ವಿಜಯಪುರ: ಮಿಣಜಗಿ ಬಳಿ ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮಿಣಜಗಿಯಲ್ಲಿ ಸೇತುವೆ ಕುಸಿದು ಬೀಳುವ ಆತಂಕ ಉಂಟಾಗಿದೆ. ಹಾಗಾಗಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಸೇತುವೆಯ ಮೇಲೆ ಸಂಚಾರ ಸ್ಥಗಿತಗೊಳಿಸಿದ್ದರಿಂದ ವಿಜಯಪುರ, ತಾಳಿಕೋಟೆ, ಮುದ್ದೇಬಿಹಾಳ ಸಂಪರ್ಕ ಬಂದ್ ಆಗಿದೆ. ಸ್ಥಳದಲ್ಲಿ ಪಿಡಬ್ಲ್ಯುಡಿ ಅಧಿಕಾರಿಗಳು, ಪೊಲೀಸರು ಬೀಡುಬಿಟ್ಟಿದ್ದಾರೆ. ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಡೋಣಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರೋ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ರಾಜ್ಯ ಹೆದ್ದಾರಿ 61 ರಲ್ಲಿ ನಿರ್ಮಾಣವಾಗಿರುವ ಸೇತುವೆ ಇದಾಗಿದೆ. ಬಿರುಕು ಬಿಟ್ಟ ಕಾರಣ ಸೇತುವೆ ಮುರಿದು ಬೀಳುವ ಆತಂಕ ಸೃಷ್ಟಿಯಾಗಿದೆ. ಅನಿವಾರ್ಯ ಉಂಟಾದರೆ ದೇವರಹಿಪ್ಪರಗಿ ಪಟ್ಟಣದ ಮೂಲಕ ಸುತ್ತು ಹಾಕಿ ಪ್ರಯಾಣ ಮಾಡುವ ಅನಿವಾರ್ಯತೆ ಎದುರಾಗಿದೆ. ನಿತ್ಯ ಇಪ್ಪತ್ತು ಸಾವಿರಕ್ಕೂ ಅಧಿಕ ವಾಹನಗಳು ಸಂಚಾರಿಸುವ ರಾಜ್ಯ ಹೆದ್ದಾರಿ ಇದಾಗಿದೆ.
ಇದನ್ನೂ ಓದಿ: ವಿಜಯಪುರ: ಪತ್ನಿಗೆ ಸಂಬಂಧಿಯ ಜೊತೆ ಅಕ್ರಮ ಸಂಬಂಧ; ಮನನೊಂದ ಪತಿ ಆತ್ಮಹತ್ಯೆಗೆ ಶರಣು
ಇದನ್ನೂ ಓದಿ: ವಿಜಯಪುರ: ಯುಪಿಎಸ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ನೇತ್ರಾ ಮೇಟಿ ಹಾಗೂ ಸಾಗರ ವಾಡಿಗೆ ರ್‍ಯಾಂಕ್