದ ಮೂಲ ಗುರುಗಳಾಗಿದ್ದ ಸೇವಾಲಾಲರು ನಗರದ ಪ್ರಮುಖ ರಸ್ತೆಗಳಲ್ಲಿ ಸೇವಾಲಾಲ ಭಾವಚಿತ್ರ ಮೆರವಣಿಗೆ ಮಾಡಿದ್ದು, ಮಹಿಳೆಯರು ಬಂಜಾರ ನೃತ್ಯ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಜೆಟ್: ಕೂಡಲಸಂಗಮದಲ್ಲಿ ವಚನಗಳ ವಿವಿ ಘೋಷಣೆ ಮಾಡಬೇಕು: ಬಸವ ಜಯಮೃತ್ಯುಂಜಯ ಶ್ರೀ

ಲಂಬಾಣಿ ಸಮಾಜದ ಮಹಿಳೆಯರ ಕುಣಿತಕ್ಕೆ ವಿದೇಶೀ ಮಹಿಳೆ ಸಾಥ್ ನೀಡಿದ್ದಾರೆ. ವಿದೇಶಿ ಮಹಿಳೆಗೆ ಬಂಜಾರ ಶಾಲು ಹೊದಿಸಿ ಬಂಜಾರಾ ಸಮಾಜದ ಮಹಿಯರು ಸನ್ಮಾನಿಸಿದರು. ಬಳಿಕ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಕಾರ್ಯಕ್ರಮ ಮಾಡಲಾಗಿದೆ.

ಇದನ್ನೂ ಓದಿ: ಕನಕಪುರದಲ್ಲಿ ಒಂದು ಲೋಡ್ ಮೇವು ಹಂಚುವಾಗ ಹೊಡೆದಾಟಗಳೇ ಆಯ್ತು: ಡಿಕೆ ಶಿವಕುಮಾರ್​ಗೆ ಹೆಚ್​ಡಿ ಕುಮಾರಸ್ವಾಮಿ ಟಾಂಗ್

ಅದೇ ರೀತಿಯಾಗಿ ಧಾರವಾಡ ನಗರದಲ್ಲಿ ಸಂತ ಶ್ರೀ ಸೆವಾಲಾಲ್​​ ಜಯಂತಿ ಅಂಗವಾಗಿ ಬಂಜಾರ ಸಮಾಜದಿಂದ ಮೆರವಣಿಗೆ ಮಾಡಲಾಗಿದೆ. ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ನಗರದ ಪ್ರಮುಖ ರಸ್ತೆ ಮೂಲಕ ಸೇವಾಲಾಲ್​​​ರ ಭಾವಚಿತ್ರ ​​ಮೆರವಣಿಗೆ ಮಾಡಿದ್ದು, ಡಿಜೆ ಸೌಂಡ್​​ಗೆ ಯುವಕ ಮತ್ತು ಯುವತಿಯರು ಹೆಜ್ಜೆ ಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.