ರಾಯಚೂರಿನಲ್ಲಿ ಆಸ್ತಿಗಾಗಿ ನಡೀತಿದೆಯಾ ಮಕ್ಕಳ ಬಲಿ.. 4 ವರ್ಷದ ಬಳಿಕ ಮತ್ತೆ ಬಾಲಕರಿಬ್ಬರ ಶವ ಪತ್ತೆ, ಗ್ರಾಮಸ್ಥರಲ್ಲಿ ಆತಂಕ

|

Updated on: Mar 10, 2021 | 1:26 PM

ಇಬ್ಬರು ಬಾಲಕರ ಶವ ಬಾವಿಯಲ್ಲಿ ಪತ್ತೆಯಾಗಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ 4 ವರ್ಷಗಳ ಹಿಂದೆಯೂ ಬಾಲಕನ ಶವ ಇದೇ ರೀತಿ ಪತ್ತೆಯಾಗಿತ್ತು. ಹೀಗಾಗಿ ಇದರ ಹಿಂದೆ ಬೇರೆನೇ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ರಾಯಚೂರಿನಲ್ಲಿ ಆಸ್ತಿಗಾಗಿ ನಡೀತಿದೆಯಾ ಮಕ್ಕಳ ಬಲಿ.. 4 ವರ್ಷದ ಬಳಿಕ ಮತ್ತೆ ಬಾಲಕರಿಬ್ಬರ ಶವ ಪತ್ತೆ, ಗ್ರಾಮಸ್ಥರಲ್ಲಿ ಆತಂಕ
ವರುಣ ಮತ್ತು ಸಣ್ಣಯ್ಯ
Follow us on

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದ ಹಳ್ಳದಲ್ಲಿ ಮಾಜಿ ಶಾಸಕನ ಮೊಮ್ಮಕ್ಕಳಿಬ್ಬರ ಶವ ಪತ್ತೆಯಾದ ಕೇಸ್​ಗೆ ಸಂಬಂಧಿಸಿ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಇಬ್ಬರು ಬಾಲಕರ ಶವ ಬಾವಿಯಲ್ಲಿ ಪತ್ತೆಯಾಗಿರುವುದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ 4 ವರ್ಷಗಳ ಹಿಂದೆಯೂ ಬಾಲಕನ ಶವ ಇದೇ ರೀತಿ ಪತ್ತೆಯಾಗಿತ್ತು. ಹೀಗಾಗಿ ಇದರ ಹಿಂದೆ ಬೇರೆನೇ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬಲ್ಲಟಗಿಯಲ್ಲಿ ಮಕ್ಕಳ ಮಾರಣ ಹೋಮ ಮತ್ತೆ ಆರಂಭವಾಗಿದೆ ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ. ಇನ್ನು ಸಿರವಾರ ಪೊಲೀಸರ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಮಕ್ಕಳ ಮಾರಣ ಹೋಮದ ಹಿಂದಿರುವ ಅಸಲಿ ಸತ್ಯ ನಿಗೂಢವಾಗಿಯೇ ಉಳಿದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನಾಲ್ಕು ವರ್ಷದ ಹಿಂದೆ ನಡೆದಿತ್ತು ಬಾಲಕನ ನಿಗೂಢ ಸಾವು
2016ರಲ್ಲಿ ಅಂದ್ರೆ ನಾಲ್ಕು ವರ್ಷದ ಹಿಂದೆ ಇದೇ ಗ್ರಾಮದ ಹಳ್ಳದಲ್ಲಿ ಬಾಲಕ ರಮೇಶ್​ನ ಶವ ಪತ್ತೆಯಾಗಿತ್ತು. ಪತ್ತೆಯಾದ ಶವವನ್ನು ಕಂಡ ಮಂದಿ ಇದು ಆಸ್ತಿ, ಹಣ, ನಿಧಿಗಾಗಿ ನಡೆದಿರುವ ಬಲಿ ಎಂದು ಶಂಕಿಸಿದ್ದರು. ಮೃತ ಬಾಲಕನ ನಾಲಿಗೆ ಕತ್ತರಿಸಲಾಗಿತ್ತು. ಮುಖದ ಮೇಲಿನ ಗಲ್ಲಗಳನ್ನ ಕಟ್ ಮಾಡಿದ್ದರು. ಭೀಭತ್ಸವಾಗಿ ಬಾಲಕ ರಮೇಶ್​ನನ್ನ ಕೊಲೆ ಮಾಡಲಾಗಿತ್ತು. ಆದ್ರೆ ಈ ಘಟನೆ ನಡೆದು ನಾಲ್ಕು ವರ್ಷ ಕಳೆದ್ರೂ ಪೊಲೀಸರು ಮಾತ್ರ ಕೇಸ್ ದಾಖಲಿಸಿಕೊಂಡಿಲ್ಲ. ಹಾಗೂ ಈ ಬಗ್ಗೆ ತನಿಖೆ ನಡೆಸಲೂ ಸಹ ಮುಂದಾಗಿಲ್ಲ. ಬಾಲಕ ರಮೇಶನ ನಿಗೂಢ ಸಾವಿನ ರಹಸ್ಯ ಇಂದಿಗೂ ಬಹಿರಂಗವಾಗಿಲ್ಲ.

ಈಗ ಇದೇ ರೀತಿ ನಾಲ್ಕು ವರ್ಷಗಳ ಬಳಿಕ ಎರಡು ದಿನಗಳ ಹಿಂದಷ್ಟೇ ಮಾಜಿ ಶಾಸಕರ ಇಬ್ಬರು ಮೊಮ್ಮಕ್ಕಳ ಶವ ಗ್ರಾಮದ ಹಳ್ಳದಲ್ಲಿ ಪತ್ತೆಯಾಗಿದ್ದವು. ಮಾಜಿ ಶಾಸಕರ ಮೊಮ್ಮಕ್ಕಳ ಅನುಮಾನಸ್ಪದ ಸಾವಿನ ಬಗ್ಗೆ ಕೇಸ್ ದಾಖಲಾಗಿದೆ. ಸದ್ಯ ಪೊಲೀಸರು ಈ ಸಾವಿನ ಹಿಂದಿನ ರಹಸ್ಯ ಬೇಧಿಸುತ್ತಿದ್ದಾರೆ. ಆದ್ರೆ ಬಡವರ ಮಕ್ಕಳು ಸತ್ತರೆ ಕೇರ್ ಮಾಡದ ಪೊಲೀಸರು ಜನಪ್ರತಿನಿಧಿಗಳ ಮೊಮ್ಮಕ್ಕಳು ಸತ್ತರೆ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ನಾಲ್ಕು ವರ್ಷದ ಹಿಂದೆ ನಿಗೂಢವಾಗಿ ಮೃತಪಟ್ಟ ರಮೇಶ್ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ ಏನೇ ಇರಲಿ ಇದರ ಹಿಂದಿರುವ ನಿಗೂಢ ರಹಸ್ಯವನ್ನು ಪೊಲೀಸರು ಆದಷ್ಟು ಬೇಗ ಪತ್ತೆ ಹಚ್ಚಬೇಕಿದೆ.

ಇದನ್ನೂ ಓದಿ: ಬಲ್ಲಟಗಿ ಜಾತ್ರೆಯಲ್ಲಿ ಕಾಣೆಯಾಗಿದ್ದ ಮಾಜಿ ಶಾಸಕರ ಇಬ್ಬರು ಮೊಮ್ಮಕ್ಕಳು ಹಳ್ಳವೊಂದರಲ್ಲಿ ಶವವಾಗಿ ಪತ್ತೆ..