ಮಹಿಳೆಗಾಗಿ ಯವಕನ ಮೇಲೆ ಬಡಿಗೆಯಿಂದ ಹಲ್ಲೆ? ಇಬ್ಬರು ಹಲ್ಲೆಕೋರರು-ಮಹಿಳೆ ಪರಾರಿ..
ವಿಜಯಪುರ ಜಿಲ್ಲೆಯ ಬಸವೇಶ್ವರ ವೃತ್ತದ ಬಳಿ ತಡರಾತ್ರಿ ಮೂವರ ನಡುವೆ ಮಾರಾಮಾರಿ ನಡೆದಿದೆ. ಕುಡಿದ ಮತ್ತಿನಲ್ಲಿ ಗಲಾಟೆಯಾಗಿರೋ ಸಾಧ್ಯತೆ ಹೆಚ್ಚಿದ್ದು, ಘಟನೆಯ ವೇಳೆ ಓರ್ವ ಮಹಿಳೆಯೂ ಭಾಗಿಯಾಗಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.
ವಿಜಯಪುರ: ಮೂವರು ಯುವಕರ ಮಧ್ಯೆ ಗಲಾಟೆ ನಡೆದು ಓರ್ವನ ಮೇಲೆ ಇಬ್ಬರು ಯುವಕರು ಹಲ್ಲೆ ಮಾಡಿದ ಘಟನೆ ತಡರಾತ್ರಿ ನಗರದ ಬಸವೇಶ್ವರ ವೃತ್ತದ ಬಳಿ ನಡೆದಿದೆ.
ಕುಡಿದ ಮತ್ತಿನಲ್ಲಿ ಗಲಾಟೆಯಾಗಿರೋ ಸಾಧ್ಯತೆ ಹೆಚ್ಚಿದ್ದು, ಘಟನೆಯ ವೇಳೆ ಓರ್ವ ಮಹಿಳೆಯೂ ಭಾಗಿಯಾಗಿದ್ದಾರೆಂಬ ಮಾಹಿತಿ ತಿಳಿದುಬಂದಿದೆ. ಅಲ್ಲದೇ ಮಹಿಳೆಯ ಜೊತೆಗೆ ಯುವಕ ಅಸಭ್ಯವಾಗಿ ವರ್ತಿಸಿದ್ದ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೂ ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಗಲಾಟೆ ಬಳಿಕ ಯುವಕರು ಹಾಗೂ ಮಹಿಳೆ ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳೀಯ ವ್ಯಕ್ತಿ ಗಲಾಟೆಯ ವಿಡಿಯೋವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಗಲಾಟೆ ಮಾಡಿದವರ ಹೆಸರು, ವಿಳಾಸ ಇನ್ನೂ ಪತ್ತೆಯಾಗಿಲ್ಲ.
ಲಾಂಗು, ಮಚ್ಚಿನಿಂದ ಕೊಚ್ಚಿ ಕೊಚ್ಚಿ ಯುವಕನ ಬರ್ಬರ ಕೊಲೆ.. ಹಂತಕರ ಸುಳಿವು ಬಿಚ್ಚಿಟ್ಟ ಮೂರನೇ ಕಣ್ಣು!