ಬಿಜೆಪಿಯ ಶಾಲು ಹೊದೆಸಿ ಸನ್ಮಾನಿಸುವಾಗ ಪರಸ್ಪರ ಜೋಕ್ ಕಟ್ ಮಾಡಿ ನಕ್ಕ ನಿಖಿಲ್-ವಿಜಯೇಂದ್ರ

ಬಿಜೆಪಿಯ ಶಾಲು ಹೊದೆಸಿ ಸನ್ಮಾನಿಸುವಾಗ ಪರಸ್ಪರ ಜೋಕ್ ಕಟ್ ಮಾಡಿ ನಕ್ಕ ನಿಖಿಲ್-ವಿಜಯೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 26, 2024 | 7:27 PM

ಬಿಜೆಪಿ ಕಾರ್ಯಕರ್ತರು ವೇದಿಕೆ ಮೇಲೆ ಆಸೀನರಾಗಿದ್ದ ಗಣ್ಯರಿಗೆ ಪಕ್ಷದ ಶಾಲುಗಳನ್ನು ಹೊದಿಸಿ ಸನ್ಮಾನಿಸುವಾಗ ವಿಜಯೇಂದ್ರ ಅವರು ನಿಖಿಲ್ ಹೆಗಲ ಮೇಲೆ ಬಿಜೆಪಿ ಶಾಲು ನೋಡಿ ಏನೋ ತಮಾಷೆ ಮಾಡುತ್ತಾರೆ. ಅವರು ಹೇಳಿದ್ದು ಕೇಳಿಸುವುದಿಲ್ಲ. ಪ್ರತಿಯಾಗಿ ನಿಖಿಲ್ ಕೂಡ ಏನನ್ನೋ ಹೇಳಿದಾಗ ಇಬ್ಬರೂ ನಗುತ್ತಾರೆ.

ಬೆಂಗಳೂರು: ಬಿಜೆಪಿ ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಬಿಜೆಪಿ-ಜೆಡಿಎಸ್ ಆಂತರಿಕ ಸಮನ್ವಯ ಸಭೆಯಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿದರು. ನಗರ ಮತ್ತು ಚನ್ನಪಟ್ಟಣದಿಂದ ಆಗಮಿಸಿದ ಎರಡೂ ಪಕ್ಷಗಳ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡರು. ವೇದಿಕೆ ಮೇಲೆ ನಿಖಿಲ್ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಶಾಸಕ ಸಿಎನ್ ಅಶ್ವಥ್ ನಾರಾಯಣ ಹಾಗೂ ಬೇರೆ ಕೆಲ ನಾಯಕರು ಆಸೀನರಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕಾಂಗ್ರೆಸ್ ಭ್ರಷ್ಟರೆಲ್ಲರೂ ಸತೀಶ್ ಸೈಲ್ ಹಾದಿ ಹಿಂಬಾಲಿಸಬೇಕಾದ ಸ್ಥಿತಿ ಎದುರಾಗಲಿದೆ: ವಿಜಯೇಂದ್ರ