ವಿಜಯಪುರ ಪಾಲಿಕೆ: ಖಾತೆ ತೆರೆದ ಎಐಎಂಐಎಂ! ಆಧಿಕಾರದ ಹೊಸ್ತಿಲಲ್ಲಿ ಬಿಜೆಪಿ, ಜೆಡಿಎಸ್ 1ಕ್ಕೆ ತೃಪ್ತಿ, ಎಎಪಿಗೆ ಮುಖಭಂಗ -ಫಲಿತಾಂಶ ವಿಶ್ಲೇಷಣೆ

| Updated By: ಸಾಧು ಶ್ರೀನಾಥ್​

Updated on: Oct 31, 2022 | 3:57 PM

Vijaypur City Corporation Election 2022 Results: ಬಿಜೆಪಿ ಟಿಕೆಟ್ ಸಿಗದೇ ಬಂಡಾಯವೆದ್ದವರು ಪಕ್ಷೇತರರಾಗಿ ಕಣಕ್ಕಿಳಿದಿದ್ದು ಅಲ್ಪಮಟ್ಟಿಗೆ ಬಿಜೆಪಿಗೆ ಹಿನ್ನಡೆ ಮಾಡಿದೆ. 35 ಸದಸ್ಯ ಬಲದಲ್ಲಿ ಸದ್ಯ 17 ಸ್ಥಾನಗಳು ಬಿಜೆಪಿ ಪಾಲಾಗಿದ್ದು ನಗರ ಶಾಸಕ, ಓರ್ವ ಪರಿಷತ್ ಸದಸ್ಯ, ಸಂಸದರ ಮತಗಳ ಬೆಂಬಲದೊಂದಿಗೆ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ಬಿಜೆಪಿ ಹಿಡಿಯೋದು ಖಚಿತವೆಂದೇ ಹೇಳಬಹುದು.

ವಿಜಯಪುರ ಪಾಲಿಕೆ: ಖಾತೆ ತೆರೆದ ಎಐಎಂಐಎಂ! ಆಧಿಕಾರದ ಹೊಸ್ತಿಲಲ್ಲಿ ಬಿಜೆಪಿ, ಜೆಡಿಎಸ್ 1ಕ್ಕೆ ತೃಪ್ತಿ, ಎಎಪಿಗೆ ಮುಖಭಂಗ -ಫಲಿತಾಂಶ ವಿಶ್ಲೇಷಣೆ
ವಿಜಯಪುರ ಮಹಾನಗರ ಪಾಲಿಕೆ: ಖಾತೆ ತೆರೆದ ಎಐಎಂಐಎಂ, ಆಧಿಕಾರದ ಹೊಸ್ತಿಲಲ್ಲಿ ಬಿಜೆಪಿ, ಜೆಡಿಎಸ್ 1ಕ್ಕೆ ತೃಪ್ತಿ, ಎಎಪಿಗೆ ಮುಖಭಂಗ -ಫಲಿತಾಂಶ ವಿಶ್ಲೇಷಣೆ
Follow us on

ಕಳೆದ ಶುಕ್ರವಾರ ಅಕ್ಟೋಬರ್ 28 ರಂದು ವಿಜಯಪುರ ಮಹಾನಗರ ಪಾಲಿಕೆ (Vijaypur City Corporation) ಚುನಾವಣಾ ಮತದಾನವಾಗಿತ್ತು. ಇಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಿದೆ. ನಗರದ ದರಬಾರ್ ಹೈಸ್ಕೂಲ್ ಆವರಣದಲ್ಲಿ ಮತ ಎಣಿಕೆ ನಡೆದು ರಿಸಲ್ಟ್ ಹೊರ ಬಿದ್ದಿದೆ. 35 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆದ್ದು ಬೀಗಿದೆ.

ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟರೆ, ಪಕ್ಷೇತರರು ಮೂರನೇ ಸ್ಥಾನದಲ್ಲಿದ್ದಾರೆ. ಇನ್ನು ಪಾಲಿಕೆ ಚುನಾವಣೆಯಲ್ಲಿ ಎಐಎಂಐಎಂ ಎರಡು ಸ್ಥಾನಗಳನ್ನು ಗೆಲ್ಲೋ ಮೂಲಕ ಖಾತೆ ತೆರದು ನಾಲ್ಕನೇ ಸ್ಥಾನ ಪಡೆದಿದೆ. ಜೆಡಿಎಸ್ ಸ್ಥಿತಿ ಕಳಪೆಯಾಗಿದ್ದು ಕೇವಲ ಒಂದು ಸ್ಥಾನಕ್ಕೆ ಮಾತ್ರ ತೃಪ್ತಿ ಪಟ್ಟಿದೆ. ಫಲಿತಾಂಶ ಹಾಗೂ ಸಂಭ್ರಮಾಚರಣೆ ಕುರಿತ ವರದಿ ಇಲ್ಲಿದೆ ನೋಡಿ. (ವಿಶೇಷ ವರದಿ: ಅಶೋಕ ಯಡಳ್ಳಿ, ಟಿವಿ 9, ವಿಜಯಪುರ)

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಎಲ್ಲರ ಲೆಕ್ಕಾಚಾರ ತಲೆ ಕೆಳಗಾಗಿದೆ. ಮತದಾರರ ಯಾರಿಗೂ ಸ್ಪಷ್ಟ ಬಹುಮತ ನೀಡಿಲ್ಲ. 35 ಸದಸ್ಯ ಬಲದ ಪಾಲಿಕೆಯಲ್ಲಿ ಸ್ಪಷ್ಟ ಬಹುಮತಕ್ಕೆ 18 ಸ್ಥಾನಗಳಲ್ಲಾದರೂ ಗೆಲ್ಲಬೇಕು. ಸದ್ಯ ಬಿಜೆಪಿ (BJP) 17 ಸ್ಥಾನಗಳಲ್ಲಿ ಗೆಲ್ಲೋ ಮೂಲಕ ಪಾಲಿಕೆಯ ಆಧಿಕಾರದ ಹೊಸ್ತಿಲಲ್ಲಿದೆ. ಕಾಂಗ್ರೆಸ್ 10 ಸ್ಥಾನಗಳಲ್ಲಿ ಗೆಲುವು ಕಂಡು, ಪಕ್ಷೇತರರು 5 ಸ್ಥಾನಗಳಲ್ಲಿ ವಿಜಯ ಪತಾಕೆ ಹಾರಿಸಿದ್ದಾರೆ. ಎಐಎಂಐಎಂ 2 ಸ್ಥಾನ ಗೆಲ್ಲೋ ಮೂಲಕ ಖಾತೆ ತೆರೆದಿದೆ. ಜೆಡಿಎಸ್ 1 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಶೂನ್ಯ ಸಂಪಾದನೆಯೊಂದಿಗೆ ಎಎಪಿ ಮುಖಭಂಗ ಅನುಭವಿಸಿದೆ (Vijaypur City Corporation Election 2022 Results).

2023 ರ ವಿಧಾನಸಭಾ ಚುನಾವಣೆಯ ಸೆಮಿಫೈನಲ್:

2023 ರ ವಿಧಾನಸಭಾ ಚುನಾವಣೆಯ ಸೆಮಿಫೈನಲ್ ಎಂದೇ ವ್ಯಾಖ್ಯಾನಿಸಲಾಗಿದ್ದ ಪಾಲಿಕೆ ಚುನಾವಣೆ ಫಲಿತಾಂಶ ಬಿಜೆಪಿ ಪಾಲಿಗೆ ಸಿಹಿ ನೀಡಿದ್ದರೆ, ಕಾಂಗ್ರೆಸ್ ಗೆ ಅವಕೋಕನ ಪಾಠ ನೀಡಿದೆ. ಬಹು ತುರುಸಿನಿಂದ ನಡೆದ ಚುನಾವಣೆಯಲ್ಲಿ ಬಿಜೆಪಿ 25 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿತ್ತು. ಬಿಜೆಪಿ ಟಿಕೆಟ್ ಸಿಗದೇ ಬಂಡಾಯವೆದ್ದವರು ಪಕ್ಷೇತರರಾಗಿ ಕಣಕ್ಕಿಳಿದಿದ್ದು ಅಲ್ಪಮಟ್ಟಿಗೆ ಬಿಜೆಪಿಗೆ ಹಿನ್ನಡೆ ಮಾಡಿದೆ.

35 ಸದಸ್ಯ ಬಲದಲ್ಲಿ ಸದ್ಯ 17 ಸ್ಥಾನಗಳು ಬಿಜೆಪಿ ಪಾಲಾಗಿದ್ದು ನಗರ ಶಾಸಕ, ಓರ್ವ ಪರಿಷತ್ ಸದಸ್ಯ, ಸಂಸದರ ಮತಗಳ ಬೆಂಬಲದೊಂದಿಗೆ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ಬಿಜೆಪಿ ಹಿಡಿಯೋದು ಖಚಿತವೆಂದೇ ಹೇಳಬಹುದು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಅಭ್ಯರ್ಥಿಗಳು ಸಂತಸವನ್ನು ಹಂಚಿಕೊಂಡರು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತವಿದೆ. ಮೋದಿ ಅವರ ಜನಪರ ಕಾರ್ಯ ರಾಜ್ಯ ಸರ್ಕಾರದ ಉತ್ತಮ ಕೆಲಸಗಳು, ನಗರ ಶಾಸಕ ಸಂಸದರ ಕಾರ್ಯಗಳು ಗೆಲುವಿಗೆ ಕಾರಣವಾಗಿವೆ. ಪಾಲಿಕೆಯ ಆಡಳಿತ ಹಿಡಿದು ಮತ್ತಷ್ಟು ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತೇವೆಂದು ಹೇಳಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದ್ದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಟ್ವಿಟ್ ಮಾಡಿದ್ದಾರೆ:

ಟ್ವಿಟ್ ಮೂಲಕ ಗೆಲುವನ್ನು ಸಂಭ್ರಮಿಸಿ, ಅಭಿನಂದಿಸಿದ ಸಿಎಂ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 35 ಸ್ಥಾನಗಳಲ್ಲಿ 17 ಸ್ಥಾನಗಳನ್ನು ಗೆಲ್ಲುವ ಮೂಲಕ ನಮ್ಮ ಪಕ್ಷ ಅಭೂತಪೂರ್ವ ಸಾಧನೆಗೆದ್ದಿದ್ದು, ವಿಜಯಪತಾಕೆ ಹಾರಿಸಿದ ಪ್ರತಿಯೊಬ್ಬ ಸದಸ್ಯರಿಗೂ ಹಾರ್ದಿಕ ಅಭಿನಂದನೆಗಳು. ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪಕ್ಷದ ದೇವದುರ್ಲಭ ಕಾರ್ಯಕರ್ತರು ಹಾಗೂ ಪ್ರಮುಖರಿಗೆ ನನ್ನ ಹೃದಯ ಅಂತರಾಳದಿಂದ ಧನ್ಯವಾದಗಳು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನ ಮೆಚ್ಚಿ ಮತ ನೀಡಿದ ಮತದಾರ ಪ್ರಭುಗಳಿಗೆ ನನ್ನ ವಿಶೇಷ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಎಎಪಿ- ಎಐಎಂಎಐಎಂ ಪಕ್ಷಗಳು ಕಾಂಗ್ರೆಸ್ ಗೆಲುವಿಗೆ ತಡೆಗೋಡೆ:

ಚುನಾವಣೆಯಲ್ಲಿ ಕಾಂಗ್ರೆಸ್ ಸಮಾಧಾನಕರ ಪ್ರದರ್ಶನ ನೀಡಿದೆ ಎನ್ನಬಹುದು. ಕಳೆದ ಬಾರಿಯ ಚುನಾವಣೆಯಲ್ಲಿ 10 ಸ್ಥಾನಗಳಲ್ಲಿ ಗೆದ್ದಿದ್ದ ಕೈ ಪಡೆ ಈ ಬಾರಿಯೂ 10 ಸ್ಥಾನಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ. 10 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಎರಡನೇ ಸ್ಥಾನಕ್ಕೆ ಮಾತ್ರ ತೃಪ್ತಿ ಕಾಣಬೇಕಿದೆ. 25 ಸ್ಥಾನಗಳಲ್ಲಿ ಸೋತ ಬಗ್ಗೆಯೂ ಮನನ ಮಾಡಿಕೊಳ್ಳುವ ಅನಿವಾರ್ಯತೆ ಕಾಂಗ್ರೆಸ್ ಪಾಲಿಗೆ ಈ ಫಲಿತಾಂಶ ನೀಡಿದೆ. ಎಎಪಿ ಹಾಗೂ ಎಐಎಂಎಐಎಂ ಪಕ್ಷಗಳು ಕಾಂಗ್ರೆಸ್ ಪಕ್ಷದ ಗೆಲುವಿಗೆ ತಡೆಗೋಡೆಯಾದವು ಎಂದು ರಾಜಕೀಯ ಪರಿಣಿತರ ಅಭಿಪ್ರಾಯವಾಗಿದೆ.

5 ಸ್ಥಾನಗಳಲ್ಲಿ ಪಕ್ಷೇತರರು ಗೆಲ್ಲುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇನ್ನುಳಿದಂತೆ ಎಐಎಂಐಎಂ ನಿರೀಕ್ಷೆಯಂತೆ ಖಾತೆ ತರೆದಿದೆ, ನಾಲ್ಕು ವಾರ್ಡ್ ಗಳಲ್ಲಿ ಸ್ಪರ್ಧೆ ಮಾಡಿದ್ದ ಎಐಎಂಐಎಂ ಎರಡಲ್ಲಿ ಗೆಲ್ಲೋ ಮೂಲಕ ಇತರೆ ಪಕ್ಷಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ. ಇನ್ನು ಕೇವಲ 1 ಸ್ಥಾನಕ್ಕೆ ಜೆಡಿಎಸ್ ತೃಪ್ತಿ ಪಟ್ಟುಕೊಳ್ಳುವಂತಾಗಿದೆ. ಜನರಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿದ್ದ ಎಎಪಿ ಪಕ್ಷ ಶೂನ್ಯ ಸಂಪಾದನೆಯೊಂದಿಗೆ ತೀವ್ರ ಮುಖಭಂಗ ಅನುಭವಿಸಿದೆ. ಎಸ್ ಡಿ ಪಿ ಐ, ಜನತಾ ದಳ, ಕೆ ಆರ್ ಎಸ್, ಬಿ ಎಸ್ಪಿ ಪಕ್ಷಗಳಿಗೂ ಮತದಾರ ಪ್ರಭುಗಳು ಮಣೆ ಹಾಕಿಲ್ಲ.

ಫಲಿತಾಂಶ ಪ್ರಕಟವಾಗುತ್ತದ್ದಂತೆ ಬಿಜೆಪಿ, ಕಾಂಗ್ರೆಸ್, ಎಐಎಂಐಎಂ, ಪಕ್ಷೇತರರು ಹಾಗೂ ಜೆಡಿಎಸ್ ನ ವಿಜೇತ ಅಭ್ಯರ್ಥಿಗಳ ಹಾಗೂ ಬೆಂಬಲಿಗರ ಕಾರ್ಯಕರ್ತರ ಸಂಭ್ರಮ ಜೋರಾಗಿತ್ತು. ಪರಸ್ಪರ ಬಣ್ಣಗಳನ್ನು ಎರಚಿ, ವಿಜೇತ ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿದರು. ಕುಣಿದು ಕುಪ್ಪಳಿಸಿ ವಿಜಯೋತ್ಸವ ಆಚರಣೆ ಮಾಡಿದರು. ಮತ ಎಣಿಕಾ ಕೇಂದ್ರದ ಬಳಿ ನೆರದ ಜನರನ್ನು ಬೆಂಬಗಲಿಗರನ್ನು ವಿವಿಧ ಪಕ್ಷದ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಹರ ಸಾಹಸ ಪಟ್ಟರು.

ಇನ್ನು ಮುಂಜಾಗೃತಾ ಕ್ರಮವಾಗಿ ಸೋಲು ಗೆಲುವಿನ ವಿಚಾರದಲ್ಲಿ, ಸಂಭ್ರಮಾಚರಣೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಗರದ ಆಯಕಟ್ಟಿನ, ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರ ಭದ್ರತೆ ಹಾಕಲಾಗಿದೆ. ಒಟ್ಟಾರೆ 3 ವರ್ಷ 2 ತಿಂಗಳು ಕಾಲ ಜನಪ್ರತಿನಿಧಿಗಳೇ ಇಲ್ಲದ ಪಾಲಿಕೆಗೆ ಸದಸ್ಯರು ಆಯ್ಕೆಯಾದಂತಾಗಿದೆ. ಮುಂದಿನ ದಿನಗಳಲ್ಲಿ ಮೇಯರ್ ಹಾಗೂ ಉಪಮೇಯರ್ ನೇಮಕ ಅಥವಾ ಚುನಾವಣೆಯ ಕುಸ್ತಿ ನಡೆಯಲಿದೆ.

ಕೇವಲ 55.25 ಪರ್ಸೆಂಟ್ ಮತದಾನವಾಗಿತ್ತು:

ಕಳೆದ 2019 ರಲ್ಲೇ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ನಡೆಯಬೇಕಿತ್ತು. ಹಲವಾರು ತಾಂತ್ರಿಕ ಕಾರಣಗಳು ಹಾಗೂ ನ್ಯಾಯಾಲಯದಲ್ಲಿ ಪ್ರಕರಣಗಳಿದ್ದ ಕಾರಣ ಚುನಾವಣೆ ನಡೆದಿರಲಿಲ್ಲ. ಅಂತಿಮವಾಗಿ ಅಕ್ಟೋಬರ್ 28 ರಂದು ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ನಡೆದಿತ್ತು. 35 ಸದಸ್ಯ ಬಲದ ಪಾಲಿಕೆಗೆ ನಡೆದ ಮತದಾನದಲ್ಲಿ ಕೇವಲ 55.25 ಪರ್ಸೆಂಟ್ ಮತದಾನವಾಗಿತ್ತು. 44.75 ರಷ್ಟು ಮತದಾರರು ಮತದಾನ ಮಾಡಿರಲಿಲ್ಲಾ. ಮತದಾರರ ಲಿಸ್ಟ್ ನಲ್ಲಿ ಹೆಸರು ಡಿಲೀಟ್ ಆಗಿದ್ದು ಸೇರಿದಂತೆ ಇತರೆ ಕಾರಣಗಳಿಂದ ಮತದಾನ ಗಣನೀಯ ಪ್ರಕಾಣದಲ್ಲಿ ಕಡಿಮೆಯಾಗಿತ್ತು.

ಒಟ್ಟು 2,87,927 ಮತದಾರರ ಪೈಕಿ 1,59,070 ಮತದಾರರು ಮಾತ್ರ ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದರು. ಒಟ್ಟು 1,43,329 ಪುರುಷ ಮತದಾರರ ಪೈಕಿ 82,046 ಪುರುಷರರು, ಒಟ್ಟು 1,44,498 ಮಹಿಳಾ ಮತದಾರರಲ್ಲಿ ರು 77,025 ಮಹಿಳೆಯರು ಮಾತ್ರ ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದರು. ಇತರೆ 100 ಮತದಾರರ ಪೈಕಿ ಯಾರೋಬ್ಬರೂ ಮತದಾನ ಮಾಡಿರಲಿಲ್ಲ. ಒಟ್ಟು 174 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು.

ಈ ಪೈಕಿ ಕಾಂಗ್ರೆಸ್ 35, ಬಿಜೆಪಿ 33, ಜೆಡಿಎಸ್ 20, ಎಎಪಿ 15, ಎಐಎಂಐಎಂ 4, ಕೆ ಆರ್ ಎಸ್ 3, ಜನತಾ ಪಾರ್ಟಿ 3, ಎಸ್ ಡಿ ಪಿಐ 2, ಬಿಎಸ್ಪಿ 1 ಹಾಗೂ 58 ಪಕ್ಷೇತರರು ಇದ್ದರು. ಇಂದು ಫಲಿತಾಂಶ ಪ್ರಕಟವಾಗಿದ್ದು 17 ರಲ್ಲಿ ಬಿಜೆಪಿ, 10 ರಲ್ಲಿ ಕಾಂಗ್ರೆಸ್, 5 ರಲ್ಲಿ ಪಕ್ಷೇತರರು, 2 ರಲ್ಲಿ ಎಐಎಂಐಎಂ ಹಾಗೂ 1 ರಲ್ಲಿ ಜೆಡಿಎಸ್ ಗೆಲವು ಸಾಧಿಸಿದೆ. ಒಟ್ಟಾರೆ 139 ಅಭ್ಯರ್ಥಿಗಳು ಸೋಲುಂಡಿದ್ದಾರೆ. ಈ ಪೈಕಿ ವಾರ್ಡ್ ಪ್ರಕಾರ ಮೊದಲ ಸ್ಥಾನ ಯಾವ ಪಕ್ಷದ ಅಭ್ಯರ್ಥಿ ಗೆಲುವು ಕಂಡಿದ್ದಾರೆ, ಪ್ರತಿಸ್ಪರ್ಧಿ ಯಾರು ಎಂಬುದು ಮಾಹಿತಿ ಇಲ್ಲಿದೆ:

ವಾರ್ಡ್ ನಂಬರ್ 1 :
ವಿಜೇತ ಅಭ್ಯರ್ಥಿ ಹೆಸರು : ಆಸೀಫ್ ಇಕ್ಬಾಲ್ ರಾಜೇಸಾಬ್ ಶಾನವಾಲೆ ( ಕಾಂಗ್ರೆಸ್ ಪಕ್ಷ ) ಪಡೆದ ಮತಗಳು : 2469
ಸಮೀಪದ ಪರಾಜಿತ ಅಭ್ಯರ್ಥಿ : ಪ್ರಭುದೇವ ರಾಗಪ್ಪಾ ಕೆಂಗಾರ (ಬಿಜೆಪಿ ) ಪಡೆದ ಮತಗಳು : 1513
ಗೆಲುವಿನ ಅಂತರ : 956

ವಾರ್ಡ್ ನಂಬರ್ 2 :
ವಿಜೇತ ಅಭ್ಯರ್ಥಿ ಹೆಸರು : ಅಲ್ತಾಫ್ ಹಮೀದಸಾಬ್ ಇಟಗಿ ( ಪಕ್ಷೇತರ ) ಪಡೆದ ಮತಗಳು : 2153
ಸಮೀಪದ ಪರಾಜಿತ ಅಭ್ಯರ್ಥಿ : ಶಾಂತಪ್ಪಾ ಯಲ್ಲಪ್ಪ ಯಕ್ಕುಂಡಿ ( ಕಾಂಗ್ರೆಸ್ ) ಪಡೆದ ಮತಗಳು : 1810
ಗೆಲುವಿನ ಅಂತರ : 343

ವಾರ್ಡ್ ನಂಬರ್ 3 :
ವಿಜೇತ ಅಭ್ಯರ್ಥಿ ಹೆಸರು : ಸುನೀತಾ ಮಹೇಶ ಒಡೆಯರ ( ಬಿಜೆಪಿ ) ಪಡೆದ ಮತಗಳು : 1802
ಸಮೀಪದ ಪರಾಜಿತ ಅಭ್ಯರ್ಥಿ : ಸುವರ್ಣಾ ವಿಠಲ ಭಜಂತ್ರಿ ( ಜೆಡಿಎಸ್ ) ಪಡೆದ ಮತಗಳು : 1672
ಗೆಲುವಿನ ಅಂತರ : 130

ವಾರ್ಡ್ ನಂಬರ್ 4 :
ವಿಜೇತ ಅಭ್ಯರ್ಥಿ ಹೆಸರು : ರಾಜೂ ಚವ್ಹಾಣ್ ( ಜೆಡಿಎಸ್ ) ಪಡೆದ ಮತಗಳು : 2114
ಸಮೀಪದ ಪರಾಜಿತ ಅಭ್ಯರ್ಥಿ : ರವಿಕುಮಾರ ಚವ್ಹಾಣ ( ಪಕ್ಷೇತರ ) ಪಡೆದ ಮತಗಳು : 1380
ಗೆಲುವಿನ ಅಂತರ : 734

ವಾರ್ಡ್ ನಂಬರ್ 5 :
ವಿಜೇತ ಅಭ್ಯರ್ಥಿ ಹೆಸರು : ಕರಡಿ ಮಡಿವಾಳಪ್ಪ ಸಿದ್ರಾಮಪ್ಪ ( ಬಿಜೆಪಿ ) ಪಡೆದ ಮತಗಳು : 2108
ಸಮೀಪದ ಪರಾಜಿತ ಅಭ್ಯರ್ಥಿ : ವೆಂಕಟೇಶ ವಾಲೀಕಾರ ( ಪಕ್ಷೇತರ ) ಪಡೆದ ಮತಗಳು : 641
ಗೆಲುವಿನ ಅಂತರ : 1467

ವಾರ್ಡ್ ನಂಬರ್ 6 :
ವಿಜೇತ ಅಭ್ಯರ್ಥಿ ಹೆಸರು : ಮಾಳುಗೌಡ ಪಾಟೀಲ್ ( ಬಿಜೆಪಿ ) ಪಡೆದ ಮತಗಳು : 2193
ಸಮೀಪದ ಪರಾಜಿತ ಅಭ್ಯರ್ಥಿ : ಆನಂದ ಜಾಧವ ( ಕಾಂಗ್ರೆಸ್ ) ಪಡೆದ ಮತಗಳು : 826
ಗೆಲುವಿನ ಅಂತರ : 1367

ವಾರ್ಡ್ ನಂಬರ್ 7 :
ವಿಜೇತ ಅಭ್ಯರ್ಥಿ ಹೆಸರು : ರಾಹುಲ್ ರಮೇಶ ಜಾಧವ್ ( ಬಿಜೆಪಿ ) ಪಡೆದ ಮತಗಳು : 2685
ಸಮೀಪದ ಪರಾಜಿತ ಅಭ್ಯರ್ಥಿ : ಹಾಸಿಂಪೀರ್ ಜಾನ್ವೇಕರ ರಾಜೇಸಾಬ್ ( ಜೆಡಿಎಸ್ ) ಪಡೆದ ಮತಗಳು : 1390
ಗೆಲುವಿನ ಅಂತರ : 1268

ವಾರ್ಡ್ ನಂಬರ್ 8 :
ವಿಜೇತ ಅಭ್ಯರ್ಥಿ ಹೆಸರು : ಅಶೋಕ ನಿಂಗಪ್ಪಾ ನ್ಯಾಮಗೊಂಡ ( ಪಕ್ಷೇತರ ) ಪಡೆದ ಮತಗಳು : 2612
ಸಮೀಪದ ಪರಾಜಿತ ಅಭ್ಯರ್ಥಿ : ರಜಪೂತ್ ಪರಶುರಾಮ ವಿಠಲಸಿಂಗ್ ( ಬಿಜೆಪಿ ) ಪಡೆದ ಮತಗಳು : 2175
ಗೆಲುವಿನ ಅಂತರ : 437

ವಾರ್ಡ್ ನಂಬರ್ 9 :
ವಿಜೇತ ಅಭ್ಯರ್ಥಿ ಹೆಸರು : ಮಗೀಮಠ ರಾಜಶೇಖರ ಮಹಲಿಂಗಯ್ಯಾ ( ಬಿಜೆಪಿ ) ಪಡೆದ ಮತಗಳು : 1344
ಸಮೀಪದ ಪರಾಜಿತ ಅಭ್ಯರ್ಥಿ : ಪವಾರ ಸಂತೋಷ ಮಹಾದೇವ ( ಕಾಂಗ್ರೆಸ್ ) ಪಡೆದ ಮತಗಳು : 860
ಗೆಲುವಿನ ಅಂತರ : 484

ವಾರ್ಡ್ ನಂಬರ್ 10 :
ವಿಜೇತ ಅಭ್ಯರ್ಥಿ ಹೆಸರು : ಕುಮಶಿ ಸುನಂದಾ ಸಮಗೊಂಡಪ್ಪಾ ( ಬಿಜೆಪಿ ) ಪಡೆದ ಮತಗಳು : 1463
ಸಮೀಪದ ಪರಾಜಿತ ಅಭ್ಯರ್ಥಿ : ನಿಖಿತಾ ಮಲ್ಲಿಕಾರ್ಜುನ ಕೊಟ್ಟಲಗಿ ( ಪಕ್ಷೇತರ ) ಪಡೆದ ಮತಗಳು : 1182
ಗೆಲುವಿನ ಅಂತರ : 281

ವಾರ್ಡ್ ನಂಬರ್ 11 :
ವಿಜೇತ ಅಭ್ಯರ್ಥಿ ಹೆಸರು : ವಿಠಲ ಹುಲೆಪ್ಪಾ ಹೊಸಪೇಟ ( ಬಿಜೆಪಿ ) ಪಡೆದ ಮತಗಳು : 2198
ಸಮೀಪದ ಪರಾಜಿತ ಅಭ್ಯರ್ಥಿ : ಶಬ್ಬೀರ ಸಿ ಪಾಟೀಲ್ ( ಕಾಂಗ್ರೆಸ್ ) ಪಡೆದ ಮತಗಳು : 1200
ಗೆಲುವಿನ ಅಂತರ : 998

ವಾರ್ಡ್ ನಂಬರ್ 12 :
ವಿಜೇತ ಅಭ್ಯರ್ಥಿ ಹೆಸರು : ರಶ್ಮಿ ಬಸವರಾಜ ಕೋರಿ ( ಬಿಜೆಪಿ ) ಪಡೆದ ಮತಗಳು : 2113
ಸಮೀಪದ ಪರಾಜಿತ ಅಭ್ಯರ್ಥಿ : ಚವ್ಹಾಣ್ ಸಂಗೀತಾ ಪ್ರಕಾಶ ( ಜೆಡಿಎಸ್ ) ಪಡೆದ ಮತಗಳು : 829
ಗೆಲುವಿನ ಅಂತರ : 1284

ವಾರ್ಡ್ ನಂಬರ್ 13:
ವಿಜೇತ ಅಭ್ಯರ್ಥಿ ಹೆಸರು : ದೇವಗಿರಿ ರಾಧಾಬಾಯಿ ಮೋಹನ ( ಬಿಜೆಪಿ ) ಪಡೆದ ಮತಗಳು : 2109
ಸಮೀಪದ ಪರಾಜಿತ ಅಭ್ಯರ್ಥಿ : ಗೊಬ್ಬೂರ ಬೋರಮ್ಮಾ ಬಾಬು ( ಪಕ್ಷೇತರ ) ಪಡೆದ ಮತಗಳು : 1197
ಗೆಲುವಿನ ಅಂತರ : 912

ವಾರ್ಡ್ ನಂಬರ್ 14 :
ವಿಜೇತ ಅಭ್ಯರ್ಥಿ ಹೆಸರು : ಗೋಸಾಯಿ ಜವಾಹನ ಹನಮಂತ ( ಬಿಜೆಪಿ ) ಪಡೆದ ಮತಗಳು : 2601
ಸಮೀಪದ ಪರಾಜಿತ ಅಭ್ಯರ್ಥಿ : ಚಂಚಲಕರ ಮಿಲಿಂದ ಲಾಯಪ್ಪಾ ( ಕಾಂಗ್ರೆಸ್ ) ಪಡೆದ ಮತಗಳು : 2141
ಗೆಲುವಿನ ಅಂತರ : 460

ವಾರ್ಡ್ ನಂಬರ್ 15 :
ವಿಜೇತ ಅಭ್ಯರ್ಥಿ ಹೆಸರು : ಸ್ವಪ್ನಾ ಸುರೇಶ ಕಣಮುಚನಾಳ ( ಬಿಜೆಪಿ ) ಪಡೆದ ಮತಗಳು : 1230
ಸಮೀಪದ ಪರಾಜಿತ ಅಭ್ಯರ್ಥಿ : ಆಲಮೇಲ ಸಾಯಿರಾಬಾನು ರಫೀಕ್ ( ಜೆಡಿಎಸ್ ) ಪಡೆದ ಮತಗಳು : 344
ಗೆಲುವಿನ ಅಂತರ : 886

ವಾರ್ಡ್ ನಂಬರ್ 16 :
ವಿಜೇತ ಅಭ್ಯರ್ಥಿ ಹೆಸರು : ಅಂಜುರಮಾ ಶಪ್ಪು ಮನಗೂಳಿ ( ಕಾಂಗ್ರೆಸ್ ) ಪಡೆದ ಮತಗಳು : 2376
ಸಮೀಪದ ಪರಾಜಿತ ಅಭ್ಯರ್ಥಿ : ರಮಾಬಾಯಿ ಕೃಷ್ಣಾ ರಜಪೂತ ( ಬಿಜೆಪಿ ) ಪಡೆದ ಮತಗಳು : 1295
ಗೆಲುವಿನ ಅಂತರ : 1081

ವಾರ್ಡ್ ನಂಬರ್ 17:
ವಿಜೇತ ಅಭ್ಯರ್ಥಿ ಹೆಸರು : ಸುಮಿತ್ರಾ ರಾಜೂ ಜಾಧವ ( ಪಕ್ಷೇತರ ) ಪಡೆದ ಮತಗಳು : 2061
ಸಮೀಪದ ಪರಾಜಿತ ಅಭ್ಯರ್ಥಿ : ಶ್ರೀದೇವಿ ಲೋಗಾಂವಿ ( ಬಿಜೆಪಿ ) ಪಡೆದ ಮತಗಳು : 960
ಗೆಲುವಿನ ಅಂತರ : 1101

ವಾರ್ಡ್ ನಂಬರ್ 18 :
ವಿಜೇತ ಅಭ್ಯರ್ಥಿ ಹೆಸರು : ದಿನೇಶ ಎಸ್ ( ಕಾಂಗ್ರೆಸ್ ) ಪಡೆದ ಮತಗಳು : 2143
ಸಮೀಪದ ಪರಾಜಿತ ಅಭ್ಯರ್ಥಿ : ರವೀಂದ್ರ ಭಗವಂತಪ್ಪನವರ ( ಪಕ್ಷೇತರ ) ಪಡೆದ ಮತಗಳು : 987
ಗೆಲುವಿನ ಅಂತರ : 1156

ವಾರ್ಡ್ ನಂಬರ್ 19 :
ವಿಜೇತ ಅಭ್ಯರ್ಥಿ ಹೆಸರು : ನಿಶಾಂತ ಹೈದರಲಿ ನದಾಫ್ ( ಪಕ್ಷೇತರ ) ಪಡೆದ ಮತಗಳು : 2772
ಸಮೀಪದ ಪರಾಜಿತ ಅಭ್ಯರ್ಥಿ : ಆಯಿಶಾ ಶೇಖ್ ಅಹ್ಮದ್ ಮೋದಿ ( ಕಾಂಗ್ರೆಸ್ ) ಪಡೆದ ಮತಗಳು : 1028
ಗೆಲುವಿನ ಅಂತರ : 1784

ವಾರ್ಡ್ ನಂಬರ್ 20 :
ವಿಜೇತ ಅಭ್ಯರ್ಥಿ ಹೆಸರು : ಶಾಹೀನ್ ಬಾಂಗಿ ( ಕಾಂಗ್ರೆಸ್ ) ಪಡೆದ ಮತಗಳು : 1730
ಸಮೀಪದ ಪರಾಜಿತ ಅಭ್ಯರ್ಥಿ : ಯಾಸ್ಮೀಮ್ ಮಲ್ಲಿಕಸಾಬ್ ಮುಲ್ಲಾ ( ಎಎಪಿ ) ಪಡೆದ ಮತಗಳು : 1699
ಗೆಲುವಿನ ಅಂತರ : 51

ವಾರ್ಡ್ ನಂಬರ್ 21:
ವಿಜೇತ ಅಭ್ಯರ್ಥಿ ಹೆಸರು : ಮಲ್ಲಿಕಾರ್ಜುನ ಗಡಗಿ ( ಬಿಜೆಪಿ ) ಪಡೆದ ಮತಗಳು : 3446
ಸಮೀಪದ ಪರಾಜಿತ ಅಭ್ಯರ್ಥಿ : ಕಲಾದಗಿ ಸಲೀಮ್ ( ಕಾಂಗ್ರೆಸ್ ) ಪಡೆದ ಮತಗಳು : 1500
ಗೆಲುವಿನ ಅಂತರ : 1946

ವಾರ್ಡ್ ನಂಬರ್ 22 :
ವಿಜೇತ ಅಭ್ಯರ್ಥಿ ಹೆಸರು : ಪ್ರೇಮಾನಂದ ಬಿರಾದಾರ್ ( ಬಿಜೆಪಿ ) ಪಡೆದ ಮತಗಳು : 3224
ಸಮೀಪದ ಪರಾಜಿತ ಅಭ್ಯರ್ಥಿ : ರವಿಕಾಂತ ಬಗಲಿ ( ಪಕ್ಷೇತರ ) ಪಡೆದ ಮತಗಳು : 1774
ಗೆಲುವಿನ ಅಂತರ : 1450

ವಾರ್ಡ್ ನಂಬರ್ 23 :
ವಿಜೇತ ಅಭ್ಯರ್ಥಿ ಹೆಸರು : ಮಹಮ್ಮದ ಇರ್ಫಾನ್ ನಾಡೇವಾಲ ( ಕಾಂಗ್ರೆಸ್ ) ಪಡೆದ ಮತಗಳು : 2088
ಸಮೀಪದ ಪರಾಜಿತ ಅಭ್ಯರ್ಥಿ : ಗೂಳಪ್ಪ ಶೆಟಗಾರ ( ಬಿಜೆಪಿ ) ಪಡೆದ ಮತಗಳು : 2048
ಗೆಲುವಿನ ಅಂತರ : 40

ವಾರ್ಡ್ ನಂಬರ್ 24 :
ವಿಜೇತ ಅಭ್ಯರ್ಥಿ ಹೆಸರು : ಕಾಣೆ ವಿಮಲಾ ರಫೀಕ್ ಅಹ್ಮದ್ ( ಪಕ್ಷೇತರ ) ಪಡೆದ ಮತಗಳು : 2278
ಸಮೀಪದ ಪರಾಜಿತ ಅಭ್ಯರ್ಥಿ : ಹಂಜಿ ರಾಜೇಶ್ವರಿ ಸಿದ್ದಣ್ಣಾ ( ಕಾಂಗ್ರೆಸ್ ) ಪಡೆದ ಮತಗಳು : 1301
ಗೆಲುವಿನ ಅಂತರ : 977

ವಾರ್ಡ್ ನಂಬರ್ 25 :
ವಿಜೇತ ಅಭ್ಯರ್ಥಿ ಹೆಸರು : ಸುಫಿಯಾ ಅಬ್ದುಲ್ ರೆಹೆಮಾನ್ ವಾಟಿ ( ಎಐಎಂಐಎಂ ) ಪಡೆದ ಮತಗಳು : 1610
ಸಮೀಪದ ಪರಾಜಿತ ಅಭ್ಯರ್ಥಿ : ಗಜಲಾ ಸದ್ದಾಂಹುಸೇನ್ ಇನಾಮದಾರ್ ( ಕಾಂಗ್ರೆಸ್ ) ಪಡೆದ ಮತಗಳು : 973
ಗೆಲುವಿನ ಅಂತರ : 637

ವಾರ್ಡ್ ನಂಬರ್ 26 :
ವಿಜೇತ ಅಭ್ಯರ್ಥಿ ಹೆಸರು : ಕಿರಣ ಪಾಟೀಲ್ ( ಬಿಜೆಪಿ ) ಪಡೆದ ಮತಗಳು : 1792
ಸಮೀಪದ ಪರಾಜಿತ ಅಭ್ಯರ್ಥಿ : ಸಮೀರ್ ಮುಶ್ರೀಫ್ ( ಕಾಂಗ್ರೆಸ್ ) ಪಡೆದ ಮತಗಳು : 652
ಗೆಲುವಿನ ಅಂತರ : 1140

ವಾರ್ಡ್ ನಂಬರ್ 27 :
ವಿಜೇತ ಅಭ್ಯರ್ಥಿ ಹೆಸರು : ಶಹಿಸ್ತಾ ಖುರೇಶಿ ( ಕಾಂಗ್ರೆಸ್ ) ಪಡೆದ ಮತಗಳು : 1672
ಸಮೀಪದ ಪರಾಜಿತ ಅಭ್ಯರ್ಥಿ : ಮೆಹರುನ್ನೀಸಾ ಸಂಗಮ ( ಪಕ್ಷೇತರ ) ಪಡೆದ ಮತಗಳು : 896
ಗೆಲುವಿನ ಅಂತರ : 776

ವಾರ್ಡ್ ನಂಬರ್ 28 :
ವಿಜೇತ ಅಭ್ಯರ್ಥಿ ಹೆಸರು : ರಿಜ್ವಾನಬಾನು ಇನಾಮದಾರ್ ( ಎಐಎಂಐಎಂ ) ಪಡೆದ ಮತಗಳು : 1560
ಸಮೀಪದ ಪರಾಜಿತ ಅಭ್ಯರ್ಥಿ : ಸಬೀನಾ ಬೀಳಗಿ ( ಕಾಂಗ್ರೆಸ್ ) ಪಡೆದ ಮತಗಳು : 1542
ಗೆಲುವಿನ ಅಂತರ : 18

ವಾರ್ಡ್ ನಂಬರ್ 29 :
ವಿಜೇತ ಅಭ್ಯರ್ಥಿ ಹೆಸರು : ವಿಜಯಕುಮಾರ ಬಿರಾದಾರ್ ( ಬಿಜೆಪಿ ) ಪಡೆದ ಮತಗಳು : 1625
ಸಮೀಪದ ಪರಾಜಿತ ಅಭ್ಯರ್ಥಿ : ಧನರಾಜ ಅಡಿವೆಪ್ಪಾ ( ಕಾಂಗ್ರೆಸ್ ) ಪಡೆದ ಮತಗಳು : 786
ಗೆಲುವಿನ ಅಂತರ : 839

ವಾರ್ಡ್ ನಂಬರ್ 30 :
ವಿಜೇತ ಅಭ್ಯರ್ಥಿ ಹೆಸರು : ಅಪ್ಪು ಶಿವಪ್ಪ ಪೂಜಾರಿ ( ಕಾಂಗ್ರೆಸ್ ) ಪಡೆದ ಮತಗಳು : 2886
ಸಮೀಪದ ಪರಾಜಿತ ಅಭ್ಯರ್ಥಿ : ವಿಜಯಕುಮಾರ ಗುರುಪಾದಪ್ಪಾ ಗಚ್ಚಿನಕಟ್ಟಿ ( ಬಿಜೆಪಿ ) ಪಡೆದ ಮತಗಳು : 1371
ಗೆಲುವಿನ ಅಂತರ : 1515

ವಾರ್ಡ್ ನಂಬರ್ 31:
ವಿಜೇತ ಅಭ್ಯರ್ಥಿ ಹೆಸರು : ಸಿದರಾ ಬಂದೇನವಾಜ್ ಬೀಳಗಿ ( ಕಾಂಗ್ರೆಸ್ ) ಪಡೆದ ಮತಗಳು : 1737
ಸಮೀಪದ ಪರಾಜಿತ ಅಭ್ಯರ್ಥಿ : ರಾಧಾ ರಾಜೀವ್ ತಾವರಗೇರಿ ( ಬಿಜೆಪಿ ) ಪಡೆದ ಮತಗಳು : 1441
ಗೆಲುವಿನ ಅಂತರ : 296

ವಾರ್ಡ್ ನಂಬರ್ 32 :
ವಿಜೇತ ಅಭ್ಯರ್ಥಿ ಹೆಸರು : ಶಿವರುದ್ರ ಶಿವಪುತ್ರ ಬಾಗಲಕೋಟ ( ಬಿಜೆಪಿ ) ಪಡೆದ ಮತಗಳು : 2536
ಸಮೀಪದ ಪರಾಜಿತ ಅಭ್ಯರ್ಥಿ : ಹೆರಳಗಿ ಸಂಗಪ್ಪಾ ಬಸವರಾಜ ( ಪಕ್ಷೇತರ ) ಪಡೆದ ಮತಗಳು : 1110
ಗೆಲುವಿನ ಅಂತರ : 1426

ವಾರ್ಡ್ ನಂಬರ್ 33 :
ವಿಜೇತ ಅಭ್ಯರ್ಥಿ ಹೆಸರು : ಆರತಿ ವಿಠಲ್ ಶಹಾಪೂರ ( ಕಾಂಗ್ರೆಸ್ ) ಪಡೆದ ಮತಗಳು : 1668
ಸಮೀಪದ ಪರಾಜಿತ ಅಭ್ಯರ್ಥಿ : ಪ್ರಿಯಾ ವಿಠಲ ನಡುವಿಕನೇರಿ ( ಬಿಜೆಪಿ ) ಪಡೆದ ಮತಗಳು : 1314
ಗೆಲುವಿನ ಅಂತರ : 354

ವಾರ್ಡ್ ನಂಬರ್ 34 :
ವಿಜೇತ ಅಭ್ಯರ್ಥಿ ಹೆಸರು : ಮಹೆಜಬೀನ್ ಅಬ್ದುಲ್ ರಜಾಕ್ ಹೊರ್ತಿ ( ಕಾಂಗ್ರೆಸ್ ) ಪಡೆದ ಮತಗಳು : 2361
ಸಮೀಪದ ಪರಾಜಿತ ಅಭ್ಯರ್ಥಿ : ರೇಣುಕಾ ಜಟ್ಟೆಪ್ಪಾ ಗನ್ನಾಪುರ ( ಬಿಜೆಪಿ ) ಪಡೆದ ಮತಗಳು : 676
ಗೆಲುವಿನ ಅಂತರ : 1685

ವಾರ್ಡ್ ನಂಬರ್ 35 :
ವಿಜೇತ ಅಭ್ಯರ್ಥಿ ಹೆಸರು : ರಾಜಶೇಖರ ಶಂಕ್ರಪ್ಪ ಕುರಿಯವರ ( ಬಿಜೆಪಿ ) ಪಡೆದ ಮತಗಳು : 1768
ಸಮೀಪದ ಪರಾಜಿತ ಅಭ್ಯರ್ಥಿ : ರಾಜೂ ಬಿರಾದಾರ ( ಪಕ್ಷೇತರ ) ಪಡೆದ ಮತಗಳು : 1576
ಗೆಲುವಿನ ಅಂತರ : 192

Published On - 3:54 pm, Mon, 31 October 22