ಖಾದ್ರಿ ನಾಮಪತ್ರ ಹಿಂಪಡೆಯುವ ಬಗ್ಗೆ ಮಾಹಿತಿ ಇಲ್ಲ, 30ರವರೆಗೆ ಟೈಮಿದೆ: ಸತೀಶ್ ಜಾರಕಿಹೊಳಿ
ಹೊಂದಾಣಿಕೆಯ ಕೊರತೆಯಿಂದ ಕಳೆದ ಬಾರಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಸೋತರು, ಈ ಬಾರಿ ಕಾಂಗ್ರೆಸ್ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ, ಸಿಎ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಇತರ ಹಿರಿಯ ನಾಯಕರು ನವೆಂಬರ್ 5, 6 ಮತ್ತು 11ರಂದು ಪ್ರಚಾರಕ್ಕಾಗಿ ಶಿಗ್ಗಾವಿ ಬರಲಿದ್ದಾರೆ ಎಂದು ಜಾರಕಿಹೊಳಿ ಹೇಳಿದರು.
ಹಾವೇರಿ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಶಿಗ್ಗಾವಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಕುರಿತು ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾರಿಕೆಯ ಉತ್ತರ ನೀಡಿದರು. ಅವರ ಮನವೊಲಿಸಲು ಬೇರೊಂದು ಟೀಮ್ ಪ್ರಯತ್ನ ಮಾಡುತ್ತಿದೆ, ಅವರಿಂದ ಯಾವುದೇ ಮಾಹಿತಿ ತನಗೆ ಬಂದಿಲ್ಲ, ಅವಸರಿಸುವ ಅಗತ್ಯವೇನೂ ಇಲ್ಲ, ನಾಮಪತ್ರ ವಾಪಸ್ ಪಡೆಯಲು ಅಕ್ಟೋಬರ್ 30ರವರೆಗೆ ಕಾಲಾವಕಾಶವಿದೆ ಎಂದು ಜಾರಕಿಹೊಳಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಿಗ್ಗಾಂವಿ ಕಾಂಗ್ರೆಸ್ನಲ್ಲಿ ಅಸಮಾಧಾನ ಸ್ಪೋಟ: ನಾಯಕರ ವಿರುದ್ಧ ಒಳ ಒಪ್ಪಂದ ಆರೋಪ
Published on: Oct 26, 2024 05:16 PM
Latest Videos

