ವಿಜಯಪುರ, (ಏಪ್ರಿಲ್ 11): ವಿಜಯಪುರ ತಾಲೂಕಿನ ಕತ್ನಳ್ಳಿಯಲ್ಲಿ ಶ್ರೀ ಗುರು ಚಕ್ರವರ್ತಿ ಸದಾಶಿವಯೋಗೇಶ್ವರ ಜಾತ್ರೆ ಪ್ರತಿ ಯುಗಾದಿಯಂದು ನಡೆಯುತ್ತದೆ. ಇನ್ನು ಜಾತ್ರೆಯ ಕೊನೆಯಲ್ಲಿ ಒಂದು ವರ್ಷದವರೆಗೆ ಆಗು ಹೋಗುಗಳ ಕುರಿತು ಭವಿಷ್ಯವನ್ನು ನುಡಿಯಲಾಗುತ್ತದೆ. ಇಲ್ಲಿ ನುಡಿಯುವ ಭವಿಷ್ಯ ಎಂದೂ ಸುಳ್ಳಾಗಲು ಮುಂದೆಯೂ ಸುಳ್ಳಾಗದು ಎನ್ನುವ ನಂಬಿಕೆ ಇದೆ. ಅದರಂತೆ ಈ ವರ್ಷ, ಮಳೆ ಬೆಳೆ ರೋಗ ರುಜಿನಗಳು, ರಾಜಕಾರಣ ಸೇರಿದಂತೆ ಇತರೆ ವಿಚಾರಗಳ ಕುರಿತು ಶಿವಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದು, ಒಗಟಿನ ರೂಪದಲ್ಲಿ ಭವಿಷ್ಯ ನುಡಿದಿರುವ ಅವರು ನಾಲ್ಕು ರೇಸಿ ಬಂಡಿಗಳಿವೆ, ಅವು ಈಗ ಮುಂದೆ ಹೊರಟಿವೆ. ತ್ಯಾಗಿ, ಯೋಗಿ, ಭೋಗಿ, ರೋಗಿ ಈ ಯಾವ ಗಾಡಿಯಲ್ಲಿ ಕುಳಿತು ಸ್ಪರ್ಧೆ ಗೆಲ್ಲುತ್ತೀರಿ ನೋಡಿ ಎಂದಿದ್ದಾರೆ.
ಕ್ರೋಧಿನಾಮ ಸಂವತ್ಸರ ಇದಾಗಿದೆ. ಯಾರೋಬ್ಬರೂ ಕ್ರೋಧದಿಂದ ಇರಬಾರದು. ಎಲ್ಲರೂ ಸಹಬಾಳ್ವೆಯಿಂದ ಹೊಂದಾಣಿಕೆಯಿಂದ, ನಯ ವಿನಯದಿಂದ ಹೋಗಬೇಕೆಂದು ಭವಿಷ್ಯವಾಣಿಯಲ್ಲಿ ಹೇಳಿದರು. ಇನ್ನು ಮಳೆಯ ಕುರಿತು ಭವಿಷ್ಯ ನುಡಿದ ಸ್ವಾಮೀಜಿ ಸಾಕ್ಷಾತ್ ಶಿವನೇ ಮಲೆಗಾಗಿ ಒಂಟಿಗಾಲಲ್ಲಿ ನಿಂತಿದ್ದಾನೆ. ನೀರಿಗಾಗಿ ಪ್ರಾಣಿ ಪಕ್ಷಿ ಪರಿತಪಿಸುವಂತಾಗುತ್ತದೆ. ಮುಂದಿನ ದಸಕಿ ಬೇರೆ ಬರುತ್ತದೆ. ಅದು ಯಾರನ್ನು ಬೆಸುಗೆ ಹಾಕುತ್ತದೆಯೋ ಅಗಲಿಸುತ್ತದೆಯೋ ಕೂಡಿಸುತ್ತದೆಯೋ ಎಂಬುದು ಗೊತ್ತಿಲ್ಲ. ಇದರಿಂದ ಪಾರಾಗಗಬೇಕೆಂದರೆ ದೇವರ ಸೇವೆ ಮಾಡಬೇಕೆಂದರು.
ರಾಜಕಾರಣದ ಕುರಿತು ಹೇಳಿದ ಸ್ವಾಮೀಜಿ, ನಾಲ್ಕು ಗಾಡಿಗಳು ಓಡುತ್ತಿವೆ. ಒಂದು ತ್ಯಾಗಿ, ಒಂದು ಯೋಗಿ, ಒಂದು ಭೋಗಿ ಹಾಗೂ ಒಂದು ರೋಗಿ ಗಾಡಿಯಂತಿವೆ. ನೀವು ಯಾವ ಗಾಡಿಯಲ್ಲಿ ಹೋಗುತ್ತೀರಿ ನೋಡಿ ಎಂದು ಲೋಕಸಭಾ ಚುನಾವಣೆ ಹಾಗೂ ದೇಶದ ರಾಜಕಾರಣದ ಕುರಿತು ಭವಿಷ್ಯನನ್ನು ಮುಂದುವರೆಸಿ ಮಾತನಾಡಿದ ಸ್ವಾಮೀಜಿ, ಒಳಗೆ ಕೆಲವೊಂದು ದೈತ್ಯ ಕಂಪನಿ ಗಂಟು ಬಿದ್ದಿದೆ. ದೈತ್ಯರ ರಾಜ್ಯವಾಗಬೇಕೆಂದು ಗಂಟು ಬಿದ್ದಿದೆ. ತನ್ನ ಕೈಯ್ಯಲ್ಲಿ ಆಗದಿದ್ದರೆ ಮಿಶ್ರ ಸರ್ಕಾರ ಮಾಡಬೇಕೆಂದು ಗಂಟು ಬಿದ್ದಿದೆ ಎಂದು ನುಡಿದರು.
ಈ ಬಾರಿ ಎಲ್ಲ ರೀತಿಯಲ್ಲಿ ಮಿಶ್ರವಿದೆ ಸುಖಕ್ಕಿಂತ ದುಖಃ ಹೆಚ್ಚಿದೆ ಎಂದ ಸ್ವಾಮೀಜಿ ಇನ್ನುಳಿದಂತೆ ಇತರೆ ವಿಚಾರಗಳ ಕುರಿತು ಭವಿಷ್ಯ ನುಡಿದರು. ಎಲ್ಲವನ್ನೂ ಯಾರೂ ನಂಬಬೇಡಿ, ಪಂಚಭೂತಗಳು ಕ್ರೋಧವಾಗಿದೆ ಎಲ್ಲರೂ ಹುಷಾರಾಗಿರಬೇಕೆಂದು ತಿಳಿಸಿದರು. ಮಳೆಯ ಬೆಳೆಯ ವಿಸೃತ ಭವಿಷ್ಯವನ್ನು ಚಮಕೇರಿಯಲ್ಲಿ ಹೇಳುತ್ತೇನೆಂದರು.
ಭವಿಷ್ಯ ನುಡಿಯೋ ಕಾರ್ಯದ ಬಳಿಕ ನಿಯದಂತೆ ಮಹಿಳೆಯರಿಗೆ ಹಾಗೂ ಕೆಲ ಮುಖಂಡರಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಿಸಲಾಗುತ್ತದೆ. ನಂತರ ಜಾತ್ರೆಗೆ ಆಗಮಿಸಿದ ಸಾವಿರಾರು ಭಕ್ತರಿಗೆ ಕಡಬು ತುಪ್ಪ ಅಣ್ಣ ಸಾರು ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆ ಕಾರ್ಣಿಕ ಭವಿಷ್ಯವನ್ನು ನುಡಿಯೋ ಜಾತ್ರೆಗೆ ತೆರೆ ಬಿದ್ದಿದೆ. ಸ್ವಾಮೀಜಿ ನುಡಿದ ಭವಿಷ್ಯವನ್ನು ನೆರೆದ ಭಕ್ತರು ವಿಶ್ಲೇಷತೆಯಲ್ಲಿ ತೊಡಗಿದ್ದು ಕಂಡು ಬಂತು.
ಮಠದಲ್ಲಿ ಸಕಲ ಪೂಜಾ ಕಾರ್ಯಕ್ರಮ ನೆರವೇರಿಸಿಕೊಂಡು ಬಾಜಾ ಭಜಂತ್ರಿ ಸಮೇತ ಮಠದ ಪೀಠಾಧಿಪತಿ ಶ್ರೀ ಶಿವಯ್ಯ ಸ್ವಾಮೀಜಿ ಮಠದ ಬಳಿ ಬೇವಿಕ ಕಟ್ಟೆಯ ಬಳಿ ಆಗಮಿಸಿ ಭವಿಷ್ಯ ನುಡಿಯೋದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಲವಾರು ತಲೆಮಾರುಗಳಿಂದ ಮಠದ ಜಾತ್ರೆಯಲ್ಲಿ ನುಡಿಯೋ ಭಷ್ಯದ ಸುಳ್ಳಾಗಲ್ಲ. ಈ ಭವಿಷ್ಯದ ಆಧಾರದ ಮೇಲೆ ಈ ಭಾಗದ ಜನರು ತಮ್ಮ ಮುಂದಿನ ಕಾರ್ಯಗಳನ್ನು ಮಾಡುತ್ತಾರೆ. ಜೀವನ ಮಾಡುತ್ತಾರೆಂದು ಭಕ್ತರು ಹೇಳಿದ್ದಾರೆ.
Published On - 8:35 pm, Thu, 11 April 24