ಶಕ್ತಿ ಯೋಜನೆಯ ‘ಫಲಾನುಭವಿ ಬಳೆ ಗ್ಯಾಂಗ್​’ ಕೊನೆಗೂ ಅರೆಸ್ಟ್​! ಏನಿವರ ಕೈಚಳಕದ ಕತೆ?

| Updated By: ಸಾಧು ಶ್ರೀನಾಥ್​

Updated on: Mar 28, 2024 | 10:03 AM

ಶಕ್ತಿ ಯೋಜನೆಯನ್ನೇ ತಮ್ಮ ಕಳ್ಳತನಕ್ಕೆ ಶಕ್ತಿ ಮಾಡಿಕೊಂಡ ಖತರ್ನಾಕ್ ಗ್ಯಾಂಗ್ ನ್ನು ಹೆಡೆಮುರಿ ಕಟ್ಟಿದ ಗಾಂಧಿ ಚೌಕ್ ಪೊಲೀಸರು ಹಾಗು ಜಿಲ್ಲಾ ಪೊಲೀಸರ ತನಿಖೆಗೆ ಸಾರ್ವಜನಿಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣದ ಆಸೆಯಿಂದ ಮಹಿಳೆಯರು ಹೆಚ್ಚು ಹೆಚ್ಚು ಪ್ರಮಾಣ ಮಾಡುತ್ತಿದ್ದರು. ಇದೇ ರೀತಿ ಬಸ್ ಪ್ರಯಾಣದಲ್ಲಿ ಹೆಚ್ಚಿನ ರಶ್ ಇದ್ದಲ್ಲಿ ಹಾಗು ಬಸ್ ಹತ್ತೋವಾಗಿನ ಭರದಲ್ಲಿ ಈ ಗ್ಯಾಂಗ್ ಮಹಿಳೆಯರ ಕೈಯ್ಯಲ್ಲಿದ್ದ ಚಿನ್ನದ ಬಳೆಗಳನ್ನು ಕಟ್ ಮಾಡಿಕೊಂಡು ಜೂಟ್ ಹೇಳುತ್ತಿತ್ತು.

ಶಕ್ತಿ ಯೋಜನೆಯ ಫಲಾನುಭವಿ ಬಳೆ ಗ್ಯಾಂಗ್​ ಕೊನೆಗೂ ಅರೆಸ್ಟ್​! ಏನಿವರ ಕೈಚಳಕದ ಕತೆ?
ಶಕ್ತಿ ಯೋಜನೆಯ 'ಫಲಾನುಭವಿ ಬಳೆ ಗ್ಯಾಂಗ್​' ಕೊನೆಗೂ ಅರೆಸ್ಟ್​!
Follow us on

ಕಳೆದ ವಿಧಾನಭಾ ಚುನಾವಣೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಜಯಶಾಲಿಯಾಗಿ ಆಧಿಕಾರಕ್ಕೆ ಏರಿದೆ. ಆಧಿಕಾರಕ್ಕೆ ಬಂದ ಬಳಿಕ ಚುನಾವಣಾ ಪೂರ್ವ ನೀಡಿದ್ದ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಸಹ ಜಾರಿಗೆ ತಂದಿದೆ. ಅದರಲ್ಲಿ ಶಕ್ತಿ ಯೋಜನೆಯೂ (shakti scheme) ಒಂದಾಗಿದೆ. ಸರ್ಕಾರಿ ಸಾರಿಗೆ ಇಲಾಖೆಯ ಬಸ್ ಗಳಲ್ಲಿ ಷರತ್ತು ಬದ್ದವಾಗಿ ಎಲ್ಲಾ ಮಹಿಳೆಯರು ಪ್ರಯಾಣ ಮಾಡಬಹುದು (women bus passengers) ಎಂಬ ಯೋಜನೆ ಇದಾಗಿದೆ. ಈ ಯೋಜನೆ ಜಾರಿಗೆ ಬಂದಿದ್ದೇ ತಡಾ ಮಹಿಳಾ ಮಣಿಗಳು ಉಚಿತ ಪ್ರಯಾಣ ಮಾಡುವತ್ತ ಚಿತ್ತ ನೆಟ್ಟರು. ಆದರೆ ಕೆಲ ಖದೀಮರು ಇದೇ ಶಕ್ತಿ ಯೋಜನೆಯನ್ನೇ ಬಂಡವಾಳ ಮಾಡಿಕೊಂಡು ಕಳ್ಳತನ ಮಾಡಿದ್ದರು. ಇಂಥ ಖದೀಮರ ಕೃತ್ಯದ ಬಗ್ಗೆ ಕೇಳಿದರೆ ನೀವೂ ಶಾಕ್ ಆಗ್ತೀರಾ. ಈ ಕುರಿತ ವರದಿ ಇಲ್ಲಿದೆ ನೋಡಿ. ಶಕ್ತಿ ಯೋಜನೆಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರ ಗ್ಯಾಂಗ್….. ಬಸ್ ಹತ್ತೋ ನೂಗು ನುಗ್ಗಲಿನಲ್ಲೇ ಕೈ ಚಳಕ ತೋರಿ ಪರಾರಿಯಾಗುತ್ತಿದ್ದ ಖದೀಮರು…. ಮಹಿಳಾ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡುತ್ತಿದ್ದವರು ಕೊನೆಗೂ ಅಂದರ್…. ವಿಜಯಪುರ ನಗರದ ಗಾಂಧಿ ಚೌಕ್ ಪೊಲೀಸರಿಂದ (central bus station, satellite bus station Vijayapura) ಆ ಕಳ್ಳರ ಬಂಧನವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಆಧಿಕಾರಕ್ಕೆ ಬಂದಿದ್ದೇ ತಡಾ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಮೊದಲು ಜಾರಿ ಮಾಡಲಾಯಿತು. ಇದರಿಂದ ಫುಲ್ ಖುಷಿಯಾದ ಮಹಿಳಾ ಮಣಿಗಳು ತಾ ಮುಂದೆ ನಾ ಮುಂದೆ ಎಂದು ಉಚಿತ ಪ್ರಯಾಣ ಮಾಡಿ ಖುಷಿ ಪಟ್ಟರು. ಈ ರೀತಿ ಶಕ್ತಿ ಯೋಜನೆಯ ಕುರಿತು ಮಹಿಳೆಯರು ಅಷ್ಟೇ ಅಲ್ಲಾ ಕೆಲ ಖದೀಮರ ಗ್ಯಾಂಗ್ ಸಹ ಒಳಗೊಳಗೇ ಖುಷಿ ಪಟ್ಟರು.

ಅದರಲ್ಲೂ ನೆರೆಯ ಮಹಾರಾಷ್ಟ್ರದ ಹಡಪಸರ್ ಮೂಲದ ಕಳ್ಳರ ಗ್ಯಾಂಗ್ ಹಾಗೂ ನೆರೆಯ ಕಲಬುರಗಿ ನಗರದ ಬಾಪು ನಗರದ ಮಹಿಳಾ ಕಳ್ಳಿಯರ ಗ್ಯಾಂಗ್ ಸಹ ಶಕ್ತಿ ಯೋಜನೆಯನ್ನೇ ಬಂಡವಾಳ ಮಾಡಿಕೊಂಡರು ಬಿಟ್ಟರು! ಈ ಗ್ಯಾಂಗ್ ನವರು ವಿಜಯಪುರ ಜಿಲ್ಲೆಯನ್ನು ಟಾರ್ಗೆಟ್ ಮಾಡಿಕೊಂಡು ವಿಜಯಪುರ ನಗರದ ಕೇಂದ್ರ ಬಸ್ ನಿಲ್ಧಾಣ ಹಾಗೂ ಸ್ಯಾಟ್ ಲೈಟ್ ಬಸ್ ನಿಲ್ದಾಣಗಳಲ್ಲಿ ತಮ್ಮ ಕಳ್ಳ ವೃತ್ತಿಯನ್ನು ಶುರು ಮಾಡಿದ್ದರು.

ಶಕ್ತಿ ಯೋಜನೆಯಿಂದ ಹೆಚ್ಚು ಮಹಿಳಾ ಪ್ರಯಾಣಿಕರು ಬಸ್ ಹತ್ತೋವಾಗ ಹಾಗೂ ಪ್ರಯಾಣ ಮಾಡೋವಾಗ ತಮ್ಮ ಕೈಚಳಕ ತೋರುತ್ತಿದ್ದರು. ತುಂಬಾ ರಶ್ ಆಗಿರೋ ಬಸ್ ಗಳಲ್ಲಿ ಹತ್ತುತ್ತಿದ್ದ ಈ ಮಹಿಳಾ ಕಳ್ಳರು ಮಹಿಳಾ ಪ್ರಯಾಣಿಕರ ಕೈಯ್ಯಲ್ಲಿದ್ದ ಚಿನ್ನ ಬಳೆಗಳನ್ನು ಸದ್ದಿಲ್ಲೇ ಕಟ್ ಮಾಡಿಕೊಂಡು ಜೂಟ್ ಹೇಳುತ್ತಿದ್ದರು.

ಇನ್ನು ಕೆಲ ಮಹಿಳಾ ಹಾಗೂ ಪುರುಷ ಕಳ್ಳರು ಬಸ್ ಹತ್ತುವ ಧಾವಂತದಲ್ಲಿ ತಳ್ಳಾಟ ನೂಕಾಟ ಮಾಡಿ ಮಹಿಳಾ ಪ್ರಯಾಣಿಕರ ಕೈಗಳಲ್ಲಿರೋ ಚಿನ್ನದ ಬಳೆಗಳು ಅಂದರೆ ಪಾಟಲಿ ಹಾಗೂ ಬಿಲವಾರ್ ಹಾಗೂ ಇತರೆ ಚಿನ್ನದ ಬಳೆಗಳನ್ನು ಕತ್ತರಿಸಿಕೊಂಡು ಯಾಮಾರಿಸಿ ಪರಾರಿಯಾಗಿ ಬಿಡುತ್ತಿದ್ದರು. ಇಂಥ ಪ್ರಕರಣಗಳನ್ನು ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮಹಾಂತೇಶ ದಾಮನ್ನವರ ಬಯಲು ಮಾಡಿದ್ದಾರೆ.

Also Read: ವಿಜಯಪುರದಲ್ಲಿ ಅಕ್ಷರಶಃ ಬಾವಿಯ ಆಳಕ್ಕಿಳಿದು ಜಾಲಾಡಿದ ಇನ್ಸ್​ಪೆಕ್ಟರ್​​​ ಸಂಜೀವ್ ಕಾಂಬಳೆ ಹಾಗೂ ಟೀಂ ಜೋಡಿ ಶವಗಳ ಪ್ರಕರಣ ಭೇದಿಸಿದ್ದು ಹೇಗೆ ಗೊತ್ತಾ?

ಮಹಾರಾಷ್ಟ್ರದ ಹಡಪಸರ ಮೂಲದ ಮೂವರು ಪುರುಷ ಕಳ್ಳರು ಹಾಗು ಕಲಬುರಗಿಯ ಬಾಪೂ ನಗರದ ಮೂವರ ಮಹಿಳಾ ಕಳ್ಳಿಯರನ್ನು ಅಂದರ್ ಮಾಡಿದ್ದಾರೆ. ಕಲಬುರಗಿ ಪಟ್ಟಣದ ಬಾಪೂ ನಗರದ ಗಂಗೂಬಾಯಿ ಕಾಳೆ (56 ) ನರಸಮ್ಮ ಪಾಟೀಲ್ (44 ) ಕರೀಸ್ಮಾ ಉಪಾದ್ಯೆ (35) ಈ ಮೂವರು ಮಹಿಳಾ ಕಳ್ಳಿಯರು ಸೇರಿದಂತೆ ನೆರೆಯ ಮಹಾರಾಷ್ಟ್ರದ ಹಡಪಸರ ಮೂಲದ ಶಹನಾಜ್ ಶೇಖ್ (23) ವಿಕ್ಕಿ ನಾಯರ (35) ನಿಲೇಶ ಜಾಧವ್ (34) ಬಂಧಿತರು. ಈ ಆರು ಜನ ಕದೀಮರ ಬಳಿ 234 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನದ ಬಳೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಋಷಿಕೇಶ ಸೋನೆವಣೆ ಮಾಹಿತಿ ನೀಡಿದ್ದಾರೆ.

ಶಕ್ತಿ ಯೋಜನೆಯನ್ನೇ ತಮ್ಮ ಕಳ್ಳತನಕ್ಕೆ ಶಕ್ತಿ ಮಾಡಿಕೊಂಡ ಖತರ್ನಾಕ್ ಗ್ಯಾಂಗ್ ನ್ನು ಹೆಡೆಮುರಿ ಕಟ್ಟಿದ ಗಾಂಧಿ ಚೌಕ್ ಪೊಲೀಸರು ಹಾಗು ಜಿಲ್ಲಾ ಪೊಲೀಸರ ತನಿಖೆಗೆ ಸಾರ್ವಜನಿಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಕ್ತಿ ಯೋಜನೆಯ ಉಚಿತ ಬಸ್ ಪ್ರಯಾಣದ ಆಸೆಯಿಂದ ಮಹಿಳೆಯರು ಹೆಚ್ಚು ಹೆಚ್ಚು ಪ್ರಮಾಣ ಮಾಡುತ್ತಿದ್ದರು. ಇದೇ ರೀತಿ ಬಸ್ ಪ್ರಯಾಣದಲ್ಲಿ ಹೆಚ್ಚಿನ ರಶ್ ಇದ್ದಲ್ಲಿ ಹಾಗು ಬಸ್ ಹತ್ತೋವಾಗಿನ ಭರದಲ್ಲಿ ಈ ಗ್ಯಾಂಗ್ ಮಹಿಳೆಯರ ಕೈಯ್ಯಲ್ಲಿದ್ದ ಚಿನ್ನದ ಬಳೆಗಳನ್ನು ಕಟ್ ಮಾಡಿಕೊಂಡು ಜೂಟ್ ಹೇಳುತ್ತಿತ್ತು. ಕಷ್ಟಪಟ್ಟು ಮಹಿಳೆಯರು ಚಿನ್ನದ ಒಡವೆಗಳನ್ನು ಮಾಡಿಸಿಕೊಂಡಿರುತ್ತಾರೆ. ಅವುಗಳನ್ನೇ ಕಟ್ ಮಾಡಿಕೊಂಡು ಹೋಗುತ್ತಿದ್ದ ಗ್ಯಾಂಗ್ ಈಗ ಅಂದರ್ ಆಗಿದ್ದು ಸಮಾಧಾನಕರ ಬೆಳವಣಿಗೆಯಾಗಿದೆ. ಈ ಗ್ಯಾಂಗ್ ನನ್ನು ಅರೆಸ್ಟ್ ಮಾಡಿದ್ದಕ್ಕೆ ಜಿಲ್ಲಾ ಪೊಲೀಸ್ ಇಲಾಖೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಯ ನಗರದ ಕೇಂದ್ರ ಬಸ್ ನಿಲ್ದಾಣ ಹಾಗೂ ಸ್ಯಾಟ್ ಲೈಟ್ ಬಸ್ ನಿಲ್ದಾಣದಲ್ಲಿ ನಡೆದಿದ್ದ ಬಳೆಗಳನ್ನು ಕಟ್ ಮಾಡಿಕೊಂಡು ಕದ್ದು ಪರಾರಿಯಾಗಿದ್ದರ ಬಗ್ಗೆ ಪ್ರಕರಣಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ಗಾಂಧಿ ಚೌಕ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಮಹಾಂತೇಶ ದಾಮಣ್ಣವರ ಹಾಗೂ ತಂಡ ಕದೀಮರ ಬಂಧಿಸಿದೆ. ಖದೀಮರಿಂದ ವಶಪಡಿಸಿಕೊಂಡ ಚಿನ್ನದ ಬಳೆಗಳನ್ನು ಕಾನೂನು ಪ್ರಕಾರ ಮಲೀಕರಿಗೆ ನೀಡಲಾಗುತ್ತದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ. ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು ಇನ್ನೂ ಹೆಚ್ಚಿನ ತನಿಖೆ ನಡೆದಿದೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ