ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿಯಲ್ಲಿ ಗಲಾಟೆ ಕೇಸ್: ಪೊಲೀಸ್ ಗೋಲಿಬಾರ್​ಗೆ 3 ಬಲಿ, ನೂರಾರು ದುಷ್ಕರ್ಮಿಗಳು ಅರೆಸ್ಟ್

| Updated By: ಸಾಧು ಶ್ರೀನಾಥ್​

Updated on: Aug 12, 2020 | 12:39 PM

[lazy-load-videos-and-sticky-control id=”x_rD5TX8hoQ”] ಬೆಂಗಳೂರು: ನಿನ್ನೆ ತಡ ರಾತ್ರಿ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಕಾವಲ್ ಭೈರಸಂದ್ರದಲ್ಲಿ ನಡೆದ ಗಲಾಟೆಯಲ್ಲಿ ಮೂವರು ಬಲಿಯಾಗಿದ್ದಾರೆ. ಗಲಾಟೆ ತಡೆಯಲು ಪೊಲೀಸರು ಮಾಡಿದ ಫೈರಿಂಗ್‌ನಲ್ಲಿ ಮೂವರು ದುಷ್ಕರ್ಮಿಗಳು ಮೃತಪಟ್ಟಿದ್ದಾರೆ. ಇನ್ನು ಸಂಘರ್ಷದಲ್ಲಿ ಮೂವರು ಬಲಿಯಾದ್ರೆ. 10ಕ್ಕೂ ಹೆಚ್ಚು ದುಷ್ಕರ್ಮಿಗಳಿಗೆ ಗುಂಡೇಟು ತಗುಲಿದೆ. ಈ ಪೈಕಿ 6 ಜನರು ಆಸ್ಪತ್ರೆಯಿಂದ ಪರಾರಿಯಾಗಿರುವ ಮಾಹಿತಿ ಸಿಕ್ಕಿದೆ. ಇನ್ನೂ ಹಲವು ಗಲಭೆಕೋರರಿಗೆ ಗಾಯವಾಗಿರುವ ಶಂಕೆ ಕೂಡ ವ್ಯಕ್ತವಾಗಿದೆ. ಹಾಗೂ ಘಟನೆಯಲ್ಲಿ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. […]

ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿಯಲ್ಲಿ ಗಲಾಟೆ ಕೇಸ್: ಪೊಲೀಸ್ ಗೋಲಿಬಾರ್​ಗೆ 3 ಬಲಿ, ನೂರಾರು ದುಷ್ಕರ್ಮಿಗಳು ಅರೆಸ್ಟ್
Follow us on

[lazy-load-videos-and-sticky-control id=”x_rD5TX8hoQ”]

ಬೆಂಗಳೂರು: ನಿನ್ನೆ ತಡ ರಾತ್ರಿ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯ ಕಾವಲ್ ಭೈರಸಂದ್ರದಲ್ಲಿ ನಡೆದ ಗಲಾಟೆಯಲ್ಲಿ ಮೂವರು ಬಲಿಯಾಗಿದ್ದಾರೆ. ಗಲಾಟೆ ತಡೆಯಲು ಪೊಲೀಸರು ಮಾಡಿದ ಫೈರಿಂಗ್‌ನಲ್ಲಿ ಮೂವರು ದುಷ್ಕರ್ಮಿಗಳು ಮೃತಪಟ್ಟಿದ್ದಾರೆ.

ಇನ್ನು ಸಂಘರ್ಷದಲ್ಲಿ ಮೂವರು ಬಲಿಯಾದ್ರೆ. 10ಕ್ಕೂ ಹೆಚ್ಚು ದುಷ್ಕರ್ಮಿಗಳಿಗೆ ಗುಂಡೇಟು ತಗುಲಿದೆ. ಈ ಪೈಕಿ 6 ಜನರು ಆಸ್ಪತ್ರೆಯಿಂದ ಪರಾರಿಯಾಗಿರುವ ಮಾಹಿತಿ ಸಿಕ್ಕಿದೆ. ಇನ್ನೂ ಹಲವು ಗಲಭೆಕೋರರಿಗೆ ಗಾಯವಾಗಿರುವ ಶಂಕೆ ಕೂಡ ವ್ಯಕ್ತವಾಗಿದೆ. ಹಾಗೂ ಘಟನೆಯಲ್ಲಿ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಗಾಯಾಳು ಪೊಲೀಸರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನೂರಾರು ದುಷ್ಕರ್ಮಿಗಳು ಅರೆಸ್ಟ್
ಇನ್ನು ರಾತ್ರಿ ಪೂರ್ತಿ ನಡೆದ ಪೊಲೀಸರ ಕಾರ್ಯಚರಣೆಯಲ್ಲಿ ಗಲಾಟೆಯಲ್ಲಿ ಭಾಗಿಯಾಗಿದ್ದ ನೂರಕ್ಕೂ ಹೆಚ್ಚು ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಗರದ ಡಿಸಿಪಿಗಳಾದ ಶರಣಪ್ಪ. ಅನುಚೇತ್, ಭೀಮಾಶಂಕರ ಗುಳೇದ್, ದೇವರಾಜ, ರಾಹುಲ್ ಕುಮಾರ್ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ರವಿಕುಮಾರ್ ಮತ್ರು ಕುಲ್ ದೀಪ್ ಕುಮಾರ್ ಜೈನ್ ನೇತ್ರತ್ವದಲ್ಲಿ ರಾತ್ರಿ ಕಾರ್ಯಚರಣೆ ನಡೆಸಲಾಗಿತ್ತು.

ಗಲಾಟೆ ಮಾಡಿ ಕಲ್ಲು ತೂರಿ ಮನೆಯಲ್ಲಿದ್ದ ದುಶ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಬರೆಗೆ 110 ಜನರು ಅರೆಸ್ಟ್ ಆಗಿದ್ದಾರೆ. ಪೊಲೀಸರ ಕಾರ್ಯಚರಣೆ ಮುಂದುವರೆದಿದೆ.

ಇನ್ನು ಘಟನೆ ಸಂಬಂಧ ಕೆ.ಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಕೇಸ್​ಗಳನ್ನು ದಾಖಲಿಸಲಾಗಿದೆ. ಒಟ್ಟು 10ಕ್ಕೂ ಹೆಚ್ಚು ಎಫ್.ಐ.ಆರ್​ಗಳು ದಾಖಲಾಗಿವೆ. ಐಪಿಸಿ ಸೆಕ್ಷನ್ 307, 195, 120, 148, 149 ಹಾಗೂ ಎನ್‌ಡಿಎಂಎ ಕಾಯ್ದೆ ಅಡಿ FIR ದಾಖಲಾಗಿವೆ.

Published On - 6:45 am, Wed, 12 August 20