AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್​ ಹುಬ್ಳಿಯ್ಯಾಗ ಛೊಲೋ ರೈಲ್ವೆ ಮ್ಯೂಸಿಯಂ ಬಂದೈತ್ರೀ!

ಧಾರವಾಡ: ಭಾರತೀಯ ರೈಲು ಜನರಿಗೆ ದೇಶದ ಇತರೆ ಭಾಗಗಳಿಗೆ ಕೇವಲ ಸಂಪರ್ಕ ಕಲ್ಪಿಸುವ ಮಾಧ್ಯಮವಾಗದೆ ಭಾವನಾತ್ಮಕ ನಂಟನ್ನು ಸಹ ಹೊಂದಿದೆ. ಇದೀಗ, ಭಾರತೀಯ ರೈಲು ಸಾಗಿ ಬಂದಿರುವ ಹಾದಿಯನ್ನು ಉತ್ತರ ಕರ್ನಾಟಕದ ಮಂದಿಗೆ ತಿಳಿಸಿಕೊಡಲು ನೈರುತ್ಯ ರೈಲ್ವೇ ವಿಭಾಗವು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿನೂತನವಾದ ರೈಲು ಸಂಗ್ರಹಾಲವನ್ನ ಲೋಕಾರ್ಪಣೆ ಮಾಡಿದೆ. ರೈಲ್ವೇ ಇಲಾಖೆಯ ಐತಿಹ್ಯವನ್ನ ತಿಳಿಸೋ ಉದ್ದೇಶದಿಂದ ಈ ಮ್ಯೂಸಿಯಂ ನಿರ್ಮಾಣವಾಗಿದ್ದು ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್‌ರಿಂದ ಮೊನ್ನೆ ಆನ್​ಲೈನ್ ಮೂಲಕ ಉದ್ಘಾಟನೆಯಾಯಿತು. ಇದೀಗ ಸಂಗ್ರಹಾಲಯವು […]

ನಮ್​ ಹುಬ್ಳಿಯ್ಯಾಗ ಛೊಲೋ ರೈಲ್ವೆ ಮ್ಯೂಸಿಯಂ ಬಂದೈತ್ರೀ!
KUSHAL V
|

Updated on: Aug 11, 2020 | 7:41 PM

Share

ಧಾರವಾಡ: ಭಾರತೀಯ ರೈಲು ಜನರಿಗೆ ದೇಶದ ಇತರೆ ಭಾಗಗಳಿಗೆ ಕೇವಲ ಸಂಪರ್ಕ ಕಲ್ಪಿಸುವ ಮಾಧ್ಯಮವಾಗದೆ ಭಾವನಾತ್ಮಕ ನಂಟನ್ನು ಸಹ ಹೊಂದಿದೆ. ಇದೀಗ, ಭಾರತೀಯ ರೈಲು ಸಾಗಿ ಬಂದಿರುವ ಹಾದಿಯನ್ನು ಉತ್ತರ ಕರ್ನಾಟಕದ ಮಂದಿಗೆ ತಿಳಿಸಿಕೊಡಲು ನೈರುತ್ಯ ರೈಲ್ವೇ ವಿಭಾಗವು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿನೂತನವಾದ ರೈಲು ಸಂಗ್ರಹಾಲವನ್ನ ಲೋಕಾರ್ಪಣೆ ಮಾಡಿದೆ.

ರೈಲ್ವೇ ಇಲಾಖೆಯ ಐತಿಹ್ಯವನ್ನ ತಿಳಿಸೋ ಉದ್ದೇಶದಿಂದ ಈ ಮ್ಯೂಸಿಯಂ ನಿರ್ಮಾಣವಾಗಿದ್ದು ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್‌ರಿಂದ ಮೊನ್ನೆ ಆನ್​ಲೈನ್ ಮೂಲಕ ಉದ್ಘಾಟನೆಯಾಯಿತು. ಇದೀಗ ಸಂಗ್ರಹಾಲಯವು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ.

ನಗರದ ಗದಗ ರಸ್ತೆಯಲ್ಲಿ ನಿರ್ಮಾಣವಾಗಿರೋ ಈ ಸಂಗ್ರಹಾಲಯದಲ್ಲಿ ವಿವಿಧ ಪ್ರಕಾರದ ಎಂಜಿನ್​ಗಳು, ರೈಲು ಬೋಗಿಗಳನ್ನ ಪ್ರದರ್ಶನಕ್ಕೆ ಇಡಲಾಗಿದೆ. ಜೊತೆಗೆ, ರೈಲ್ವೇ ಇಲಾಖೆ ತನ್ನ ದೈನಂದಿನ ಚಟುವಟಿಕೆಗಳಲ್ಲಿ ಬಳಸುವ ಪರಿಕರ ಹಾಗೂ ಸಾಧನಗಳನ್ನೂ ಸಹ ಪ್ರದರ್ಶನಕ್ಕೆ ಇಟ್ಟಿದೆ.

ಸದ್ಯ ರಾಜ್ಯದ ಎರಡನೇ ಅತಿ ದೊಡ್ಡ ರೈಲ್ವೇ ಮ್ಯೂಸಿಯಂ ಆಗಿರುವ ಈ ಸಂಗ್ರಹಾಲಯವು ಭಾರತೀಯ ರೈಲ್ವೆ ಇಲಾಖೆಯ ಗತವೈಭವದ ಮೇಲೆ ಬೆಳಕು ಚೆಲ್ಲಲು ಸಜ್ಜಾಗಿದ್ದು ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

Follow Us
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್
11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್
ಗ್ಯಾಸ್​ ಇಲ್ಲದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ