ವಿಜಯಪುರ ತಹಶೀಲ್ದಾರ್​​ ವಾಹನ ಚಾಲಕ ನೇಣಿಗೆ ಶರಣು

| Updated By:

Updated on: Jun 20, 2020 | 7:30 PM

ವಿಜಯಪುರ: ತಹಶೀಲ್ದಾರ್​ ಮೋಹನಕುಮಾರಿಯವರ ಖಾಸಗಿ ವಾಹನ ಚಾಲಕ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 39 ವರ್ಷದ ಆರೀಫ್ ಜುನೇದಿ ಮೃತ ದುರ್ದೈವಿ. ನಗರದ ನೂತನ ಪ್ರವಾಸಿ ಕಟ್ಟಡದ ಕಿಟಕಿಗೆ ಆರೀಫ್​ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಇವರು ಕಳೆದ ನಾಲ್ಕು ದಿನಗಳಿಂದ ಮನೆಗೂ ಹೋಗದೆ, ಸೇವೆಗೂ ಹಾಜರಾಗಿರಲಿಲ್ಲ ಎನ್ನಲಾಗಿದೆ. ಆರೀಫ್​ ಕಾಣೆಯಾಗಿರುವ ಬಗ್ಗೆ ಅವರ ಕುಟುಂಬಸ್ಥರು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರಿಗೆ […]

ವಿಜಯಪುರ ತಹಶೀಲ್ದಾರ್​​ ವಾಹನ ಚಾಲಕ ನೇಣಿಗೆ ಶರಣು
Follow us on

ವಿಜಯಪುರ: ತಹಶೀಲ್ದಾರ್​ ಮೋಹನಕುಮಾರಿಯವರ ಖಾಸಗಿ ವಾಹನ ಚಾಲಕ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 39 ವರ್ಷದ ಆರೀಫ್ ಜುನೇದಿ ಮೃತ ದುರ್ದೈವಿ.

ನಗರದ ನೂತನ ಪ್ರವಾಸಿ ಕಟ್ಟಡದ ಕಿಟಕಿಗೆ ಆರೀಫ್​ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಇವರು ಕಳೆದ ನಾಲ್ಕು ದಿನಗಳಿಂದ ಮನೆಗೂ ಹೋಗದೆ, ಸೇವೆಗೂ ಹಾಜರಾಗಿರಲಿಲ್ಲ ಎನ್ನಲಾಗಿದೆ.

ಆರೀಫ್​ ಕಾಣೆಯಾಗಿರುವ ಬಗ್ಗೆ ಅವರ ಕುಟುಂಬಸ್ಥರು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರಿಗೆ ಇಂದು ಸಾಯಂಕಾಲ 5 ಗಂಟೆ ವೇಳೆಗೆ ಚಾಲಕನ ಶವ ಪತ್ತೆಯಾಗಿದೆ. ಇನ್ನು ಸ್ಥಳಕ್ಕೆ ವಿಜಯಪುರ ತಹಶೀಲ್ದಾರ್ ಮೋಹನಕುಮಾರಿ ಹಾಗೂ DySP ಲಕ್ಷ್ಮೀ ನಾರಾಯಣ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿದ್ದು, ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

Published On - 7:30 pm, Sat, 20 June 20